ರಾಮಾಯಣ ೪೭
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-೪೭
*ವಸೇತ್ಸಹ ಸಪತ್ನೇನ ಕ್ರುದ್ಧೇನಾಶೀವಿಷೇಣ ವಾ ನ ತು ಮಿತ್ರಪ್ರವಾದೇನ ಸಂವಸೇಚ್ಛತ್ರುಸೇವಿನಾ*
_ವಿಭೀಷಣನು ಉತ್ತಮ ಸಲಹೆಗಳನ್ನು ನೀಡಿ ಸೀತೆಯನ್ನು ಹಿಂತಿರುಗಿಸಿ ಪ್ರಾಣ ಉಳಿಸಿಕೊ ಎಂದು ರಾವಣನಿಗೆ ಉಪದೇಶಿಸಿದನು. ಆದರೆ ರಾವಣ ಅದನ್ನು ತಿರಸ್ಕರಿಸಿ ಈ ಮಾತನ್ನು ಹೇಳುತ್ತಿದ್ದಾನೆ. ಶತ್ರುವಿನ ಜೊತೆ ಬೇಕಾದರೆ ವಾಸಿಸಬಹುದು. ಕೋಪಗೊಂಡಿರುವ ವಿಷಸರ್ಪದೊಡನೆ ಬೇಕಾದರೂ ಹೇಗಾದರೂ ಜೊತೆಯಲ್ಲಿ ಇರಬಹುದು. ಆದರೆ ಮಿತ್ರನೆಂದು ಹೇಳಿಕೊಂಡು ಶತ್ರುವಿನ ಸೇವೆ ಮಾಡುವವನ ಜೊತೆ ಖಂಡಿತ ಇರಬಾರದು. ಕೃತಘ್ನರು ಅಥವಾ ಮಿತ್ರದ್ರೋಹಿಗಳು ಇಂತಹ ಜನರೇ. ನಮ್ಮ ದೈನಂದಿನ ಬದುಕಿನಲ್ಲೂ ಇಂತಹ ಅನೇಕ ಜನರು ನಂಬಿಕೆಯ ಸೋಗಿನಲ್ಲಿ ಗೆಳೆತನದ ಹೆಸರಿನಲ್ಲಿ ಬಂಧುತ್ವದ ಮುಖವಾಡದಲ್ಲಿ ನಮ್ಮೊಡನೆಯೇ ಇದ್ದು ನಮಗೇ ಚೂರಿ ಹಾಕುತ್ತಿರುತ್ತಾರೆ. ಯಾರನ್ನು ಆಪ್ತರೆಂದುಕೊಂಡಿರುವೆವೋ ಅವರೇ ಹೀಗೆ ಮಾಡಿದರೆಂದು ತಿಳಿದಾಗ ಆಗುವ ಬೇಸರ ಹೇಳತೀರದು. ವಿಷಸರ್ಪವಾದರೂ ಸಹಿಸಲು ಸಾಧ್ಯ. ಇಂತಹ ವ್ಯಕ್ತಿಗಳಲ್ಲ._
📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ