ಪದಶಕ್ತಿ ೦
📝📕ಪದ ಸಂಪದ ೧೦📕📝
*ಗೋವಿಂದ*
_ವಿಷ್ಣುವಿನ ಮತ್ತೊಂದು ಹೆಸರಿನಲ್ಲಿ ಇಂದು ಪದಶಕ್ತಿ ನೋಡೋಣ. ಯಾರು ಭೂಮಿಯನ್ನು, ಧೇನುವನ್ನು, ಸ್ವರ್ಗವನ್ನು, ವೇದವನ್ನು ಉದ್ಧರಿಸಿದನೋ ಅವನೇ ಗೋವಿಂದ. ಸಂಸ್ಕೃತದಲ್ಲಿ ಗೋ ಶಬ್ದಕ್ಕೆ ಇಷ್ಟೂ ಅರ್ಥಗಳುಂಟು. ಹಿರಣ್ಯಾಕ್ಷನು ತನ್ನ ಭುಜಬಲದಿಂದ ಭುವಿಯ ಕಕ್ಷೆ ತಪ್ಪಿಸಿ ಜೀವರಾಶಿಯನ್ನು ಜಲರಾಶಿಯೊಳಗೆ ಮುಳುಗಿಸುವ ಹವಣಿಕೆ ತೋರಿದಾಗ ವರಾಹ ಅವತಾರ ತಾಳಿ ಭೂಮಿಯ ಸ್ಥಾನವನ್ನು ಸ್ಥಿರವಾಗಿಸಿದ. ಸಮುದ್ರ ಮಥನಕಾಲದಲ್ಲಿ ಕಾಮಧೇನುವು ಉದ್ಭವಿಸಲು ಎಲ್ಲೆಡೆ ಮಥನದಲ್ಲಿ ತೊಡಗಿಕೊಂಡಿದ್ದ ವಿಷ್ಣುವು ಮುಖ್ಯ ಕಾರಣ. ಇನ್ನೊಮ್ಮೆ ಕಾಮಧೇನುವಿನ ವಿಷಯದಲ್ಲಿ ಕಾರ್ತವೀರ್ಯನು ಅಪಚಾರ ಮಾಡಿದಾಗ ಪರಶು ಎತ್ತಿ ಅವನನ್ನು ತರಿದನು. ಇಂದ್ರನ ಆಜ್ಞೆಯಂತೆ ಮಳೆ ಸುರಿದಾಗ ಪರ್ವತವನ್ನೆತ್ತಿ ಕೃಷ್ಣಾವತಾರದಲ್ಲಿ ಗೋಕುಲೋದ್ಧಾರ ಮಾಡಿದ. ಬಲಿಯು ಇಂದ್ರನನ್ನು ಸ್ವರ್ಗದಿಂದ ಓಡಿಸಿದಾಗ ಅವನಿಗೆ ಸ್ಥಾನ ಕಲ್ಪಿಸಿ ದೇವತೆಗಳಿಗೆ ಮತ್ತೆ ಸ್ವರ್ಗ ಕೊಡಿಸಿ ಸ್ವರ್ಗವನ್ನು ಉದ್ಧರಿಸಿದ. ಮತ್ಸ್ಯಾವತಾರದಲ್ಲಿ ಪ್ರಕೃತಿ ಸಹಜವಾದ ಪ್ರಳಯದಲ್ಲಿ ಮುಳುಗಿಹೋಗುತ್ತಲಿದ್ದ ವೇದಗಳನ್ನು ಉದ್ಧರಿಸಿ ನಿಜಾರ್ಥದ ಗೋವಿಂದ ಎನಿಸಿಕೊಂಡ. ಇನ್ನೊಂದು ಅರ್ಥದಲ್ಲಿ ವೇದಸ್ತುತ್ಯನಾದ ಕಾರಣ ವಿಷ್ಣುವು ಗೋವಿಂದನು.ಗೋವಿನ ಹಾಗೂ ಗೋವಿಂದನ ವಿಷಯದಲ್ಲಿ ಶ್ರದ್ಧೆ ಕಡಿಮೆಯಾದಷ್ಟು ಗೋ-ವಿಂದ ಅನ್ನುವ ಮಾತು ಬಂದೀತು ಜೋಕೆ._
ಸಾಹಿತ್ಯದ ಕೆಲವು ಕಡೆ ಈ ಪದವನ್ನು ಹುಡುಕೋಣ.
*येतिष्ठन्तःस्वपन्तश्चगच्छन्तश्चलितेक्षुते।संकीर्त्तयन्तिगोविन्दंतेवस्त्याज्याःसुदूरतः*
_ನಡೆವಾಗ-ನುಡಿವಾಗ, ಮಲಗಿದಾಗ- ಎದ್ದಾಗ ಯಾರು ಗೋವಿಂದನನ್ನು ಸ್ತುತಿಸುವರೋ ಅವರಿಗೆ ಯಾವ ಬಾಧೆಯೂ ಬರಲಾರದು ಎಂಬ ಈ ಮಾತು ವರಾಹ ಪುರಾಣದ್ದು._
*ಬಾರೋ ಮನೆಗೆ ಗೋವಿಂದ* ಎಂಬ ಅರಭಿ ರಾಗದ ದಾಸರ ಕೀರ್ತನೆಯಲ್ಲಿ ಭಗವಂತನನ್ನು ಮನೆಗೇ ಕರೆದಿದ್ದಾರೆ. ನಾವು ಮನಕಾದರೂ ಕರೆಯೋಣವೇ!
ಸಂಗ್ರಹ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ