ಪದಸಂಪದ ೪
📝📕ಪದ ಸಂಪದ ೪📕📝
*ಕಿನ್ನರ*
_ಹೆಸರು ಕಂಡ ಕ್ಷಣದಲ್ಲಿ ಓಹೋ ಎಂದೆನಿಸುವುದು ನಿಜವಾದರೂ ಅರ್ಥ ಕೇಳಿ ಅಯ್ಯೋ ಎನಿಸುವ ಜಾತಿವಿಶೇಷ. ಕುದುರೆಯ ಮುಖದ ವಿಶಿಷ್ಟ ನರರು ಈ ಕಿನ್ನರರು. ಮೊಗ ಕುತ್ಸಿತ ಅಂದರೆ ಸಹಜವಾಗಿರದೇ ವಿಕಾರವಾಗಿರುವ ನರರಿವರು. ಪುಲಸ್ತ್ಯನ ಮಕ್ಕಳೆಂದೂ, ಕಶ್ಯಪನ ಮಕ್ಕಳೆಂದೂ ಕೆಲವೆಡೆ ಇವರ ವರ್ಣನೆ ಇದೆ. ಸಂಸ್ಕೃತ ಹಾಗೂ ಕನ್ನಡದ ಸಾಹಿತ್ಯದೆಲ್ಲೆಡೆ ಈ ಶಬ್ದ ಬಳಕೆಯಾಗಿದೆ._
*“ऋक्षीषु च तथा जाता वानराः किन्नरीषु च”*
_ರಾಮಾಯಣದ ಈ ಮಾತು ಋಕ್ಷಿ ಎಂಬುವಳಲ್ಲಿ ಕಿನ್ನರರು ಹಾಗೂ ವಾನರರು ಜನಿಸಿದರೆಂಬುದನ್ನು ವಿವರಿಸುವುದು._
*ಕಿನ್ನರ ಮಿಥುನಾಳಿಗಳ್ ವಿಷಯಮಾಗಿರೆ ತೀರ್ವುದು ಶೈಲವರ್ಣನಂ.*
(ಸೂಕ್ತಿ ಸುಧಾರ್ಣವ : ಪರ್ವತವರ್ಣನಂ ೧) _ಅಷ್ಟಾದಶ ವರ್ಣನೆಗಳನ್ನು ವಿವರಿಸುವ ಸಂದರ್ಭದಲ್ಲಿ ಕಿನ್ನರ ಮಿಥುನರನ್ನು ಬಣ್ಣಿಸದೇ ಪರ್ವತವರ್ಣನೆ ಮುಂದೋಡದು ಎಂದಿದ್ದಾನೆ ಕವಿ._
http://shreenidhiabhyankar.blogspot.in/
ಸಂಗ್ರಹ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ