ಪದಸಂಪದ ೨೨
📝📕ಪದ ಸಂಪದ ೧೧📕📝
*ಜನಾರ್ದನ*
_ಇದೂ ವಿಷ್ಣುವಿನ ಪರ್ಯಾಯವೇ ಆಗಿದೆ. ಜನರಿಂದ ನಾನಾ ಕಾರಣಗಳಿಂದ ಯಾಚಿಸಲ್ಪಡುವವನು ಎನ್ನುವುದು ಒಂದು ಅರ್ಥ. ಸಂಪತ್ತಿಗಾಗಿ- ಶಾಂತಿಗಾಗಿ- ನೀರೋಗಕ್ಕಾಗಿ- ಕಾಮನೆಗಳಿಗಾಗಿ ಹೀಗೆ ವಿಷ್ಣುವಿನ ಬೇರೆ ಬೇರೆ ರೂಪಗಳನ್ನು ಜನರು ಪೂಜಿಸಿ ಪ್ರಾರ್ಥಿಸುತ್ತಾರೆ. ಜನ ಅಂದರೆ ಜನನ-ಮರಣದ ಚಕ್ರ. ಸಕಾಮ ಭಕ್ತರ ಅಂದರೆ ಉದ್ದೇಶ ಇಟ್ಟುಕೊಂಡು ಪೂಜಿಸುವ ಭಕ್ತರಿಗೆ ಹೇಗೆ ಫಲ ನೀಡುವನೋ ಉದ್ದೇಶವೇ ಇಲ್ಲದೆ ಭಕ್ತಿ ಮಾಡುವವನಿಗೂ ಫಲ ನೀಡುತ್ತಾನೆ. ಅಂತಹ ಭಕ್ತರಿಗೆ ಭವಚಕ್ರದಿಂದ ಬಿಡುಗಡೆ ನೀಡುತ್ತಾನೆ, ಹಾಗಾಗಿ ಜನನಾದಿಗಳನ್ನು ಕೊನೆಗಾಣಿಸುವನೆಂಬ ಅರ್ಥದಲ್ಲಿ ಈ ಪದ. ಜನ ಅಂದರೆ ಸಮುದ್ರದೊಳಗಿನ ಅಸುರರು. ಈಗಿನ ಕಡಲ್ಗಳ್ಳರೇ ಮೊದಲಾದವರು ಅವರ ಬೇರೊಂದು ರೂಪ. ಇಂತಹ ಅಸುರರನ್ನು ದಮನಿಸುವನು ಎಂಬ ಅರ್ಥದಲ್ಲಿ ವಿಷ್ಣು ಜನಾರ್ದನ. ದ್ವಾರಕೆ ಕಟ್ಟುವ ಕಾಲದಲ್ಲಿ ಒದಗಿದ ಕಡಲ್ಗಳ್ಳರ ಹುಟ್ಟಡಗಿಸಿದವನು ಈ ಜಗಜಟ್ಟಿ. ಪ್ರಳಯ ಕಾಲದಲ್ಲಿ ರುದ್ರನಾಗಿ ಜನರನ್ನು ನಾಶ ಮಾಡುವನೆಂಬ ಅರ್ಥದಲ್ಲಿ ಜನಾರ್ದನ. ಭಗವಂತನ ನಾನಾ ರೂಪಗಳೇ ನಾನಾ ಬಗೆಯ ಕ್ರಿಯೆಗಳನ್ನು ನಡೆಸುವವು. ಅದಕ್ಕೆ ನಾವು ನೀವು ವಿಷ್ಣು- ಶಿವ ಮೊದಲಾದ ಹೆಸರು ನೀಡುವೆವಷ್ಟೆ!_
*ಜನಾರ್ದನೋ ಜನಾತೀತಃ* ಇಲ್ಲಿ ಜನ್ಮಾದಿ ಚಕ್ರದಿಂದ ಅತೀತನಾದ ದೇವನ ಉಲ್ಲೇಖವಿದೆ.
*ಅಭಿನವ ಜನಾರ್ಧನ ವಿಠಲನ ಧ್ಯಾನಿಸುವ ನೋಡಮ್ಮಅಭಿವಂದಿಸಿದವರಿಗೆಅಖಿಲಾರ್ಥವ ಸಲ್ಲಿಸುವ ನೋಡಮ್ಮ*
_ಜನಾರ್ದನ ದಾಸರ ರಾಯರ ಬಗೆಗಿನ ಪ್ರಸಿದ್ಧ ಕೃತಿಯಾದ ತುಂಗಾತೀರದಿ ನಿಂತ ಸುಯತಿವರ ಎಂಬ ಮುಂದುವರಿದ ಭಾಗದಲ್ಲಿ ಜನಾರ್ದನ ಪದವಿದೆ. ರಾಯರು ಜನಾರ್ದನನನ್ನು ನಿರಂತರವಾಗಿ ಧ್ಯಾನಿಸುವರೆಂಬ ಅರ್ಥವಿದೆ. ನಾವೂ ಜನಾರ್ದನನ ನಮಿಸಿ ಜನನರಹಿತರಾಗೋಣ._
ಸಂಗ್ರಹ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ