ಮಹಾಭಾರತ ೬೧
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೬೧
*ತಂ ಪಾರ್ಥೇನಾಭಯೇ ದತ್ತೇ ನಮುಚೇರ್ಭ್ರಾತರಂ ಮಯಮ್ ನ ಹಂತುಮೈಚ್ಛದ್ದಾಶಾರ್ಹಃ ಪಾವಕೋ ನ ದದಾಹ ಚ*
_ಆ ಸಮಯದಲ್ಲಿ ಅಗ್ನಿಯು ಓಡಿಹೋಗುತ್ತಿರುವ ಮಯನೆಂಬ ಅಸುರನನ್ನು ಸುಡಲು ಇಚ್ಛಿಸಿ ಕೃಷ್ಣನ ಸಹಾಯ ಕೇಳಿದನು. ಕೃಷ್ಣನು ಅವನನ್ನು ಕೊಲ್ಲಲು ಅಣಿಯಾದಾಗ ಧನಂಜಯನು ಅಭಯ ನೀಡಿ ಆಗಿತ್ತು. ಕೊನೆಗೆ ಕೃಷ್ಣಾರ್ಜುನರಿಂದ ನಮುಚಿಯ ಸೋದರನಾದ ಆ ಮಯನು ಬದುಕಿದನು. ಇಲ್ಲಿ ಕೃಷ್ಣನ ವಂಶವನ್ನೂ ಹೇಳಿದ್ದಾರೆ. ದಶಾರ್ಹ ಎಂಬ ವಂಶದಲ್ಲಿ ಜನಿಸಿದ ಕೃಷ್ಣನು ದಾಶಾರ್ಹನಾದನು._
*ತಸ್ಮಿನ್ವನೇ ದಹ್ಯಮಾನೇ ಷಡಗ್ನಿರ್ನದದಾಹ ಚ ಅಶ್ವಸೇನಂ ಮಯಂ ಚಾಪಿ ಚತುರಃ ಶಾರ್ಙ್ಗಕಾನಿತಿ*
_ಹೀಗೆ ಆ ಖಾಂಡವವನದಾಹದಲ್ಲಿ ಆರು ಜನ ಸಾಯಲಿಲ್ಲ. ಅಶ್ವಸೇನ, ಮಯ ಹಾಗೂ ಶಾರ್ಙ್ಗಕವೆಂಬ ನಾಲ್ಕು ಪಕ್ಷಿಗಳು. ಇನ್ನುಳಿದ ಜೀವರಾಶಿಯೆಲ್ಲವನ್ನೂ ಜಡ ಸಹಿತ ಸುಟ್ಟು ಬೂದಿ ಮಾಡಿದನು ಅಗ್ನಿದೇವ.ಈಗ ವಿದೇಶಗಳಲ್ಲಿ ಕೆಲವೊಮ್ಮೆ ನಡೆಯುವ ಲಕ್ಷಾಂತರ ಎಕರೆ ವಿಸ್ತೀರ್ಣದ ಕಾಡ್ಗಿಚ್ಚು ಅಗ್ನಿಯ ದಹನವೇನೋ ಎಂದು ಕಾಣುತ್ತದೆ._
*ಧರ್ಮಜ್ಞಾನಾಂ ಮುಖ್ಯತಮಸ್ತಪಸ್ವೀ ಸಂಶಿತವ್ರತಃ ಆಸೀನ್ಮಹರ್ಷಿಃ ಶ್ರುತವಾನ್ಮಂದಪಾಲ ಇತಿ ಶ್ರುತಃ*
_ನಾಲ್ಕು ಪಕ್ಷಿಗಳನ್ನೇಕೆ ಬದುಕಲು ಬಿಟ್ಟದ್ದೆಂದು ಜನಮೇಯಜನು ಕೇಳಿದಾಗ ವೈಶಂಪಾಯನರು ಅವುಗಳ ಕಥೆ ಹೇಳುತ್ತಾರೆ. ಹಿಂದೆ ಧರ್ಮಜ್ಞನೂ, ತಪಸ್ವಿಯೂ, ವ್ರತನಿಷ್ಠನೂ, ಶಾಸ್ತ್ರಜ್ಞನೂ ಆದ ಮಂದಪಾಲನೆಂಬ ಒಬ್ಬ ಮಹರ್ಷಿ ಇದ್ದನು. ಅವನಾದರೋ ಊರ್ಧ್ವರೇತಸ್ಕ ಎಂಬ ವ್ರತವನ್ನು ಅನುಷ್ಠಾನ ಮಾಡುತ್ತಿದ್ದನು. ಆ ಮಹರ್ಷಿಯು ತಪಸ್ಸಿನ ಕೊನೆ ತಲುಪಿ ಯೋಗ ಮಾರ್ಗದ ಮೂಲಕ ದೇಹ ಬಿಟ್ಟು ಪಿತೃಲೋಕಕ್ಕೆ ಹೋದನು. ಆದರೆ ತಪದ ಫಲವನ್ನು ಮಾತ್ರ ಉಣ್ಣಲಿಲ್ಲ. ಆಗ ತನ್ನ ತಪದ ನಿಷ್ಫಲತೆಗೆ ಯಮನ ಸಹಚರ ದೇವತೆಗಳನ್ನು ಅವನು ಪ್ರಶ್ನಿಸುತ್ತಾನೆ. ಅದೇನೆಂದು ಮುಂದೆ ನೋಡೋಣ....._
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ