ಧರ್ಮಾಚರಣೆ ೬೬
ಧರ್ಮಾಚರಣೆ-೬೬
ಖಲೇ ಯಜ್ಞೇ ವಿವಾಹೇ ಚ ಸಂಕ್ರಾಂತೌ ಗ್ರಹಣೇ ತಥಾ | ಶರ್ವರ್ಯಾಂ ದಾನಮಸ್ತ್ಯೇವ ನಾನ್ಯತ್ರ ತು ವಿಧೀಯತೇ ||
ಪುತ್ರಜನ್ಮನಿ ಯಜ್ಞೇ ಚ ತಥಾ ಚಾತ್ಯಯಕರ್ಮಣಿ | ರಾಹೋಶ್ಚ ದರ್ಶನೇ ದಾನಂ ಪ್ರಶಸ್ತಂ ನಾನ್ಯಥಾ ನಿಶಿ ||ಪರಾಶರ ಸ್ಮೃತಿ||
ಧಾನ್ಯಗಳನ್ನು ಕುಟ್ಟುವ ಕಾಲ, ಶ್ರೌತ ಯಾಗದ ಕಾಲ ( ಅಹೋರಾತ್ರಿ ನಡೆಯುವ ಅನೇಕ ಶ್ರೌತಯಜ್ಞ ಇವೆ.) ಮದುವೆಯ ಕಾಲದಲ್ಲಿ, ಸಂಕ್ರಾಂತಿಯ ಕಾಲದಲ್ಲಿ, ಗ್ರಹಣ ಕಾಲದಲ್ಲಿ, ಮಕ್ಕಳು ಹುಟ್ಟಿದ ಕಾಲದಲ್ಲಿ, ಆಪತ್ತಿನ ಅಥವಾ ಸಾವಿನ ಸಂದರ್ಭದಲ್ಲಿ ಮಾತ್ರ ರಾತ್ರಿ ದಾನವು ವಿಹಿತ. ಧಾನ್ಯಗಳಿಂದ ಹೊಟ್ಟು ಬೇರ್ಪಡಿಸುವ ಮುನ್ನ ದಾನ ಕೊಡುವ ಪದ್ಧತಿ ಇದೆ. ಯಜ್ಞಗಳಲ್ಲಿ ಸಹಜವಾಗಿ ಇದೆ. ಗೋಧೂಳೀ ಮುಹೂರ್ತದ ವಿವಾಹವಾದರೆ ರಾತ್ರಿ ಕನ್ಯಾದಾನವು ವೇಳೆ ವಿಹಿತ. ಸೂರ್ಯನ ಅನ್ಯರಾಶಿ ಪ್ರವೇಶ ರಾತ್ರಿ ಸಮಯದಲ್ಲಾದರೆ ಆಗಲೇ ದಾನವು ವಿಹಿತ. ಚಂದ್ರಗ್ರಹಣ ಕಾಲದಲ್ಲಿ ದಾನ ಅತ್ಯಂತ ಶ್ರೇಷ್ಠ. ಮಕ್ಕಳು ಹುಟ್ಟಿದ ಕೂಡಲೇ ಯೋಗ್ಯರಿಗೆ ದಾನ ಮಾಡುವುದು ವಿಹಿತ. ಯಾರೋ ಒಬ್ಬರ ಸಾವು ಸಮೀಪಿಸಿದೆ, ಅವರ ಮನದ ಬಯಕೆಯಂತೆ ಹೊತ್ತು ನೋಡದೇ ಕೂಡಲೇ ದಾನ ಮಾಡಬೇಕು. ಅಂತೆಯೇ ಸತ್ತ ಕೂಡಲೇ ಮಾಡುವ ಉದಕುಂಭ ಮೊದಲಾದ ದಾನಗಳು ರಾತ್ರಿಯಾದರೂ ಪ್ರಶಸ್ತ. ಈ ಸಂದರ್ಭಗಳಲ್ಲಿ ಬಿಟ್ಟು ಉಳಿದಂತೆ ರಾತ್ರಿ ದಾನ ಸರಿಯಲ್ಲ. ಅನ್ನವಿರಲಿ- ವಿದ್ಯೆಯಿರಲಿ, ಧನವಿರಲಿ- ಸನ್ಮಾನವಿರಲಿ ಹಗಲು ನೀಡುವುದು ಉತ್ತಮ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ