ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸

*यशोधिगन्तुं सुखलिप्सया वा मनुष्यसँख्यामतिवर्तितुं वा । निरुत्सुकानामभियोगभाजां समुत्सुकेवाँकमुपैति सिद्धि: ।।*

_ಒಂದು ಗುರಿಯನ್ನು ಸಾಧಿಸಲು ಹೊರಟಾಗ ಉಳಿದ ಆಸೆಗಳೆಲ್ಲವನ್ನೂ ಪರಿತ್ಯಜಿಸಬೇಕಾಗುತ್ತದೆ. ಅರ್ಜುನ ಶಸ್ತ್ರಾಸ್ತ್ರ ಸಂಪಾದಿಸಲು ಹೊರಟವನು ತಮ್ಮಂದಿರು ಮಡದಿ ಎಲ್ಲರನ್ನೂ  ಸಾಧಿಸುವ ತನಕ ಮರೆಯಬೇಕು. ಹಾಗೆ ಸಾಧಿಸಿದಾಗ ಯಶಸ್ಸು ತಮ್ಮನ್ನು ತಾನೇತಾನಾಗಿ  ಸಮೀಪಿಸುತ್ತದೆ.. ಕವಿ ಸುಂದರ ಉಪಮೆಯ ಮೂಲಕ ಇದನ್ನು ವರ್ಣಿಸುತ್ತಿದ್ದಾನೆ. ಯಶಸ್ಸನ್ನು ಹೊಂದಲು ಬಯಸುವವರು, ಸುಖವನ್ನು ಅನುಭವಿಸಲು ಸಿದ್ಧನಾದವರು, ಉಳಿದವರ ತುಲನೆಯಲ್ಲಿ ತನ್ನನ್ನು ತಾನು ಶ್ರೇಷ್ಠನೆಂದು ಕರೆಸಿಕೊಳ್ಳುವ ಇಚ್ಛೆ ಹೊಂದಿರುವವರು ತಮ್ಮ ಗುರಿಯತ್ತ ಉತ್ಸುಕರಾಗಿರಬೇಕೇ ಹೊರತು ಬಯಕೆಗಳ ಈಡೇರಿಕೆಯ ಉತ್ಸಾಹವನ್ನಲ್ಲ. ಆ ಸಮಯದಲ್ಲಿ ಮನದ ಆಕಾಂಕ್ಷೆಗಳನ್ನು ಬದಿಗಿಟ್ಟು, ಬಯಕೆಯನ್ನು ಮೂಟೆಕಟ್ಟಿ, ಇಂದ್ರಿಯಗಳನ್ನು ನಿಯಂತ್ರಿಸಿ ಸಾಧನೆಯೊಂದನ್ನು ಮಾತ್ರ ನೆನಪಿಸಿಕೊಳ್ಳುತ್ತಾ ತೊಡಗಿಕೊಂಡಾಗ ಅಂತಹ ವ್ಯಕ್ತಿಗಳ ಗುರಿಗಳು ಅತ್ಯಂತ ಪ್ರೀತಿಸಿದ ಕಾಮಿನಿಯು ಬಳಿಬಂದು ನಾಚಿ ತೊಡೆ ಏರಿ ಕುಳಿತುಕೊಳ್ಳುವಂತೆ ನಮ್ಮನ್ನು ಆಲಿಂಗಿಸುವುದು. ಗುರಿಯೆಡೆಗಿನ ನಮ್ಮ ಬದ್ಧತೆಯೇ ಅದು ನಮ್ಮನ್ನು ಹುಡುಕಿಕೊಂಡು ಬರುವಂತೆ ಅಥವಾ ಕೀರ್ತಿಯೆಂಬುದು ಅಟಕಾಯಿಸಿಕೊಳ್ಳುವಂತೆ ಮಾಡುವುದು. ಆದರೆ ಆ ಕಾಲದಲ್ಲಿ ಉಳಿದೆಲ್ಲ ಸಣ್ಣ ಪುಟ್ಟ ಬಯಕೆಗಳನ್ನು ತ್ಯಜಿಸುವುದು ಅನಿವಾರ್ಯ. ಹಾಗೆ ಹೊರಟಾಗ ಮಾತ್ರ ಯಶಸ್ಸಿನ ಕುದುರೆಯ ಪಯಣ ನಮ್ಮದಾಗುವುದು. ಬಹುಕಾಲ ಪ್ರೀತಿಸಿದ ಸುಂದರಿಯೊಬ್ಬಳು ತಾನೇ ಬಂದು ಪ್ರಿಯತಮನ ತೊಡೆಯೇರಿ ಕುಳಿತುಕೊಳ್ಳುವಂತೆ ಸಿದ್ಧಿಯೂ ನಮ್ಮನ್ನು ಆವರಿಸುತ್ತದೆ. ಹಾಗಾಗಿ ಪ್ರಕೃತ ಮರೆಯಲು ಕಷ್ಟ ಎನಿಸಿದರೂ ಅಣ್ಣ ತಮ್ಮಂದಿರ ಸಾಂಗತ್ಯ, ಮಡದಿಯ ಪ್ರೀತಿ ಇವನ್ನು ಸಂಪೂರ್ಣವಾಗಿ ಮರೆತು ತಪದಲ್ಲಿ ತೊಡಗಿಸಿಕೊ ಎಂದು ದ್ರೌಪದಿ ಅರ್ಜುನನಿಗೆ ನುಡಿಯುವಳು._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩