ಧರ್ಮಾಚರಣೆ ೬೧

ಧರ್ಮಾಚರಣೆ- ೬೧

ದುಸ್ವಪ್ನಂ ಯದಿ ಪಶ್ಯೇತ್ತು ವಾಂತೇ ಚ ಕ್ಷುರಕರ್ಮಣಿ | ಮೈಥುನೇ ಪ್ರೇತಧೂಮೇ ಚ ಸ್ನಾನಮೇವ ವಿಧೀಯತೇ || ಪರಾಶರ ಸ್ಮೃತಿ||

ರಾತ್ರಿ ಅಥವಾ ಹಗಲಿನ ನಿದ್ರೆಯಲ್ಲಿ ಕೆಟ್ಟ ಕನಸನ್ನು ಕಂಡಾಗ, ತಿಂದ ಆಹಾರ ವಾಂತಿಯ ರೂಪದಲ್ಲಿ ಹೊರ ಬಂದಾಗ, ದೇಹದ ಕೇಶಗಳನ್ನು ಕತ್ತರಿಸಿದಾಗ , ಸ್ತ್ರೀ ಸಂಗ/ ಪುರುಷ ಸಂಗ ಮಾಡಿದಾಗ, ಸ್ಮಶಾನದಲ್ಲಿ ಶವಸುಟ್ಟ ಹೊಗೆ ತಾಕಿದಾಗ ಕೂಡಲೇ ಸ್ನಾನದಿಂದ ಶುದ್ಧರಾಗುತ್ತೇವೆ. ಕೆಟ್ಟ ಕನಸಿನ ಪರಿಣಾಮ ಮನಸ್ಸಿನ ಮೇಲೆ ಗಾಢವಾಗಿ ಬಹುಕಾಲ ಇರುತ್ತದೆ. ಅದು ಕೂಡಲೇ ಮಾಡುವ ಸ್ನಾನ ಪೂಜಾದಿಗಳಿಂದ ಅಲ್ಪವಾದರೂ ಮರೆಯಾಗುತ್ತದೆ. ಆಹಾರವು ಅಜೀರ್ಣಾದಿಗಳಿಂದ ವಾಂತಿಯಾದಾಗ ಮೈಯೆಲ್ಲ ಒಂದು ತರಹ ಕಲ್ಮಶದಿಂದ ಕೂಡಿರುವಂತೆ ಭಾಸವಾಗುತ್ತದೆ. ಅಂತಹ ಸಮಯದ ಸ್ನಾನವು ದೇಹಕ್ಕೆ ಒಂದು ಸಮಾಧಾನವನ್ನು ನೀಡುತ್ತದೆ. ಮುಖಕ್ಷೌರ ಇರಲಿ ಶಿರಕ್ಷೌರ ಇರಲಿ ಎಷ್ಟು ಶುದ್ಧ ಮಾಡಿದರೂ ಒಂದೊಂದು ಕೂದಲು ಅಥವಾ ಅವರು ಹಚ್ಚಿದ ಅವಲೇಪಗಳು ಉಳಿದಿರುತ್ತವೆ. ಅಂತಹ ಸಮಯದಲ್ಲಿ ಪೂರ್ಣಶುದ್ಧಿಗೆ ಸ್ನಾನ ಅಗತ್ಯ. ರತಿಯ ಕಾಲದಲ್ಲಿ ದೇಹಕ್ಕೆ ವಸ್ತ್ರಗಳಿಗೆ ಉಂಟಾದ ಕೊಳೆಯ ನಿರ್ಮೂಲಕ್ಕೆ ಸ್ನಾನವು ಎಲ್ಲಾ ರೀತಿಯಿಂದಲೂ ಉತ್ತಮ. ಪ್ರೇತಧೂಮವು ನಮ್ಮ ಮನದ ಮೇಲೆ ಪರಿಣಾಮ ಬೀರಿ ಇನ್ನಷ್ಟು ಜಡತನ ಅಥವಾ ದುಃಖ ಹೇತುವಾಗುತ್ತದೆ. ಹಾಗಾಗಿ ಅಂತಹ ಸಂದರ್ಭದ ಸ್ನಾನವು ಉಲ್ಲಾಸವನ್ನು ನೀಡುತ್ತದೆ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩