💐 ಪ್ರತಿಮಾ ನಾಟಕದ ಒಂದು ಸುಮ 💐

*सकृत् पश्यामि वा रामं,  सकृत् पश्यामि वा पुन: । गतायुरमृतेनेव जीवामीति मतिर्मम ।।*

_ಡಾ.ಕೃಷ್ಣಮೂರ್ತಿಯವರ ಕನ್ನಡಾನುವಾದ- *ನೆಟ್ಟನೆ ರಾಮನನೊರ್ಮೆಯೆ ಮುಟ್ಟಲೊಡಂ ಮಗುಳ್ದುಮೊರ್ಮೆಯುಂ ಕಾಣಲೊಡಂ ತೊಟ್ಟನೆ ಸುಧೆಯಿಂ ಹರಣಂ ಬಿಟ್ಟನುಮೆಂತಂತೆ ಜೀವಿಪೆಂ ವಲಮಾನುಂ*

_ದಶರಥ ಕಂಬನಿ ಮಿಡಿಯುತ್ತಿದ್ದಾನೆ. ಹಾ ರಾಮ, ಸೀತೆ, ಲಕ್ಷ್ಮಣ ಮಕ್ಕಳೇ ನನ್ನನ್ನೊಮ್ಮೆ ಅಪ್ಪಿಕೊಳ್ಳಿ, ಅಯ್ಯೋ, ಎಲ್ಲಿ ಹೋದರಿವರು, ರಾಮನನ್ನು ಒಂದು ಸಲ ನಾನು ಸ್ಪರ್ಶಿಸಲೇ, ಅಥವಾ ಒಂದೇ ಒಂದು ಸಲ ರಾಮನನ್ನು ನೋಡಿ ಕಣ್ತುಂಬಿಕೊಳ್ಳಲೇ, ನನ್ನ ಬದುಕಿಗೆ ಅಷ್ಟೇ ಸಾಕು. ಈಗಲೋ ಆಗಲೋ ಸಾಯುವ ವ್ಯಕ್ತಿಗೆ ಅಮೃತ ದೊರೆತರೆ ಹೇಗೆ ಸಂತೋಷವಾಗುವುದೋ ಹಾಗೇ ನನಗೊಮ್ಮೆ ರಾಮನ ದರ್ಶನ ಹಾಗೂ ಸ್ಪರ್ಶ ಎರಡೂ ಆದರೆ ನನ್ನನ್ನು ಬಿಟ್ಟು ಹೋಗುತ್ತಿರುವ ಈ ಅಲ್ಪಕಾಲದ ಜೀವ ಇನ್ನಷ್ಟು ದಿನ ಬಾಳಬಲ್ಲದು. ಮರುಭೂಮಿಯಲ್ಲಿ ಬಾಯಾರಿಕೆಯಿಂದ ಅಲೆಯುವವನಿಗೆ ನೀರಿನ ಒರತೆ ಕಂಡಂತೆ ನನ್ನ ಬದುಕಿನಲ್ಲಿ ರಾಮ ಒಂದು ಬಾರಿಯಾದರೂ ಕಾಣಿಸಿಯಾನೇ! ಅಯ್ಯೋ ಹೊರಟು ಹೋದಿರಲ್ಲ, ಈ ವೃದ್ಧನನ್ನು ನಡು ನೀರಿನಲ್ಲಿ ಕೈ ಬಿಟ್ಟು, ಇದು ನಿಮಗುಚಿತವೇ! ನಮ್ಮ ಬದುಕು ಹೆಚ್ಚು ಕಾಲ ಇರಲಾರದು. ಆ ಸಮಯದಿ ದಶರಥನಂತೆ ರಾಮನ ಸ್ಮರಣೆ ಅವನನ್ನು ಪಡೆಯುವ ಬಗೆ ಹೇಗೆ ಎನ್ನುವುದ ಮನಗಂಡಾಗ ಜೀವ ಜವನಿಗೆ ಸೇರದೇ ಯವ ತಿನ್ನುವ ಭವದಲ್ಲಿ ಇರುವ ಭಾಗ್ಯ ದೊರಕೀತು.ಉಪಮಾ ಅಲಂಕಾರ. ನಮ್ಮ ಬದುಕಿಗೂ ರಾಮನಾಮವೆಂಬ ಅಮೃತ ದೊರಕಿ ಜೀವ ಸಾರ್ಥಕವಾಗಲಿ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩