ರಾಮಾಯಣ ೪೫

📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-೪೫

*ಯಃ ಖಲ್ವಪಿ ವನಂ ಪ್ರಾಪ್ಯ ಮೃಗವ್ಯಾಲಸಮಾಕುಲಮ್ ನ ಪಿಬೇನ್ಮಧು ಸಂಪ್ರಾಪ್ತಂ ಸ ನರೋ ಬಾಲಿಶೋ ಭವೇತ್*

_ಕುಂಭಕರ್ಣನ ಮಾತಿನಿಂದ ರಾವಣ ಕೋಪಗೊಳ್ಳುವನು. ಅವನನ್ನು ಸಮಾಧಾನ ಮಾಡಲೆಂದು ಮಂತ್ರಿಯಾದ ಮಹಾಪಾರ್ಶ್ವನು ಹೇಳುವ ಮಾತು. ರಾವಣ ನೀನು ಮಾಡಿದ್ದು ಸರಿಯೇ ಇದೆ. ಹಿಂಸ್ರಮೃಗಗಳಿಂದಲೂ ಸರ್ಪಗಳಿಂದಲೂ ಕೂಡಿರುವ ದುರ್ಗಮವಾದ ಕಾಡಿಗೆ ಹೋಗಿ ಅಲ್ಲಿ ಕುಡಿಯಲು ಯೋಗ್ಯವಾದ ಜೇನನ್ನು ಕುಡಿಯದೇ ಯಾರು ಸುಮ್ಮನಿರುವರೋ ಅವರು ಮೂರ್ಖರೆನಿಸುತ್ತಾರೆ. ಸೀತೆ ಕಾಡಿನ ಜೇನಿನಂತೆ ಸಿಹಿಯಾದವಳು. ಅವಳನ್ನು ಬಲಿಷ್ಠನಾದ ನೀನು ಹೊತ್ತೊಯ್ದು ಸುಖವನ್ನು ಬಯಸುವುದು ಸಹಜವೇ ಆಗಿದೆ. ರಾಕ್ಷಸೀ ಪ್ರವೃತ್ತಿಗೆ ಉತ್ತಮ ನಿದರ್ಶನ ಮಹಾಪಾರ್ಶ್ವನ ಈ ಮಾತು._

*ಬಲಾತ್ಕುಕ್ಕುಟವೃತ್ತೇನ ವರ್ತಸ್ವ ಸುಮಹಾಬಲ ಆಕ್ರಮ್ಯ ಸೀತಾಂ ತಥಾ ಭುಂಕ್ಷ್ವ ರಮಸ್ವ ಚ*

_ರಾಜನೇ, ನೀನು ಸೀತೆಯ ವಿಷಯದಲ್ಲಿ ಕೋಳಿಯಂತೆ ವ್ಯವಹರಿಸು. ಬಲಾತ್ಕಾರವಾಗಿ ಅವಳನ್ನು ಆಕ್ರಮಿಸು, ಉಪಭೋಗಿಸು, ಕ್ರೀಡಿಸು. ಎಲ್ಲರೂ ಪ್ರಾಣಿಗಳ ಉತ್ತಮ ಗುಣಗಳನ್ನು ಆದರ್ಶವಾಗಿ ಇಟ್ಟುಕೊಂಡರೆ ಈ ಮಂತ್ರಿಯು ಕೆಟ್ಟ ಗುಣಗಳನ್ನೇ ಆದರ್ಶವಾಗಿ ತೆಗೆದುಕೊಳ್ಳುವನು. ಇದೇ ರಾಕ್ಷಸತ್ವ. ಹೆಣ್ಣು ಕೋಳಿ ಗಂಡಿನ ಜೊತೆಗೆ ಸಮಾಗಮ ಕಾಲದಲ್ಲಿ ಕೋಪಗೊಳ್ಳುವುದು. ಹಾಗಿದ್ದರೂ ಗಂಡುಕೋಳಿ ಅಂತಹ ಸಮಾಗಮದಿಂದ ಖುಷಿಪಡುವುದು. ಇದಕ್ಕೆ ಕುಕ್ಕುಟವೃತ್ತಿ ಎಂಬ ಹೆಸರು ಖ್ಯಾತವಾದುದು. ನೀನು ಸೀತೆ ಕೊಪಗೊಂಡರೂ ಅವಳೊಡನೆ ರಮಿಸು ಕೋಳಿಯಂತೆ ಎನ್ನುವುದು ಅವನ ಉಪದೇಶ. ಹಾಗೆ ಮಾಡಿದರೆ ಪ್ರಾಣಿಗಳಿಗೂ ಮನುಷ್ಯನಿಗೂ ವ್ಯತ್ಯಾಸವಿರುವುದಿಲ್ಲ. ಇಂತಹ ಮೃಗೀಯ ವರ್ತನೆಯನ್ನೇ ರಾಕ್ಷಸತ್ವ ಎನ್ನುವುದು._

📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩