ಚಾರುದತ್ತ ೨
🌞ಚಾರುದತ್ತ ಬೆಳಕು -2🌚
*क्षीणा ममार्था: प्रणयिक्रियासु विमानितं नैव परं स्मरामि । एतत्तु मे प्रत्ययदत्तमूल्यं सत्वं सखे न क्षयमभ्युपैति ।।*
_ಚಾರುದತ್ತನ ಮತ್ತೊಂದು ಮನದ ಮಾತು. ಅವನು ದಾನ ಕೊಡುವುದರಲ್ಲಿ ಖ್ಯಾತನಾಗಿದ್ದನು. ಹೀಗೆ ದಾನ ಮಾಡಿಯೇ ತನ್ನ ಅಪಾರ ಸಂಪತ್ತನ್ನು ಕಳೆದುಕೊಂಡಿದ್ದ. ಹಾಗಾದರೆ ಅವನು ಇದರಿಂದ ಏನನ್ನು ಸಂಪಾದಿಸಿದ್ದ ಅಂದರೆ ಅದನ್ನು ವಿದೂಷಕನ ಬಳಿ ಹೇಳುತ್ತಿದ್ದಾನೆ. ಮಿತ್ರ, ನನ್ನ ಸಂಪತ್ತೆಲ್ಲವೂ ದೇಹಿ ಎಂದು ಬಂದ ಜನರಿಗೆ ಕೊಡುವುದರಲ್ಲಿ ಕಳೆದುಹೋಯಿತು. ಯಾರೂ ಕೂಡ ನನ್ನಿಂದ ಅಪಮಾನಿತರಾಗಿ ಅಥವಾ ನನ್ನ ಮೇಲೆ ಅಸಮಾಧಾನಿತರಾಗಿ ಹೋದದ್ದನ್ನು ನಾ ಕಾಣೆ. ಅಲ್ಪವಿರಲಿ ಮಹತ್ತಾಗಿರಲಿ ಯಾರು ನನ್ನ ಬಳಿ ಕೇಳಿಕೊಂಡು ಬಂದರೋ ಅವರೆಲ್ಲರೂ ಸಂತುಷ್ಟರಾಗಿ ಹಿಂತಿರುಗಿದ್ದಾರೆ. ಬೇಡಿದವರಿಗೆ ಅಥವಾ ಪಡೆಯಲು ಯೋಗ್ಯರಾದವರಿಗೆ ಅಂದರೆ ನಿಜವಾದ ದರಿದ್ರರಿಗೆ ದಾನ ನೀಡಿದರೆ ಶ್ರೇಯಸ್ಸಾಗುವುದೆಂಬ ನಂಬಿಕೆಯಿಂದ ಕೊಟ್ಟ ಸಂಪತ್ತು ಈಗಿಲ್ಲದಿರಬಹುದು. ಆದರೆ ಕೊಡುವ ನನ್ನ ಮನ ಇಂದಿಗೂ ಜೀವಂತವಾಗಿದೆ. ಕೊಟ್ಟು ಕೈ ಖಾಲಿಯಾಗಿರಬಹುದೇ ಹೊರತು ಮನದ ಉದಾರ ಭಾವವಲ್ಲ. ಒಂದು ವೇಳೆ ಮತ್ತೆ ಸಂಪತ್ತು ಯಾವ ಮೂಲದಿಂದ ಒದಗಿ ಬಂದರೆ ಯಾರು ಬಂದು ಕೇಳಿದರೂ ನಾನು ಮತ್ತೆ ದಾನ ನೀಡಲು ಸಿದ್ಧನಿದ್ದೇನೆ. ಮನದ ಉದಾರ ಭಾವ ನನ್ನಿಂದ ಎಂದಿಗೂ ದೂರವಾಗದು. ದಾನ ನೀಡಿದರೆ ಒಳಿತಾಗುವುದೆಂಬ ವಿಶ್ವಾಸದಿಂದ ನನ್ನ ಪ್ರವೃತ್ತಿ. ಸಜ್ಜನರ ಮನಸ್ಥಿತಿಗೆ ಸುಂದರ ದೃಷ್ಟಾಂತ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ