ಪದಸಂಪದ ೨೨

📝📕ಪದ ಸಂಪದ ೧೨📕📝

*ವಾಸುದೇವ*

_ವಸುದೇವ- ದೇವಕಿಯರ ಮಗನಾಗಿ ಕೃಷ್ಣನು ವಾಸುದೇವ. ಎಲ್ಲರ ಹೃದಯದಲ್ಲಿ ವಾಸ ಮಾಡುವ ದೇವನಾದ್ದರಿಂದ ವಾಸು-ದೇವನೂ ಅವನೇ. ಶುದ್ಧ ಅಂತಃಕರಣ ಉಳ್ಳ ವ್ಯಕ್ತಿಯ ಹೃದಯದಲ್ಲಿ ಪ್ರಕಾಶಿಸುತ್ತಾನೆ ಅಂದರೆ ನಾವು ವಸುದೇವರಾದರೆ ಅವನು ನಮ್ಮೊಳಗೆ ಕಾಣಿಸಿಕೊಳ್ಳುತ್ತಾನೆ.  ಲೋಕವನ್ನು ಸೂರ್ಯನಾಗಿ ಬೆಳಗುವನು, ಬಾಲನಾಗಿ ಲೋಕದೊಳು ಆಡುವನು, ಸಜ್ಜನರ ಪರವಾಗಿ ಜಯದ ಇಚ್ಛೆಯನ್ನು ಹೊಂದಿರುವನು, ಶುದ್ಧವಾದ ವ್ಯವಹಾರ ( ಮುಚ್ಚು ಮರೆ ಇಲ್ಲದಂತಹದ್ದು ), ಭಕ್ತರ ಮೊರೆಗೆ ಕೂಡಲೇ ಕಾಣಿಸಿಕೊಳ್ಳುವವನು,  ಸ್ತುತಿಸಲ್ಪಡುವವನು, ಮುಮುಕ್ಷುಗಳನ್ನು ದಡ ಸೇರಿಸುವವನು ಮೊದಲಾದ ಅನೇಕ ಅರ್ಥಗಳಲ್ಲಿ ಅವನು ವಾಸುದೇವ. ವಿಷ್ಣುವಿನ ನಾನಾ ರೂಪಗಳಲ್ಲಿ ಜ್ಞಾನರೂಪವನ್ನು ವಾಸುದೇವನೆಂದು ಸಂಬೋಧಿಸುತ್ತಾರೆ. ಹೀಗೆ ಹತ್ತಾರು ಅರ್ಥವ್ಯಾಪ್ತಿಯುಳ್ಳ ಶಬ್ದವಿದು._

ಸಾಹಿತ್ಯದಲ್ಲಿ ಈ ಪದದ ಬಳಕೆ ನೋಡೋಣ.

*वसनात् सर्वभूतानां वासुत्वाद् दव-योनितः वासुदेवस्ततो ज्ञेयो योगिभिस्तत्त्ववादिभिः*

_ಸರ್ವಭೂತ ನಿವಾಸಿಯಾದವನೇ ವಾಸುದೇವನೆಂದಿದ್ದಾರೆ ಪುರಾಣಿಕರಾದ ವ್ಯಾಸರು._

*ವ್ಯಾಸ ನಾರದ ರೋಮಶಾದಿಗಳೀ ಸಮಸ್ತ ಮುನೀಂದ್ರರಿದೆಯೀಕೇಶವನುಪೂಜಾರುಹನೆಯೆಂದಿವರಬೆಸಗೊಳ್ಳೈಲೇಸನಾಡಿದೆ ಭೀಷ್ಮಬಳಿಕೇನೀ ಸಮಸ್ತ ಚರಾಚರದೊಳೀವಾಸುದೇವನೆ ಪೂಜ್ಯನೆಂದುದು ಸಕಲ ಮುನಿನಿಕರ (ಸಭಾ ಪರ್ವ, ೯ ಸಂಧಿ, ೪ ಪದ್ಯ)*

_ರಾಜಸೂಯ ಯಾಗದ ಸಂದರ್ಭದಲ್ಲಿ ಅಗ್ರಪೂಜೆಗೆ ಲೋಕಪೂಜ್ಯನಾದ ವಾಸುದೇವನೇ ಅರ್ಹನೆಂದು ಭೀಷ್ಮರ ನುಡಿ ಕುಮಾರವ್ಯಾಸನ ಪದಗಳಲ್ಲಿ. ನಾವೂ ಅಂತಶ್ಶುದ್ಧರಾಗಿ ವಾಸುದೇವನನ್ನು ದರ್ಶಿಸೋಣ._

ಸಂಗ್ರಹ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩