ಧರ್ಮಾಚರಣೆ ೫೮
ಧರ್ಮಾಚರಣೆ - ೫೮
ಕ್ಷತ್ರಿಯಶ್ಚಾಪಿ ವೈಶ್ಯಶ್ಚ ಕ್ರಿಯಾವಂತೌ ಶುಚಿವ್ರತೌ | ತದ್ಗೃಹೇ ತು ದ್ವಿಜೈರ್ಭೋಜ್ಯಂ ಹವ್ಯಕವ್ಯೇಷು ನಿತ್ಯಶಃ || ಪರಾಶರ ಸ್ಮೃತಿ||
ಕ್ಷತ್ರಿಯ ಅಥವಾ ವೈಶ್ಯರು ಶ್ರೌತಸ್ಮಾರ್ತ ಕರ್ಮಗಳನ್ನು ಆಚರಿಸುತ್ತಾ ಅಂದರೆ ಸಂಧ್ಯಾವಂದನೆ- ದೇವಪೂಜೆ- ಅಗ್ನಿ ಆರಾಧನೆ-ಅತಿಥಿ ಸತ್ಕಾರ- ಧರ್ಮಾಚರಣೆ ಮೊದಲಾದವುಗಳನ್ನು ನಿಷ್ಠೆಯಿಂದ ಮಾಡುತ್ತಿದ್ದರೆ ದೇವತಾಕಾರ್ಯ ಹಾಗೂ ಪಿತೃಕಾರ್ಯಗಳು ನಡೆಯುವ ದಿನಗಳಲ್ಲಿ ಅಲ್ಲಿ ವಿಪ್ರರು ಉಣ್ಣುವುದಕ್ಕೆ ನಿಷೇಧ ಇಲ್ಲ. ಇವುಗಳನ್ನು ಆಚರಿಸದ ವಿಪ್ರನ ಮನೆಯ ಅನ್ನವೇ ನಿಷಿದ್ಧವಾದುದು. ಹಾಗಾಗಿ ಪರಾನ್ನದ ವಿಷಯದಲ್ಲಿ ಎಷ್ಟು ಜಾಗೃತರಾದರೂ ಸಾಲದು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ