ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸

*पथश्च्युतायां समितौ रिपूणां धर्म्यां दधानेन धुरं चिराय । त्वया विपस्त्वय्यविपत्तिरम्यमाविष्कृतं प्रेम परं गुणेषु ।।*

_ವ್ಯಾಸರು ಯಾವ ಕಾರಣದಿಂದ ತನಗೆ ಪಾಂಡವರ ಮೇಲೆ ಒಲವು ಎನ್ನುವುದನ್ನು ವಿವರಿಸುತ್ತಿದ್ದಾರೆ. ಹಿಂದೆ ಪಾಂಡುವಿನ ಮರಣವಾದಾಗಲೂ, ರಾಜಸೂಯದ ಸಂದರ್ಭದಲ್ಲೂ, ದ್ರೌಪದಿಯ ಸ್ವಯಂವರದ ಸಂದರ್ಭದಲ್ಲೂ, ಈಗಲೂ ನಿಮ್ಮೊಡನೆ ನಾನಿರುವೆ. ಏಕೆಂದರೆ ನೀವು ಗುಣಗಳಲ್ಲಿ ತೋರಿದ ಪ್ರೇಮ. ಯಾರು ಗುಣಪಕ್ಷಪಾತಿಗಳೋ ಅವರೆಲ್ಲರೂ ನನ್ನ ಬಂಧುಗಳೇ ಸರಿ. ನೀವಂತೂ ಶತ್ರುಗಳು ಅನ್ಯಾಯವಾಗಿ ವರ್ತಿಸಿದಾಗಲೂ ಧರ್ಮವನ್ನು ಕಿತ್ತೊಗೆದವರಲ್ಲ. ಸಭೆಯಲ್ಲಿ ಮಡದಿಯ ಮಾನ ಹರಣ ಮಾಡುವ ಕೆಟ್ಟ ಕೆಲಸಕ್ಕೆ ಶತ್ರುಗಳು ತೊಡಗಿದಾಗಲೂ ಧರ್ಮದ ದಾರಿಗೆ ಶರಣಾದವರು. ಹೀಗೆ ಯಾರು ಕಷ್ಟದಲ್ಲೂ ಅಥವಾ ದುಃಖದಲ್ಲೂ ಧರ್ಮವನ್ನು ಆಶ್ರಯಿಸುವರೋ ಅವರು ನಿಜವಾದ ಧರ್ಮಾತ್ಮರು. ಲೋಕದಲ್ಲಿ ಹೆಚ್ಚಿನವರು  ಬಹಳ ದುಃಖ ಉಂಟಾದಾಗ ಧರ್ಮವನ್ನು ತ್ಯಜಿಸುವರು. ನಿನ್ನಂತೆ ವಿಪತ್ತಿನಲ್ಲೂ ಧರ್ಮ ಮೀರದವರು ವಿರಳ. ಸುಖವಾಗಿದ್ದಾಗ ಧರ್ಮದ ಆಚರಣೆ ನಡೆಸುವವರು ಬಹಳ ಜನ. ಈ ಎಲ್ಲಾ ಕಾರಣಗಳಿಂದ ನನಗೆ ಗುಣಾನುರಾಗಿಯಾದ ನಿನ್ನಲ್ಲಿ ಹೆಚ್ಚಿನ ಪಕ್ಷಪಾತ. ನಾವೂ ಧರ್ಮದ ಬಗ್ಗೆ ಸಾಕಷ್ಟು ಮಾತನಾಡುವೆವು. ಪ್ರವಚನಾದಿಗಳನ್ನು ಆಲಿಸುತ್ತೇವೆ. ಆದರೆ ಧರ್ಮಜನಂತೆ ಆಪತ್ತಿನಲ್ಲೂ ನಮ್ಮ ಧರ್ಮ ಬಿಡದೇ ಪಾಲಿಸುತ್ತೇವೆಯೇ! ಪಾಲಿಸಿದರೆ ವ್ಯಾಸರಂತಹ ಮಹಾತ್ಮರು ನಮಗೂ ದೊರೆತಾರು._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩