ಧರ್ಮಾಚರಣೆ ೬೪
ಧರ್ಮಾಚರಣೆ-೬೪
ಶಿರಃ ಪ್ರಾವೃತ್ಯ ಕಂಠಂ ವಾ ಮುಕ್ತಕಚ್ಛಶಿಖೋಪಿ ವಾ | ವಿನಾ ಯಜ್ಞೋಪವೀತೇನ ಆಚಾಂತೋಪಿ ಅಶುಚಿರ್ಭವೇತ್ || ಪರಾಶರ ಸ್ಮೃತಿ||
ತಲೆಗೆ ಮುಂಡಾಸು ಅಥವಾ ರುಮಾಲು ಅಥವಾ ಟೊಪ್ಪಿ ಹಾಕಿಕೊಂಡು ಆಚಮನ ಮಾಡಿದರೆ ಪ್ರಯೋಜನವಿಲ್ಲ. ಗೃಹಸ್ಥನಾದರೆ ಕಚ್ಚೆ ಹಾಕಿಕೊಂಡೇ ಆಚಮನ ಮಾಡಬೇಕು. ಕಚ್ಚೆ ಬಿಚ್ಚಿದ್ದು ಆಚಮನ ಮಾಡಿದರೆ ನಿಷ್ಫಲ. ಬ್ರಹ್ಮಚಾರಿಯು ಕಚ್ಚೆ ಹಾಕುವುದೇ ನಿಷಿದ್ಧ. ಅಚಮನ ಮಾಡುವ ಮುನ್ನ ಶಿಖೆ ಬಂಧಿಸಿ ಮಾಡಬೇಕು. ಶಿಖೆಯ ಕೂದಲು ಬಿಟ್ಟುಕೊಂಡು ಮಾಡಿದರೆ ಅಪ್ರಯೋಜಕ. ಇನ್ನು ಉಪನೀತನಾದವರು ಉಪವೀತ ಸದಾ ಧರಿಸಬೇಕು. ಹಾಗಲ್ಲದೆ ಅಂದರೆ ಉಪವೀತ ಧರಿಸದೇ ಮಾಡಿದ ಆಚಮನ ನಿಷ್ಫಲ. ಅಚಮನ ಮಾಡುವ ಮುನ್ನ ಈ ಎಲ್ಲಾ ಅಂಶಗಳ ಕಡೆಗೆ ಗಮನ ಕೊಟ್ಟಾಗ ಮಾತ್ರ ಅದರ ಫಲ ಸಿಗುವುದು. ಇಲ್ಲದಿದ್ದರೆ ಕೇವಲ ನೀರು ಕುಡಿದಂತೆ ಮಾತ್ರ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ