ರಾಮಾಯಣ ೫೦
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-೪೯
*ಮಿತ್ರಾಟವೀಬಲಂ ಚೈವ ಮೌಲಭೃತ್ಯಬಲಂ ತಥಾ ಸರ್ವಮೇತದ್ಬಲಂ ಗ್ರಾಹ್ಯಂ ವರ್ಜಯಿತ್ವಾ ದ್ವಿಷದ್ಬಲಮ್*
_ವಿಭೀಷಣ ನಾಲ್ವರು ಸಂಗಡಿಗರ ಜೊತೆಗೆ ಪತ್ನೀ ಪುತ್ರರನ್ನೂ ಬಿಟ್ಟು ರಾಮನಿಗೆ ಶರಣಾಗಿದ್ದಾನೆ. ಸುಗ್ರೀವ ಅವನ ಮಾತು ಕೇಳಿ ರಾಮನಿಗೆ ಶತ್ರುವಿನ ಬಗೆಗೆ ಎಚ್ಚರಿಸುತ್ತಿದ್ದಾನೆ. ಶತ್ರುಗಳ ಗುಪ್ತಚರನಿರಬೇಕು ಇವನು. ಇದನ್ನು ಕೇಳು- ಮಿತ್ರರಾಜರು ಕಳುಹಿಸಿದ ಸೈನ್ಯವನ್ನು ಸೇರಿಸಿಕೊಳ್ಳಬಹುದು. ಕಾಡುಜನರನ್ನು ಬೇಕಾದರೂ ಸೇರಿಸಿಕೊಳ್ಳಬಹುದು. ಅಥವಾ ಪರಂಪರಾಗತವಾದ ರೀತಿಯಲ್ಲಿ ವೇತನಗಳನ್ನು ಕೊಡುವುದರ ಮೂಲಕ ಸೈನ್ಯ ಸಂಗ್ರಹ ಮಾಡಬಹುದು. ಇವೆಲ್ಲವೂ ನಂಬಿಕೆಯ ವಿಧಾನಗಳು. ಆದರೆ ಶತ್ರುಗಳಿಗೆ ಸಂಬಂಧಿಸಿದ ಸೈನ್ಯವನ್ನು ಮಾತ್ರ ರಾಜನು ಪರಿಗ್ರಹಿಸಬಾರದು. ಇವರೆಲ್ಲರೂ ಶತ್ರುಪಕ್ಷದವರು. ಯಾವ ನಂಬಿಕೆಯ ಮೇಲೆ ಇವರನ್ನು ಸೈನ್ಯದೊಳಗೆ ಸೇರಿಸಿಕೊಳ್ಳಬಹುದು? ಹಾಗಾಗಿ ಇವರನ್ನು ಬಿಡುವುದೇ ಉತ್ತಮ._
*ಪ್ರಕೃತ್ಯಾ ರಾಕ್ಷಸೋ ಹ್ಯೇಷ ಭ್ರಾತಾಮಿತ್ರಸ್ಯ ವೈ ಪ್ರಭೋ ಆಗತಶ್ಚ ರಿಪೋಃ ಪಕ್ಷಾತ್ಕಥಮಸ್ಮಿನ್ಹಿ ವಿಶ್ವಸಿತ್*
_ರಾಘವ, ಹುಟ್ಟಿ ನಿಂದಲೇ ಇವನು ರಾಕ್ಷಸನು. ನಮ್ಮ ಶತ್ರುವಿನ ತಮ್ಮನೂ ಆಗಿದ್ದಾನೆ. ಶತ್ರುಪಕ್ಷದಿಂದಲೇ ಇಲ್ಲಿಗೆ ಬಂದಿದ್ದಾನೆ. ಇಮತಹವನ ಮೇಲೆ ವಿಶ್ವಾಸವನ್ನಿಡುವುದಾದರೂ ಹೇಗೆ ಸಾಧ್ಯ? ಈಗಿನ ಕಾಲಕ್ಕೆ ಈ ಶ್ಲೋಕ ತುಂಬಾ ಅನ್ವಯಿಸುತ್ತದೆ. ನಕ್ಸಲರನ್ನು ಉಗ್ರಗಾಮಿಗಳನ್ನು ಕೊಲೆಗಡುಕರನ್ನು ಅತ್ಯಾಚಾರಿಗಳನ್ನು ಭ್ರಷ್ಟತೆಯೇ ಮಂತ್ರವಾಗಿರುವವರನ್ನು ಮುಖ್ಯವಾಹಿನಿಯೊಳಗೆ ಹೇಗೆ ತಾನೇ ಸೇರಿಸಿಕೊಳ್ಳಬಹುದು? ಪರಿವರ್ತಿತರಂತೆ ಸೋಗು ಹಾಕುವ ಇವರನ್ನು ನಂಬುವುದಾದರೂ ಹೇಗೆ? ಅವರ ಅಕೃತ್ಯಗಳೇ ಅವರ ಸ್ವಭಾವವನ್ನು ಸ್ಪಷ್ಟಪಡಿಸುತ್ತವೆ. ಹಾಗಿರುವಾಗ ಅಂತಹವರು ಸಮಾಜದಲ್ಲಿ ಮತ್ತೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೆಟ್ಟ ಕೆಲಸದಲ್ಲಿ ಪಾಲ್ಗೊಳ್ಳಲಾರರೆಂದು ಹೇಗೆ ನಿರ್ಣಯಿಸುವುದು. ಅನುಕಂಪ ತೋರುವುದಾದರೂ ಸುಗ್ರೀವನ ಎಚ್ಚರಿಕೆಯನ್ನೊಮ್ಮೆ ಗಮನಿಸಿ ಮುಂದಡಿ ಇಡಬೇಕು. ಹೀಗೆ ಮಾಡಿದಾಗ ರಾಜನಿಗೂ ರಾಜ್ಯಕ್ಕೂ ಕ್ಷೇಮ._
📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ