ವೇದ ಧರ್ಮ ೩೭
📗🌾📙 ವೇದ-ಧರ್ಮ 📗🌾📙 ಭಾಗ-೩೭
_ವರ್ಣ, ಸ್ವರ, ಮಂತ್ರಗಳ ಉಚ್ಚಾರಣೆ ಹೇಗಿರಬೇಕೆಂದು ಹೇಳುವ ಶಾಸ್ತ್ರವೇ ವೇದಾಂಗಗಳಲ್ಲಿ ಮೊದಲನೆಯದಾದ *ಶಿಕ್ಷಾ*. ಈ ಶಿಕ್ಷಾ ಗ್ರಂಥಗಳು ಒಟ್ಟು ಎಂಟು ಇವೆ._
*ಪ್ರಥಮಾ ವ್ಯಾಸಶಿಕ್ಷಾ, ಲಕ್ಷ್ಮೀಶಿಕ್ಷಾ ದ್ವಿತೀಯಕಾ, ಭಾರದ್ವಾಜೀ ತೃತೀಯಾ, ಅರಣ್ಯಾ ತುರೀಯಕಾ, ಪಂಚಮೀ ಶಂಭುಶಿಕ್ಷಾ, ಷಷ್ಠೀ ಶಲೀಯಕಾ, ಸಪ್ತಮೀ ಪಾಣಿನೀ, ಅಷ್ಟಮೀ ಕೌಹಲೀ, ವಾಸಿಷ್ಠೀ ನವಮೀ*
_ವ್ಯಾಸ, ಲಕ್ಷ್ಮೀ, ಭಾರದ್ವಾಜೀ, ಅರಣ್ಯಾ, ಶಂಭು, ಶಲೀಯಕಾ, ಪಾಣಿನೀ , ಕೌಹಲೀ, ವಾಸಿಷ್ಠೀ ಎಂಬುದಾಗಿ ಒಂಭತ್ತು ಶಿಕ್ಷೆಗಳು ಇವೆ. *ಏಕಃ ಶಬ್ದಃ ಸುಷ್ಟುಪ್ ಪ್ರಯುಕ್ತಃ ಸಮ್ಯಗ್ಜ್ಞಾತಃ ಸ್ವರ್ಗೇ ಲೋಕೇ ಕಾಮಧುಕ್ ಭವತಿ, ಸಮ್ಯಗ್ವರ್ಣಪ್ರಯೋಗೇಣ ಬ್ರಹ್ಮಲೋಕೇ ಮಹೀಯತೇ* ಇತ್ಯಾದಿ ಮಾತುಗಳಿಂದ ಅಕ್ಷರಗಳ ಉಚ್ಚಾರಣೆಯಲ್ಲಿ ವಹಿಸಬೇಕಾದ ಎಚ್ಚರವನ್ನು ಜ್ಞಾಪಿಸಿದ್ದಾರೆ. ಸರಿಯಾದ ಪದಬಳಕೆಯು ಸ್ವರ್ಗವನ್ನೂ , ಬ್ರಹ್ಮಲೋಕವನ್ನೂ ಕೊಡಬಲ್ಲದು. ತಪ್ಪು ಪ್ರಯೋಗವು ಆಗಿಂದಾಗಲೇ ಹೊಡೆತವನ್ನೂ, ಕೆಲವು ಸಂದರ್ಭಗಳಲ್ಲಿ ಯಮಲೋಕವನ್ನೂ ಕರುಣಿಸಬಲ್ಲದು. ಹಾಗಾಗಿ ಶಿಕ್ಷೆಯ ಅಧ್ಯಯನ ವೇದವೆಂದಲ್ಲ, ಪ್ರತಿಯೊಬ್ಬರಿಗೂ ಅತ್ಯಂತ ಅವಶ್ಯಕ._
_ಇವುಗಳಲ್ಲಿ ವ್ಯಾಸಶಿಕ್ಷೆಯು,ಭರದ್ವಾಜ ಶಿಕ್ಷೆಯು ಯಜುರ್ವೇದಕ್ಕೆ ಸಂಬಂಧಿಸಿದೆ._
*ತ್ರಿಷಷ್ಟಿಶ್ಚತುಷ್ಷಷ್ಟಿರ್ವಾ ವರ್ಣಾಶ್ಶಂಭುಮತೇ ಮತಾಃ*
_ಅರವತ್ತಮೂರು ಅಥವಾ ಅರವತ್ನಾಲ್ಕು ವರ್ಣಗಳೆಂದು ಶಂಭುಶಿಕ್ಷೆ ಹೇಳುತ್ತದೆ. ವ್ಯಾಸಶಿಕ್ಷೆಯು ಅರವತ್ತಾರೆಂದೂ, ಪ್ರಾತಿಶಿಖ್ಯವು ಐವತ್ತೊಂಬತ್ತೆಂದು ಹೇಳುತ್ತದೆ. ಇವೆಲ್ಲ ಉಚ್ಚಾರಣೆಯಲ್ಲಿಯ ವ್ಯತ್ಯಾಸವನ್ನು ಅನುಸರಿಸಿ ಉಂಟಾಗುವಂತಹವೇ ಹೊರತು ಅಷ್ಟೇ ಅಕ್ಷರಗಳೆಂದಲ್ಲ._
*ಉದಾತ್ತಾನುದಾತ್ತಸ್ವರಿತಶ್ಚ ಸ್ವರಾಸ್ತ್ರಯಃ*
_ಎಂಟು ವಿಧವಾದ ಸ್ವರಗಳಿದ್ದರೂ ಮುಖ್ಯವಾಗಿ ಉದಾತ್ತ ಅನುದಾತ್ತ ಸ್ವರಿತ ಎಂದು ಮೂರು ಬಗೆ. ಅನುದಾತ್ತವೇ ಸ್ವರಿತದ ಸಂಯೋಗದಲ್ಲಿ *ಪ್ರಚಯ* ಆಗುವುದು._
*ಅಷ್ಟೌ ಸ್ಥಾನಾನಿ ವರ್ಣಾನಾಮುರಃ ಕಂಠಶಿರಸ್ತಥಾ ಜಿಹ್ವಾಮೂಲಂ ಚ ದಂತಾಶ್ಚ ನಾಸಿಕೋಷ್ಠೌ ಚ ತಾಲು ಚ*
_ವರ್ಣಗಳ ಉತ್ಪತ್ತಿ ಸ್ಥಾನಗಳು ಎಂಟು. ಹೃದಯ, ಕಂಠ, ತಲೆ ( ನಾಲಿಗೆಯ ಮೇಲ್ಭಾಗ ಎನ್ನಲೂಬಹುದು. ಮೂಗು ಮುಂತಾದವುಗಳಗ ಸಂಪರ್ಕ ಸೇತುವೆ.) ತಾಲು ( ನಾಲಗೆಯ ಕೆಳಭಾಗವೆನ್ನಬಹುದು) , ನಾಲಿಗೆ ಹುಟ್ಟುವ ಜಾಗ, ಹಲ್ಲುಗಳು,ಮೂಗು, ತುಟಿ. ಅ ಉಚ್ಚರಿಸುವಾಗ ಕಂಠ, ಇ ಎನ್ನುವಾಗ ತಾಲು, ಋ ಅನ್ನುವಾಗ ಮೂರ್ಧಾ, ತ ಅನ್ನುವಾಗ ದಂತ, ಉ ಕಾರಕ್ಕೆ ತುಟಿ, ದುಃಖ ಅನ್ನುವಾಗ ನಾಲಿಗೆಯ ಮೂಲ, ನ ಇತ್ಯಾದಿ ಹೇಳುವಾಗ ಮೂಗು ಬೇಕಾಗುತ್ತದೆ. ಇದು ಅನುಭವ ಸಿದ್ಧವಾದುದರಿಂದ ಅತ್ಯಂತ ವೈಜ್ಞಾನಿಕವೂ ಹೌದು. ( ಬೇಕಾದರೆ ಉಚ್ಚಾರಣೆ ಸಮಯದಲ್ಲಿ ಗಮನ ಕೊಟ್ಟು ನೋಡಿ) ಇವು ಮಾತ್ರ ಕಾರಣವಲ್ಲ ಹೊರತು ಇವು ಮುಖ್ಯ ಕಾರಣಗಳಷ್ಟೇ._
http://shreenidhiabhyankar.blogspot.in/
ಮುಂದುವರಿಯುವುದು......
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ