ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸

*प्रसादलक्ष्मीं दधतं समग्रां वपु:प्रकर्षेण जनातिगेन । प्रसह्य चेतस्सु समासजन्तम् असंस्तुतानामपि भावमार्द्रम् ।।*

_ಕವಿ ವ್ಯಾಸರನ್ನು ವರ್ಣಿಸುತ್ತಿದ್ದಾನೆ. ವ್ಯಾಸರ ಮೊಗ ಸಂಪೂರ್ಣವಾಗಿ ಪ್ರಸನ್ನತೆಯನ್ನು ಹೊಂದಿತ್ತು ಅಥವಾ ಸೌಮ್ಯವಾಗಿತ್ತು. ಅಲ್ಲಿ ಬೇಡವೆನಿಸುವ ಯಾವ ಭಾವಗಳೂ ಅಡಗಿರಲಿಲ್ಲ. ಅಷ್ಟಲ್ಲದೇ ಲೋಕದ ಸಾಮಾನ್ಯರನ್ನು ಮೀರಿಸುವ ಕಾಂತಿಯನ್ನು ಶರೀರ ಹೊಂದಿತ್ತು. ಬಣ್ಣ ಕಪ್ಪಾದರೂ ಶರೀರ ಕಾಂತಿ ಬಣ್ಣವನ್ನೇ ಮರೆಮಾಚಿ ಎಲ್ಲರನ್ನೂ ಕರೆಯುತ್ತಿತ್ತು. ಮನದಲ್ಲಿ ಸದಾ ಪರರ ಬಗೆಗೆ ಪ್ರೇಮಪೂರ್ಣ ಭಾವ ತುಂಬಿದ ಆ ವ್ಯಾಸರ ನೋಟವು ಅಪರಿಚಿತರ ಮನದಲ್ಲೂ ಗೌರವವನ್ನು ಹುಟ್ಟಿಸುತ್ತಿತ್ತು.ವ್ಯಾಸರ ವ್ಯಕ್ತಿತ್ವ ಅಂತಹ ಪ್ರಭಾವಶಾಲಿಯಾಗಿತ್ತು. ಮುಖದಲ್ಲಿ ಸೌಮ್ಯತೆ, ದೇಹದಲ್ಲಿ ಅಸಾಧಾರಣ ಕಾಂತಿ, ಮನದಲ್ಲಿ ಪ್ರೇಮಭಾವ ಇವುಗಳು ವ್ಯಾಸರ ಪರಿಚಯ ಇಲ್ಲದ ವ್ಯಕ್ತಿಗೂ ಅವರನ್ನು ಗೌರವಿಸಲು ಪ್ರಚೋದಿಸುತ್ತಿತ್ತು. ನಮ್ಮಲ್ಲೂ ಇಂತಹ ಭಾವನೆ ಇದ್ದಾಗ ಯಾರು ತಾನೇ ಗೌರವಿಸದೆ ಇರುತ್ತಾರೆ? ಮುಖದಲ್ಲಿ ಪ್ರಸನ್ನತೆ ಇಟ್ಟುಕೊಳ್ಳುವುದು ಬಹಳ ಕಷ್ಟ. ನಾವು ಏನನ್ನು ಯೋಚಿಸುತ್ತಿರುತ್ತೇವೆಯೋ ಅದೇ ಭಾವ ಮುಖದಲ್ಲೂ ಮೂಡುತ್ತದೆ. ಹಾಗಾಗಿ ಮನವು ಪ್ರಸನ್ನವಾಗಿದ್ದರೆ ಮೊಗವೂ ಪ್ರಸನ್ನವಾಗಿಯೇ  ಕಾಣುತ್ತದೆ. ಎಲ್ಲರ ಬಗೆಗೆ ಯಾವಾಗ ಪ್ರೀತಿಯನ್ನೇ ತೋರುವೆವೋ ಆಗ ನಮ್ಮ ಬಗೆಗೂ ಉಳಿದವರು ಅದನ್ನೇ ತೋರಿಸುತ್ತಾರೆ. ನಾವು ಏನನ್ನು ಪರರಿಗೆ ಕೊಡಬಲ್ಲೆವೋ ಅದನ್ನು ಮಾತ್ರ ಪಡೆಯಲೂ ಸಾಧ್ಯವಾಗುತ್ತದೆ. ವ್ಯಾಸರ ವಿಷಯದಲ್ಲಿ ಇದು ನೂರರಷ್ಟು ಸತ್ಯವಾಗಿತ್ತು. ಹಾಗಾಗಿಯೇ ಅವರ ವ್ಯಕ್ತಿತ್ವ ಅಷ್ಟು ವಿಸ್ತರಿಸಿತು._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩