ಧರ್ಮಾಚರಣೆ ೬೨
ಧರ್ಮಾಚರಣೆ-೬೧
ಸ್ನಾನಾನಿ ಪಂಚಪುಣ್ಯಾನಿ ಕೀರ್ತಿತಾನಿ ಮನೀಷಿಭಿಃ | ಆಗ್ನೇಯಂ ವಾರುಣಂ ಬ್ರಾಹ್ಮಂ ವಾಯವ್ಯಂ ದಿವ್ಯಮೇವ ಚ|| ಪರಾಶರ ಸ್ಮೃತಿ||
ಐದು ಬಗೆಯ ಸ್ನಾನಗಳು ಮಾನವನಿಗೆ ವಿಹಿತವಾಗಿವೆ. ಇಡೀ ಮೈಗೆ ಮಂತ್ರ ಅಥವಾ ದೇವರ ನಾಮ ಉಚ್ಚರಿಸುತ್ತಾ ಗೋಮಯದ ಅಥವಾ ಹೋಮದ ಭಸ್ಮವನ್ನು ಹಚ್ಚಿಕೊಳ್ಳುವುದು ಆಗ್ನೇಯ ಸ್ನಾನ. ನದಿ ಅಥವಾ ತೀರ್ಥಗಳ ನೀರಲ್ಲಿ ಇಡೀ ಮುಳುಗೇಳುವುದು ವಾರುಣ. ಆಪೋಹಿಷ್ಠಾ ಮೊದಲಾದ ಮಂತ್ರಗಳಿಂದ ನೀರನ್ನು ಪ್ರೋಕ್ಷಿಸಿಕೊಳ್ಳುವುದು ಬ್ರಾಹ್ಮ. ದನದ ಕೊಟ್ಟಿಗೆಯಲ್ಲಿ ದೀರ್ಘಕಾಲ ಕೆಲಸ ಮಾಡುತ್ತಾ ಅಥವಾ ದನದ ಜೊತೆಗೆ ಅಡ್ಡಾಡುತ್ತಾ ಅದರ ಧೂಳಿ ತಾಗಿದರೆ ಅದು ವಾಯವ್ಯ. ಬಿಸಿಲು ಅಥವಾ ಮಳೆಯಲ್ಲಿ ಸಂಪೂರ್ಣ ದೇಹವನ್ನು ತೋಯಿಸಿದರೆ ಅದು ದಿವ್ಯ. ಈ ಸ್ನಾನಗಳು ಗಂಗಾಸ್ನಾನದ ಫಲವನ್ನು ಶ್ರದ್ಧೆಯಿಂದ ಮಾಡಿದಾಗ ಕೊಡುತ್ತವೆ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ