ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸

  
*श्रियं विकर्षत्यपहन्त्यघानि श्रेय: परिस्नौति तनोति कीर्तिम् | संदर्शनं लोकगुरोरमोघं तवात्मयोनेरिव किं न धत्ते ||*

_ಧರ್ಮಜನ ಮಾತು. ವ್ಯಾಸರ ಆಗಮನ ಏನೆಲ್ಲಾ ತಂದಿತು ಎಂಬ ವಿವರಣೆ. ಮಹಾತ್ಮರ ಸಂದರ್ಶನ ಎಂದಿಗೂ ವ್ಯರ್ಥವಲ್ಲ. ಅದು ಯಾವ ಬಗೆಯಲ್ಲಾದರೂ ಸಾರ್ಥಕವಾಗುವುದು. ಪಡೆವ ಹಂಬಲ ಹಾಗೂ ಯೋಗ್ಯತೆ ನಮ್ಮಲ್ಲಿರಬೇಕು. ವ್ಯಾಸರಂತಹ ಮಹನೀಯರ ಈ ಭೇಟಿ ಏನನ್ನು ತಾನೇ ತರಲಾರದು! ಸಂಪತ್ತನ್ನು ಒದಗಿಸಿಕೊಡುತ್ತದೆ, ಪಾಪಗಳನ್ನು ತೊಲಗಿಸಿಬಿಡುತ್ತದೆ, ಕಲ್ಯಾಣವನ್ನು ಉಂಟುಮಾಡುತ್ತದೆ, ಯಶಸ್ಸನ್ನು ತಂದುಕೊಡುತ್ತದೆ. ಹೀಗೆ ಸಾಕ್ಷಾತ್ ಸೃಷ್ಟಿಕರ್ತನಾದ ಬ್ರಹ್ಮನ ದರ್ಶನದಂತೆ ನಿಮ್ಮ ದರ್ಶನವು ನನಗೆ ಎಲ್ಲವನ್ನೂ ಒದಗಿಸುವುದು. ನೀವು ಬಂದುದು ನನಗೆ ಮುಂದೆ ರಾಜ್ಯಲಕ್ಷ್ಮಿ ಪಡೆಯಲು ಸಹಕಾರಿ. ಹಾಗಾಗಿ ಸಂಪತ್ತಿಗೆ ಕಾರಣ. ಇಷ್ಟು ಕಾಲ ಮಾಡಿದ ಪಾಪಗಳು ನಿಮ್ಮ ದರ್ಶನದಿಂದಲೇ ಪರಿಹಾರವಾದವು. ಹಾಗಾಗಿ ನೀವು ಪಾಪನಾಶಕರು. ನಮ್ಮ ಈ ವನವಾಸದ ದುಃಖಮಯ ಜೀವನದಲ್ಲಿ ನೀವು ಬೆಳಕಿನಂತೆ ಬಂದು ನಮ್ಮ ಕಲ್ಯಾಣವನ್ನು ಕೋರುತ್ತಿರುವಿರಿ. ಮುಂದೆ ಯುದ್ಧಕ್ಕೆ ಹೋರಾಡುವ ಸಿದ್ಧತೆಯನ್ನು ಹೇಳಿಕೊಟ್ಟು ನಮ್ಮ ಕೀರ್ತಿಗೂ ಕಾರಣರಾಗುವಿರಿ. ಈ ಎಲ್ಲ ಕಾರಣಗಳಿಂದ ನಿಮ್ಮ ಸಂದರ್ಶನವು ಸಂಪೂರ್ಣವಾಗಿ ನನಗೆ ಉಪಕಾರಿಯಾಗಿದೆ. ಮಹಾತ್ಮರ ದರ್ಶನ ಆ ಕಾಲದಲ್ಲಿ ಅಲ್ಲದಿದ್ದರೂ, ಮುಂದೆ ನಮಗೆ ಒಳಿತನ್ನೇ ತರುತ್ತದೆ. ಅಂತಹ ಭೇಟಿ ಎಂದಿಗೂ ವ್ಯರ್ಥವಾಗದು. ಮುಕ್ತ ಮನಸ್ಸಿನಿಂದ ಹಾಗೂ ಗೌರವದಿಂದ ಅದನ್ನು ಸ್ವೀಕರಿಸುವ ಭಾವ ನಮ್ಮಲ್ಲಿರಬೇಕು._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩