🌹ಮೇಘದೂತದ ಒಂದು ತಂಪು ಹನಿ 🌹
*त्वामारूढं पवनपदवीमुद्गृहीतालकान्ता: प्रेक्षिष्यन्ते पथिकवनिता: प्रत्ययादाश्वसन्त्य: । क: सन्नद्धे विरहविधुरां त्वय्युपेक्षेत जायां न स्यादन्योsप्यहमिव जनो य: पराधीनवृत्ति: ।।*
_ಓ ಗೆಳೆಯನೇ, ನನಗಾಗಿ ಹೊರಟ ನಿನ್ನನ್ನು ಅಂಗನೆಯರು ಸ್ವಾಗತಿಸುವರು. ಆಕಾಶ ಮಾರ್ಗದಲ್ಲಿ ಮೆಲ್ಲಮೆಲ್ಲನೆ ಸಾಗುತ್ತಿರುವ ನಿನ್ನನ್ನು ತುಂಬು ಜವ್ವನೆಯರು ಉಪ್ಪರಿಗೆಗಳ ಮೇಲೆ ನಿಂತು ಗಾಳಿಗೆ ಓಡುತ್ತಿರುವತಮ್ಮ ಉದ್ದನೆಯ ಕೂದಲುಗಳನ್ನು ಹಿಂದಕ್ಕೆ ಸರಿಸುತ್ತಾ ಅಥವಾ ಮುಂಗುರುಗಳನ್ನು ಹಿಂದಕ್ಕೆ ತಳ್ಳುತ್ತಾ ತುಂಬಿದ ಬಯಕೆಯಿಂದ ನಿನ್ನನ್ನೇ ದಿಟ್ಟಿಸುವರು. ದೂರದಲ್ಲೆಲ್ಲೋ ಕಾರ್ಯ ಮಗ್ನರಾಗಿರುವ ತಮ್ಮ ಪತಿ ಹಿಂದಿರುಗಿ ಬರಬಹುದು ಮಳೆಗಾಲ ಬಂತೆಂಬ ಕಾರಣದಿಂದ ಎಂಬುದೇ ಅವರ ಆಸೆಯ ಹೇತು.ನೀನು ಹೊರಟೆಯಂದರೆ ಅವರಿಗೆ ಸಮಾಧಾನ ಹಾಗೂ ನಿನ್ನ ಮೇಲೆ ಅಪಾರ ನಂಬಿಕೆ. ನಿನ್ನನ್ನು ಕಂಡ ಮೇಲೂ ವಿರಹದಿಂದ ಕಾತರಳಾದ ಮಡದಿಯನ್ನು ಯಾವ ಪುರುಷ ತಾನೇ ಉಪೇಕ್ಷಿಸಿಯಾನು! ನನ್ನಂತೆ ಪರರ ಅಧೀನದಲ್ಲಿ ಯಾರೂ ಇರಲಾರರು. ನಾನಾದರೋ ಶಾಪಾಧೀನನಾಗಿ ಮಡದಿಯನ್ನು ಬಿಟ್ಟು ಇಲ್ಲಿ ದು:ಖಿಸುತ್ತಿದ್ದೇನೆ. ಆದರೆ ಸಾಮಾನ್ಯ ಜನರಾರೂ ಬಹುಕಾಲದ ವಿರಹದಿಂದ ಮತ್ತಷ್ಟು ಹೆಚ್ಚಾದ ಪ್ರೀತಿಯುಳ್ಳ ಮಡದಿಯ ಮೊಗವನ್ನು ನೋಡದೆ ಇರಲಾರರು. ಎಷ್ಟು ಕಾರ್ಯಮಗ್ನರಾಗಿದ್ದರೂ ನಿನ್ನನ್ನು ಕಂಡಾಗಲೇ ತಮ್ಮ ಗೃಹ ಗಮನವನ್ನು ನಿಶ್ಚಯಿಸುವರು. ಈ ಕಾರಣದಿಂದಲೇ ಮಾನಿನಿಯರು ಆಸೆ ತುಂಬಿದ ಬಟ್ಟಲು ಕಣ್ಣುಗಳಿಂದ ಮುಂಗುರುಳು ಸರಿಸುತ್ತಾ ನಿನ್ನೆಡೆಗೆ ನೊಡುವರು.ಅದನ್ನು ಸವಿಯುತ್ತಾ ಮುಂದೆ ಸಾಗು. ಕಾಳಿದಾಸ ಶ್ಲೋಕದಲ್ಲಿ ಒಂದು ಚಿತ್ರವನ್ನೆ ಬರೆದು ಓದುಗನೆದುರು ಬಿಡಿಸಿಟ್ಟಿದ್ದಾನೆ. ಅರ್ಥಾಂತರ ನ್ಯಾಸ ಅಲಂಕಾರ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ