ರಾಮಾಯಣ ೧೧೧

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೧೧೧

*ಅಪಿ ದೇವಾಃ ಶಯಿಷ್ಯಂತೇ ಕ್ರುದ್ಧೇ ಮಯಿ ಮಹೀತಲೇ ಯಮಂ ಚ ಶಮಯಿಷ್ಯಾಮಿ‌ ಭಕ್ಷಯಿಷ್ಯಾಮಿ ಪಾವಕಮ್ ಆದಿತ್ಯಂ‌ ಪಾತಯಿಷ್ಯಾಮಿ ಸನಕ್ಷತ್ರಂ ಮಹೀತಲೇ ಶತಕ್ರತುಂ ವಧಿಷ್ಯಾಮಿ ಪಾಸ್ಯಾಮಿ ವರುಣಾಲಯಮ್*

_ಅಣ್ಣನ ಕೋರಿಕೆಯಂತೆ ಕುಂಭಕರ್ಣನು ಯುದ್ಧಕ್ಕೆ ಹೊರಟು ತನ್ನ ಪರಾಕ್ರಮದ ಬಗ್ಗೆ ಒಂದಷ್ಟು ಅರ್ಥವಾದದ ಮಾತುಗಳನ್ನು ಆಡುತ್ತಿದ್ದಾನೆ. ಪರಾಕ್ರಮದ ಹುಮ್ಮಸ್ಸಿನಲ್ಲಿ ಎಲ್ಲರೂ ನಾನೇನು ಬೇಕಾದರೂ ಮಾಡಬಲ್ಲೆ ಎಂದು ಹೇಳಿಕೊಳ್ಳುವ ಮಾತುಗಳವು. ನಾನು ಕೋಪದಿಂದ ರಣಕ್ಕೆ ಬಂದೆನೆಂದರೆ ದೇವತೆಗಳು ಹೆದರಿ ನನಗೆ ಅಡ್ಡ ಬೀಳುವರು. ಯಮನ ಕಥೆಯನ್ನೇ ಮುಗಿಸುವೆನು.‌ ಅಗ್ನಿಯನ್ನು ಅಗಿದು ನುಂಗುವೆನು. ಸೂರ್ಯಮಂಡಲವನ್ನು ನೆಲಕ್ಕೆ ಉರುಳಿಸಿ ನಕ್ಷತ್ರಗಳನ್ನು  ಎದುರಿಸುವೆನು.‌ಇಂದ್ರನನ್ನು ಕೊಂದು ಸಮುದ್ರವನ್ನು ಕುಡಿದುಬಿಡುವೆನು. ಪರ್ವತಗಳನ್ನು ಪುಡಿ ಮಾಡಿ ಭೂಮಿಯನ್ನು ಸೀಳಿಬಿಡುವೆ. ಅದಾಧ್ಯವೆನಿಸಿದ ಎಲ್ಲಾ ಕೆಲಸಗಳನ್ನು ಸಾಧಿಸುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದಾನೆ._

*ನಿಃಶ್ರೇಯಸಫಲಾಮೇವ ಧರ್ಮಾರ್ಥಾವಿತರಾವಪಿ ಅಧರ್ಮಾನರ್ಥಯೋಃ ಪ್ರಾಪ್ತಂ ಫಲಂ ಚ ಪ್ರಾತ್ಯವಾಯಿಕಮ್*

_ಈಗಿನ ಬುದ್ಧಿಜೀವಿಗಳಂತಿದೆ ಮಹೋದರನ ಈ ಮಾತು. ಸತ್ಕರ್ಮಗಳಿಗೆ ಸತ್ಫಲ, ದುಷ್ಕರ್ಮಗಳಿಗೆ ದುಷ್ಟ ಫಲ ಎಂಬುದು ಲೋಕಸಿದ್ಧ. ಆದರೆ ಅದು ಸರಿಯಲ್ಲ. ಲೋಕದಲ್ಲಿ ಪಾಪಕರ್ಮಗಳಿಗೂ ಒಳ್ಳೆಯ ಫಲ ಸಿಗುತ್ತದೆ. ಒಂದು ವೇಳೆ ಕೆಟ್ಟ ಫಲವಾದರೆ ಅದು ವಿವಿಧ ವಿಘ್ನಗಳಿಂದಾಗಿದೆ, ನಮ್ಮ ಕರ್ಮದಿಂದಲ್ಲ ಎಂದು ಯೋಚಿಸಬೇಕು. ಪಾಪ ಮಾಡಲು ಅನುಮತಿ‌ ಕೊಟ್ಟಂತಿದೆ ಈ ಮಾತು. ತಾನು ಕೆಟ್ಟದ್ದನ್ನು ಮಾಡಿ ಅದನ್ನು ಸಮರ್ಥನೆ ಮಾಡಿಕೊಳ್ಳುವ ಜನರೆಲ್ಲಾ ಈ ಮಹೋದರನ ಸಂಬಂಧಿಗಳೇ ಸರಿ. ನಮ್ಮ ಒಡೆಯ ಮಾಡಿದ ಸೀತಾಪಹರಣ ಸರಿಯಾಗಿದೆ. ಕಪಿಗಳ ದಾಳಿ ಯಾವುದೋ ಅನ್ಯನಿಮಿತ್ತದಿಂದ ಆದದ್ದು ಎಂದೆಲ್ಲಾ ಹೇಳುತ್ತಾನವನು. ಕುಂಭಕರ್ಣನು ಒಬ್ಬನೇ ಹೋಗುವೆನೆಂದಾಗ ತನ್ನ ಪರಾಕ್ರಮ ಎಲ್ಲಿ ಮೂಲೆಗುಂಪಾಗುವುದೋ ಎಂದು ಭಾವಿಸಿದ ಮಹೋದರನು ಹೀಗೆಲ್ಲಾ ಮಾತನಾಡುವನು._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩