ಕಿರಾತಾರ್ಜುನೀಯ
🌸 ಕಿರಾತಾರ್ಜುನೀಯದ ಒಂದು ಸಾಯಕ 🌸
*विहाय शान्तिं नृप धाम तत्पुनः प्रसीद सन्धेहि वधाय विद्विषाम् | व्रजन्ति शत्रूनवधूय निःस्पृहा शमेन सिद्धिं मुनयो न भूभृतः ||*
_ದ್ರೌಪದಿ ಮತ್ತೆ ತನ್ನ ಮನದಳಲನ್ನು ತೋಡಿಕೊಳ್ಳುತ್ತಿದ್ದಾಳೆ. ನೃಪನೇ, ಶಾಂತಿಯನ್ನು ಬಿಡು. ಸಕಲ ಅಪಮಾನಗಳನ್ನೂ, ದುಃಖಗಳನ್ನೂ ಸಹಿಸುವ ಶಕ್ತಿ ಆ ಶಾಂತಿ ನೀಡುತ್ತದೆ. ನೀನು ಕ್ಷತ್ರಿಯನಾಗಿ ಈ ಕಷ್ಟಕಾಲದಲ್ಲಿ ಅದನ್ನು ಆಶ್ರಯಿಸಬೇಡ. ಶತ್ರುಗಳ ವಧೆಗಾಗಿ ಮತ್ತೆ ನಿನ್ನ ತೇಜಸ್ಸನ್ನು ಅಥವಾ ಕ್ಷತ್ರಿಯೋಚಿತ ಶೌರ್ಯವನ್ನು ಪ್ರದರ್ಶಿಸು. ಅರಿಗಳ ಮೇಲೆ ವೈರವನ್ನು ತಾಳಿ ಅವರನ್ನು ಯುದ್ಧದಲ್ಲಿ ತರಿಯಲು ಮನ ಸಜ್ಜುಗೊಳಿಸು. ಏಕೆ ಹೀಗೆ ಹೇಳುವೆನೆಂದರೆ, ನಾವು ಮುನಿಗಳಲ್ಲ. ಮನವನ್ನು ಸಂಯಮದಿಂದ ಇಟ್ಟುಕೊಳ್ಳುವ ಮುನಿಗಳು ಕಾಮ, ಕ್ರೋಧ, ಮದ, ಮಾತ್ಸರ್ಯ, ಲೋಭ, ಮೋಹಗಳೆಂಬ ಶತ್ರುಗಳನ್ನು ತಿರಸ್ಕರಿಸಿ ಶಾಂತಿಯನ್ನು ಆಶ್ರಯಿಸಿ ತಮ್ಮ ಸಾಧನೆಯನ್ನು ಪೂರ್ತಿಗೊಳಿಸುತ್ತಾರೆ. ಅವರು ಎಷ್ಟಾದರೂ ನಿಃಸ್ಪೃಹರು. ಯಾವ ಬಗೆಯ ಆಸೆಯೂ ಅವರಿಗಿಲ್ಲ. ಅವರು ತಮ್ಮ ಕಾರ್ಯವನ್ನು ಶಾಂತಿಯಿಂದಲೇ ಸಾಧಿಸುವರು. ಶತ್ರುಗಳ ಬಗೆಗೆ ಯೋಚಿಸುವುದೂ ಇಲ್ಲ. ಆದರೆ ನಾವು ಹಾಗಲ್ಲ. ರಾಜ್ಯಾಕಾಂಕ್ಷಿಗಳು. ನಾವು ಶಾಂತಿಯನ್ನು ಆಶ್ರಯಿಸಿದರೆ ಎಲ್ಲವನ್ನೂ ಕಳೆದುಕೊಳ್ಳುವೆವು. ಹಾಗಾಗಿ ಅರಿಮರ್ದನಕ್ಕೆ ತ್ವರೆ ಮಾಡು. ನಾವೂ ಮುನಿಗಳಂತೆ ಕಾಮಾದಿ ವೈರಿಗಳನ್ನು ತಿರಸ್ಕರಿಸಿ ಶಾಂತಿ ಪಡೆಯೋಣ. ನಿಜ ಶತ್ರುಗಳು ಎದುರಾದರೆ ಅಶಾಂತಿಯಿಂದಲೇ ಎದುರಿಸೋಣ._
http://shreenidhiabhyankar.blogspot.in/
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ