ಕಿರಾತಾರ್ಜುನೀಯದ ಒಂದು ಸಾಯಕ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸

*प्रलीनभूपालमपि स्थिरायति प्रशासदावारिधिमण्डलं भुव: | स चिन्तयत्येव भियस्त्वदेष्यतीरहो दुरन्ता बलवद्विरोधिता ||*

_ಚಾರನ ಮಾತು ಮುಂದುವರೆಯುತ್ತಿದೆ. ದುರ್ಯೋಧನ ಶತ್ರುಗಳು ತನ್ನ ತಂಟೆಗೆ ಬರದಂತೆ ಬಿಗಿಯಾದ ಆಡಳಿತ ನಡೆಸುತ್ತಿರುವನು. ತನ್ನ ಉಪಕಾರಿ ಕಾರ್ಯಗಳಿಂದಲೇ ಜನರ ಪ್ರೀತಿ ಸಂಪಾದಿಸಿದ್ದಾನೆ. ಯಾರಲ್ಲೂ ವೈರವನ್ನು ಅಥವಾ ಕೋಪವನ್ನು ತೋರಿಸದೆ ಸಂಯಮದಿಂದಿರುವನು. ಹೀಗೆ ಯಾವೊಂದು ಕಂಟಕವಿಲ್ಲದೆ ಸಮುದ್ರದಿಂದ ಸುತ್ತುವರಿಯಲ್ಪಟ್ಟ ಈ ಭೂಮಿಯನ್ನು ಸುಖವಾಗಿ ಆಳುತ್ತಿದ್ದರೂ ನಿನ್ನ ಬಗೆಗೆ ಅವನ ಮನವು ಭಯಪಡುತ್ತಿದೆ. ಏಕೆಂದರೆ ಬಲಿಷ್ಠರ ವೈರವು ಬಲುಕಷ್ಟ. ಅಲ್ಪರ ವೈರವನ್ನು ಕಡೆಗಣಿಸಿ ಹೇಗಾದರೂ ಇರಬಹುದು. ಆದರೆ ನಮಗಿಂತ ಬಲಿಷ್ಠರ ವೈರವು ಎಂದಾದರೊಂದು ದಿನ ಆಪತ್ತು ತರಬಲ್ಲದು. ಈಗ ರಾಜನಾದ ಕಾರಣ ಮೆರೆಯುತ್ತಿದ್ದರೂ ಬಲಿಷ್ಠನಾದ ನೀನು ತಮ್ಮಂದಿರೊಡಗೂಡಿ ಮತ್ತೆ ರಾಜ್ಯ ಪಡೆಯಲು ಪ್ರಯತ್ನಿಸಬಹುದು. ಹಾಗಾಗಿಯೇ ಅವನಿಗೆ ನಿನ್ನ ಮೇಲೆ ಸಂಶಯ. ನಾವೂ ದುರ್ಯೋಧನನಂತೆ ಬಲಿಷ್ಠರ ವೈರವನ್ನು ಎಂದಿಗೂ ಮಾಡಬಾರದು. ಹಾಗೆ ಮಾಡಿದರೆ ಹೆದರಿ ಬದುಕುವ ಜೀವನ ನಮ್ಮದಾಗುವುದು. ವೈರ ಮಾಡಿಕೊಳ್ಳದಿರುವುದೇ ವರ ಅಲ್ಲವೇ_

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩