ಪದಶಕ್ತಿ ೫

📝📕ಪದ ಶಕ್ತಿ ೫📕📝

*ಭೂತಃ*

_ಭೂತ ಎಂಬ ಶಬ್ದವನ್ನು ನಾವು ಹೆಚ್ಚಾಗಿ ತೀರಿಕೊಂಡ ವ್ಯಕ್ತಗಳ ಬಗ್ಗೆ ಅಥವಾ ಕಳೆದು ಹೋದ ಕಾಲದ ಬಗ್ಗೆ ಬಳಸುತ್ತೇವೆ. ಇದು ರೂಢಿಯ ಅರ್ಥಗಳಾದರೆ ಶಬ್ದದ ಮೂಲಾರ್ಥ ಸ್ವಲ್ಪ ಭಿನ್ನವಾಗಿದೆ. ಯಾರ ಬಳಿ ಸಂಪತ್ತಿದೆಯೋ ಅವರೇ ನಿಜವಾಗಿ ಭೂತ. ಭೂತಿ ಎಂದರೆ ಸಂಪತ್ತು. ವಿಷ್ಣುವನ್ನು ಸಹಸ್ರನಾಮದಲ್ಲಿ  ಸ್ತುತಿಸುವಾಗ ಮಹದ್ಭೂತ ಎನ್ನುತ್ತೇವೆ. ಜಗದ ಐಶ್ವರ್ಯಕ್ಕೆಲ್ಲ ಒಡೆಯ ಎಂಬ ಅರ್ಥದಲ್ಲಿ. ಭಸ್ಮ ಬಳೆದುಕೊಂಡ ಈಶ್ವರನ ಗಣಗಳೂ ಭೂತಗಳೇ ಹೌದು. ತಮಗೆ ಬೇಕಾದ್ದನ್ನು ಪಡೆಯುವ ಸಾಮರ್ಥ್ಯ ಉಳ್ಳವರು ಭೂತರೇ ಸರಿ. ದೇವಗಣಗಳ ಒಂದು ಭೇದ ಈ ಭೂತಗಳು. ಇನ್ನು ಮುಂದೆ ಯಾರಾದರೂ ಭೂತ ಎಂದರೆ ಶ್ರೀಮಂತಿಕೆಯನ್ನು ಗುರುತಿಸಿದರೆಂದು  ಸಂತೋಷಿಸಿ ದುಃಖಿಸದಿರಿ._

ಸಂಸ್ಕೃತ ಹಾಗೂ ಕನ್ನಡದ ಬಹಳಷ್ಟು ಸಾಹಿತ್ಯದಲ್ಲಿ ಈ ಪದವಿದೆ.

*श्वेतापराजितामूलं पिष्टं तण्डलवारिणा । तेन नस्यप्रदानं स्याद्भूतबृन्दस्य विद्रवम्*

_ಗರುಡ ಪುರಾಣದ ಈ ಮಾತಿನಲ್ಲಿ ಕೆಲವು ಸಂದರ್ಭದ ಬಲಿ ಕೊಡದಿರುವುದು ಭೂತಗಳ ಉಪದ್ರವಕ್ಕೆ ಹೇತುವಾಗುವುದು ಎನ್ನುತ್ತದೆ. ಇಲ್ಲಿ ಹೇಳಿದ ಭೂತ ಶಿವಗಣದ ಒಳಗಿನವುಗಳೇ ಹೊರತು ತೀರಿಹೋದ ನಮ್ಮ ಶತ್ರುಗಳಲ್ಲ._

*ಆದಿ ನಾರಾಯಣಿ ಪರಾಯಣಿ
ನಾದಮಯೆ ಗಜಲಕ್ಷ್ಮಿ ಸತ್ವಗುಣಾಧಿದೇವತೆಅಮರವಂದಿತಪಾದ ಪಂಕರುಹೆ ವೇದಮಾತೆಯೆ ವಿಶ್ವತೋಮುಖೆಯೈದು ಭೂತಧಾರೆಯೆನಿಪೀ
ದ್ವಾದಶಾತ್ಮ ಜ್ಯೋತಿರೂಪಿಯೆ ನಾದೆ ಶಾರದೆಯೆ (ಆದಿ ಪರ್ವ ೧ ಸಂಧಿ ೬ ಪದ್ಯ)

_ಈ ಪದ್ಯದಲ್ಲಿ ಕುಮಾರವ್ಯಾಸನು ಪಂಚಭೂತಗಳಿಗೆ ಆಧಾರಳೆನಿಸಿದ ಶಾರದೆಯನ್ನು ನಮಿಸಿದ್ದಾನೆ. ಕನ್ನಡದ ಮಟ್ಟಿಗೆ ಭೂತ ಪದದ ಮೂಲಾರ್ಥ ಬಹುತೇಕ ಮರೆಯಾಗಿದೆ._

http://shreenidhiabhyankar.blogspot.in/

ಸಂಗ್ರಹ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩