ಸ್ವಪ್ನವಾಸವದತ್ತ ೪

🌼 ಸ್ವಪ್ನವಾಸವದತ್ತ ಎಸಳು-೪🌼

*प्रद्वेषो बहुमानो वा संकल्पादुपजायते । भर्तृदाराभिलाषित्वादस्यां मे महती स्वता ।।*

_ಯೌಗಂಧರಾಯಣನ ಮಾತು. ನಾವು ಒಬ್ಬರನ್ನು ದ್ವೇಷಿಸುವುದಾದರೂ ಅಥವಾ ಒಬ್ಬರನ್ನು ಬಹುವಾಗಿ ಮಾನಿಸುವುದಾದರೂ ಅದೆರಡಕ್ಕೂ ಮನದ ಸಂಕಲ್ಪವೇ ಕಾರಣ. ಮನದಲ್ಲಿ ಅವರ ಬಗೆಗೆ ಯಾವ ಭಾವನೆ ಹೊಂದಿರುತ್ತೇವೆಯೋ ಅದಕ್ಕನುಸಾರವಾಗಿ ನಮ್ಮ ಮಾತು-ಕೃತಿಗಳಲ್ಲಿ ಪ್ರೀತಿ ಅಥವಾ ದ್ವೇಷ ಕಂಡುಬರುತ್ತದೆ. ಮನಸ್ಸಿನ ಕರ್ಮವೇ ಸಂಕಲ್ಪವಾಗುವಂತಹದು. ಆ ಸಂಕಲ್ಪವು ನಮ್ಮ ವ್ಯವಹಾರದಲ್ಲಿ ಅಭಿವ್ಯಕ್ತವಾಗುತ್ತದೆ. ಯಾರ ಬಗೆಗೆ ನಾವು ಎಂತಹ ಭಾವ ಹೊಂದಿರುವೆವು ಅಂತಹ ಭಾವಾನುಸಾರಿ ನಡತೆಯೇ ಕಂಡುಬರುತ್ತದೆ. ಮನದ ಸಂಕಲ್ಪವೇ ಇದಕ್ಕೆ ಮುಖ್ಯ ಕಾರಣ. ಪ್ರಕೃತ ನಾನು ಈಕೆಯ ಬಗ್ಗೆ ತಾತ್ಸಾರ ತಾಳಿದ್ದೆ. ಋಷಿಗಳ ವೇಷದಲ್ಲಿರುವ ನಮ್ಮನ್ನು ಕಟು ಮಾತುಗಳಿಂದ ದೂರಸರಿಸುತ್ತಿರುವ ಸೇವಕರ ಒಡತಿ ಎಂಬ ಕಾರಣಕ್ಕೆ. ಅದೇ ಪದ್ಮಾವತಿಯ ಬಗ್ಗೆ ಈಗ ನನ್ನ ಭಾವನೆ ಕ್ಷಣದಲ್ಲಿ ಬದಲಾಯಿತು. ಅವಳ ಬಗೆಗೆ ಗೌರವ ಪ್ರೀತಿ ಎಲ್ಲವೂ ಉಂಟಾಯಿತು. ಏಕೆಂದರೆ ಇವಳು ಮುಂದೆ ನನ್ನೊಡೆಯನ‌ ಮನೆ ಸೇರುವವಳು ಎಂಬ ಭಾವದಿಂದ. ಒಡೆಯನ ಮಡದಿಯಾಗಿ ನನಗೆ ಒಡತಿಯಾಗುವಳೆಂಬ ಭಾವನೆ ಮನದಲ್ಲಿ ಮೂಡಿ ನನ್ನ ಹಿಂದಿನ ನಿಲುವು ಬದಲಾಗಿ ಪ್ರೀತಿ ಮೂಡಿದೆ. ನಮ್ಮ ಮನದ ಭಾವನೆಯೇ ವರ್ತನೆಯಲ್ಲಿ ಕಂಡುಬರುವುದೆಂಬ ಕವಿಯ ಆಶಯ ತುಂಬಾ ಮನಶ್ಶಾಸ್ತ್ರೀಯವಾಗಿದೆ. ನಾವು ತಟಸ್ಥ ಭಾವನೆ ಹೊಂದಿದ್ದರೆ ಮಾತ್ರ ಒಂದೇ ತರಹದ ವರ್ತನೆ ತೋರಲು ಸಾಧ್ಯ. ಇಲ್ಲದಿದ್ದರೆ ನಮ್ಮ ವರ್ತನೆಯೇ ಅಂದರೆ ಮಾತು-ಕೃತಿಗಳೇ ಭಾವವನ್ನೂ ಹೊರಗೆಡುತ್ತವೆ. ಹಾಗಾಗಿ ಇಂದ್ರಿಯಗಳನ್ನು ಅಥವಾ ಅಭ್ಯಾಸಗಳನ್ನು ನಿಯಂತ್ರಿಸುವ ಮೊದಲು ಮನದ ನಿಯಂತ್ರಣ ಅವಶ್ಯಕ. ಅದೇ ಎಲ್ಲವನ್ನೂ ನಿಯಂತ್ರಿಸುತ್ತದೆ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩