ಪ್ರತಿಮಾ ನಾಟಕ

🌺 ಪ್ರತಿಮಾ ನಾಟಕದ ಒಂದು ಸುಮ 🌺

*पित्रा च बान्धवजनेन च विप्रयुक्तो दु:खं महत् समनुभूय वनप्रदेशे | भार्यावियोगमुपलभ्य पुनर्ममार्यो जीमूतचन्द्र इव खे प्रभया वियुक्त: ||*

_ಭರತ ರಾಮನ ಬಗೆಗೆ ದುಃಖಿಸುವ ಮಾತು. ಈ ನಮ್ಮ ಪೂಜ್ಯನಾದ ಅಣ್ಣ ಮೊದಲಿಗೆ ಅಪ್ಪನಿಂದ ದೂರ ಮಾಡಲ್ಪಟ್ಟ. ಅಪ್ಪ ಅವನಿಂದ ತುಂಬಾ ದೂರದ ಬಾರದ ಲೋಕಕ್ಕೆ ಪಯಣ ಬೆಳೆಸಿದ. ಅನಂತರ ಈ ವನದಲ್ಲಿ ಬಾರಿಬಾರಿಗೂ ಕಷ್ಟವನ್ನು ಉಣ್ಣುತ್ತಿದ್ದಾನೆ. ಈಗ ನೋಡಿದರೆ ಪತ್ನಿಯ ವಿರಹವೂ ಜೊತೆಯಾಗಿದೆ. ಈ ರಾಮನ ಸ್ಥಿತಿ ಮೋಡ ಮುಸುಕಿದ ಚಂದ್ರನಂತಾಗಿದೆ, ಅಥವಾ ಮಳೆಗಾಲದ ಚಂದ್ರನಂತಾಗಿದೆ. ಚಂದ್ರ ಮೋಡದ ತಡೆಯಿಲ್ಲದಿದ್ದಾಗ ಸಹಜವಾಗಿ ಪ್ರಕಾಶಿಸಿ ಎಲ್ಲರಿಗೂ ಆನಂದ ನೀಡುವನು. ಅದರಂತೆ ರಾಮನ ಪ್ರತಿಯೊಂದು ಕೃತ್ಯವೂ ಆನಂದಕರ. ಆದರೀಗ ಮೋಡವು ಚಂದ್ರನನ್ನು ಮರೆಮಾಚಿದಂತೆ ರಾಮನ ಬದುಕಿನಲ್ಲಿ ಕಷ್ಟಗಳೆಂಬ ಗಟ್ಟಿಯಾದ ಕಪ್ಪು ಮೋಡಗಳು ಆವರಿಸಿ ಅವನ ಪರಿಸ್ಥಿತಿ ಶೋಚನೀಯವಾಗಿದೆ. ಇದು ಮಳೆ ಬಂದು ಹೋಗುವ ಸ್ವಲ್ಪ ಕಾಲ ಮಾತ್ರ ಎಂಬ ಧ್ವನಿಯೂ ಅಡಗಿದೆ. ರಾಮನ ಬದುಕಿನಲ್ಲಿ ಈಗ ಮುಸುಕಿರುವ ಕಾರ್ಮೋಡ ಮುಂದೆ ಸರಿದು ಅವನ ಪ್ರಕಾಶ ಜಗಕ್ಕೇ ತಿಳಿವುದು ಎಂಬ ಭಾವವೂ ಅಡಗಿದೆ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩