ಧರ್ಮಾಚರಣೆ ೫೯

   ಧರ್ಮಾಚರಣೆ - ೫೯

ಮೂತ್ರಮೇಕಪಲಂ ದದ್ಯಾತ್ ಅಂಗುಷ್ಟಾರ್ಧಂ‌ ತು ಗೋಮಯಮ್ | ಕ್ಷೀರಂ ಸಪ್ತಪಲಂ ದದ್ಯಾತ್ ದಧಿ ತ್ರಿಪಲಮುಚ್ಯತೇ | ಘೃತಮೇಕಪಲಂ ದದ್ಯಾತ್ ಪಲಮೇಕಂ ಕುಶೋದಕಮ್ || ಪರಾಶರ ಸ್ಮೃತಿ||

ಪಂಚಗವ್ಯ ಮಾಡುವಾಗ ನಾಲ್ಕು ಚಮಚದಷ್ಟು ಅಥವಾ ಕಾಲು ಲೋಟದಷ್ಟು ಗೋಮೂತ್ರವನ್ನು, ಹೆಬ್ಬೆರಳ ಅರ್ಧದಷ್ಟು ಗೋಮಯವನ್ನು, ಗೋಮೂತ್ರದ ಏಳರಷ್ಟು ಹಾಲನ್ನು, ಮೂರರಷ್ಟು ಮೊಸರನ್ನು, ಮೂತ್ರದಷ್ಟೇ ಪ್ರಮಾಣದ ತುಪ್ಪವನ್ನು ಹಾಗೂ ಕುಶೋದಕವನ್ನು ಹಾಕಬೇಕು. ಹೀಗೆ ಪ್ರಮಾಣಬದ್ಧವಾಗಿ ಮಾಡಿದಾಗ ಅದರ ರಸ ಪರಿಣಾಮಕಾರಿಯಾಗುವುದು‌. ಪದಾರ್ಥಗಳನ್ನು ತಯಾರಿಸುವಾಗ ಮಸಾಲೆಗಳನ್ನು ಹೇಗೆ ಅಗತ್ಯಕ್ಕೆ ತಕ್ಕಂತೆ ಹಾಕುವೆವೋ ಪಂಚಗವ್ಯದ ವಿಷಯದಲ್ಲೂ ಶಾಸ್ತ್ರೋಕ್ತ ಪ್ರಮಾಣ ಅನುಸರಿಸಿದಾಗ ಅದು ದೇಹಶುದ್ಧಿಗೆ ಕಾರಣವಾಗುವುದು.ಇಲ್ಲದಿದ್ದರೆ ಸುಮ್ಮನೆ ಗೋವಿನ ದ್ರವ್ಯ ಮಿಶ್ರಣ ಆಗುವುದೇ ಹೊರತು ಪಂಚಗವ್ಯ ಅಲ್ಲ. ( ಮಾಷ ಎಂದರೆ ಉದ್ದು ಅಥವಾ ಭತ್ತ. ಅದರ ಹತ್ತು ಕರ್ಷ ಪ್ರಮಾಣ. ಅದರ ನಾಲ್ಕು ಒಂದು ಪಲ. ) 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩