ಸ್ವಪ್ನವಾಸವದತ್ತ ೩

🌼 ಸ್ವಪ್ನವಾಸವದತ್ತ ಎಸಳು-೩🌼

*पूर्वं त्वयाप्यभिमतं गतमेवमासीच्छ्लाघ्यं गमिष्यसि पुनर्विजयेन भर्तु: । कालक्रमेण जगत: परिवर्तमाना चक्रारपँक्तिरिव गच्छति भाग्यपँक्ति: ।।*

_ಈ ಶ್ಲೋಕದ ಕೊನೆಯ ಪಾದ ಪ್ರಸಿದ್ಧವಾದುದು. ಭಾಸನ ಈ ಶ್ಲೋಕವನ್ನು ಕಾಳಿದಾಸನದೆಂದು ಅಥವಾ ಇನ್ನಾರದೋ ಎಂದು ಅನೇಕರು ಉದಾಹರಿಸುತ್ತಾರೆ. ಆದರೆ ಕವಿಗಳಲ್ಲಿ ತುಂಬಾ ಪ್ರಾಚೀನ ಭಾಸ. ಹಾಗಾಗಿ ಅವನದೇ ನಾಟಕದ ಈ ಶ್ಲೋಕ ಬೇರೆಯವರು ಬರಿಯಲು ಸಾಧ್ಯವಿಲ್ಲ. ಯೌಗಂಧರಾಯಣನು ವಾಸವದತ್ತೆಗೆ ನುಡಿಯುವ ಮಾತಿದು. ಉದಯನ ಶತ್ರುವಿನ ಕೈಯಲ್ಲಿ ಪರಾಭವ ಹೊಂದಿ ಕಾಡುಪಾಲಾಗಿದ್ದಾನೆ. ತಪಸ್ವಿ ಜನರನ್ನು ರಾಜಭಟರು ಓಡಿಸುತ್ತಿದ್ದಾರೆ. ಮಂತ್ರಿ ಹಾಗೂ ಮಹಾರಾಣಿಯೂ ಬಹಳ ದಾರಿ ಕ್ರಮಸಿದ್ದಾರೆ. ಆಯಾಸವಾಯಿತೇ ಎಂದು ಮಂತ್ರಿ ಕೇಳಿದಾಗ ಆಯಾಸವು ದುಃಖ ಜನಕ ಆಗದೀಗ ಆದರೆ ಸೋಲು ಎನ್ನುವುದು ಬಹಳ ದುಃಖವನ್ನು ತಂದೊಡ್ಡುತ್ತಿದೆ ಎಂದಳು ವಾಸವದತ್ತೆ. ಆಗ ಮಂತ್ರಿ ಹೇಳುವ ಮಾತು. ಸೋಲು ಗೆಲುವು ಎಂದೂ ಸ್ಥಿರವಾದುದಲ್ಲ. ಹಿಂದೆ ಸಾಕಷ್ಟು ಸುಖವನ್ನು ಹಾಗೂ ಗೆಲುವನ್ನು ಅನುಭವಿಸಿ ನೀನು ಆಸ್ವಾದಿಸಿರುವೆ. ಮುಂದೆ ರಾಜನು ಗೆದ್ದಾಗ ಮತ್ತೆ ಗೆಲುವಿನ ಸವಿಯ ಸುಖವನ್ನು ಅನುಭವಿಸುವೆ. ಹಾಗಾಗಿ ಈಗ ಚಿಂತಿಸದೇ ಬಂದದ್ದನ್ನು ಸಂತೋಷದಿಂದಲೇ ಸ್ವೀಕರಿಸು. ಅದಕ್ಕಾಗಿ ಮರುಗದಿರು. ಜಗತ್ತು ಈಗ ಇದ್ದಂತೆ ಮುಂದೆ ಇರುವುದಿಲ್ಲ. ನಮ್ಮ ಪರಿಸ್ಥಿತಿಯೂ ಬದಲಾಗುತ್ತಲೇ ಇರುತ್ತದೆ. ಪರಿವರ್ತನೆ ಅನ್ನುವುದು ಜಗದ ನಿಯಮ. ಇಂದು ಅರಳಿದ ಭತ್ತದ ತೆನೆ ನಾಳೆ ಯಾವುದೋ ಯಂತ್ರಕ್ಕೆ ಸಿಲುಕಿ  ಸಾವನ್ನಪ್ಪುತ್ತದೆ. ಅದರಂತೆ ನಮ್ಮಯ ಅದೃಷ್ಟದ ದಿನಗಳೂ ಕೂಡ. ಚಕ್ರದ ತಿರುಗಣೆಯಂತೆ ಭಾಗ್ಯದ ತಿರುಗುವಿಕೆಯೂ ಇದೆ. ಈಗ ಬಹಳ ಮೇಲಿದ್ದ ವ್ಯಕ್ತಿ ನಾಳೆ ಕೆಳಗೆ ಬರಬಹುದು. ಈಗ ತುಂಬಾ ದುಃಸ್ಥಿತಿಯಲ್ಲಿರುವವನು ನಾಳೆ ಬಹಳ ಉನ್ನತಿಯನ್ನು ಪಡೆಯಬಹುದು. ಹಾಗಾಗಿ *ಇರುವ ಭಾಗ್ಯವ ನೆನೆದು* ಖುಷಿಪಡಬೇಕು ಹೊರತು ಅದಕ್ಕಾಗಿ ದುಃಖಿಸಬಾರದು. ಕಾಳಿದಾಸನೂ ಇಂತಹ ನುಡಿ ಹೇಳಿದ್ದಾನೆ- *ನೀಚೈರ್ಗಚ್ಛತ್ಯುಪರಿ ಚ ದಶಾ ಚಕ್ರನೇಮಿಕ್ರಮೇಣ* ಎಂಬುದಾಗಿ.ನಾವೂ ಕವಿವಾಣಿಯಂತೆ ಬಂದದ್ದನ್ನೆಲ್ಲ ಸ್ವೀಕರಿಸಿ ಸಂತೋಷ ಹೊಂದೋಣ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩