🌺 ಪ್ರತಿಮಾನಾಟಕದ ಒಂದು ಕುಸುಮ 🌺
*धन्या: खलु वने वातास्तटाकपरिवर्तिन: । विचरन्तं वने रामं ये स्पृशन्ति यथासुखम् ।।*
_ದಶರಥನ ಮಾತು. ಕಾಡಿನ ಸರೋವರಗಳ ಎಡೆಯಲ್ಲಿ ಸುಳಿವ ಗಾಳಿ ನಿಜಕ್ಕೂ ಧನ್ಯ. ಅಥವಾ ವನದ ಗಿಡ- ಮರಗಳು ಲತೆಗಳು, ವನೌಕಸಗಳು ನಿಜಕ್ಕೂ ಧನ್ಯ. ಏಕೆಂದರೆ ವನದಲ್ಲಿ ಸಂಚರಿಸುವ ರಾಮನನ್ನು ಬೇಕಾದಷ್ಟು ಸ್ಪರ್ಶಿಸುತ್ತಿರುವ ಈ ವಾಯು ನಿಜಕ್ಕೂ ಧನ್ಯ. ರಾಮನ ಸ್ಪರ್ಶದಿಂದಲೇ ಪುನೀತಳಾದವಳು ಅಹಲ್ಯೆ. ಅವನ ಸ್ಪರ್ಶ ಕಲ್ಲಿಗೂ ನವಚೈತನ್ಯ ಕೊಡುವಂತಹದ್ದು. ಅಂತಹ ಸ್ಪರ್ಶ ಸವಿಯುವ ಭಾಗ್ಯ ಈ ಇಳಿವಯಸ್ಸಿನಲ್ಲಿ ಅವನ ತಂದೆಯಾದ ನನಗಿಲ್ಲ ಅಥವಾ ನಾನೇ ದೂರ ಮಾಡಿ ಕಳೆದುಕೊಂಡೆ. ರಾಮನ ದೇಹಸ್ಪರ್ಶವು ವಾತವನ್ನೂ ಶುದ್ಧೀಕರಿಸುತ್ತದೆ. ತಂದೆ ತಾಯಂದಿರಿಗೆ ಬೇರೆಲ್ಲದಕ್ಕಿಂತ ಮಕ್ಕಳ ದೇಹದ ಸ್ಪರ್ಶ ಅತ್ಯಂತ ಆನಂದದಾಯಕ. ರಘುವಂಶದಲ್ಲಿ ಕಾಳಿದಾಸನ ಒಂದು ಶ್ಲೋಕದಲ್ಲೂ ಇದೇ ತರಹದ ಮಾತಿದೆ. *ಜ್ಞಾತೌ ಸುತಸ್ಪರ್ಶಸುಖೋಪಲಂಭಾತ್* ಕೌಸಲ್ಯೆ ಸುಮಿತ್ರೆಯರು ಮಕ್ಕಳನ್ನು ನೋಡಲು ಆನಂದಾಶ್ರು ಬಿಡಲಿಲ್ಲ. ಆದರೆ ಸುತಸ್ಪರ್ಶದ ಸುಖವು ಅವರೇ ಎಂಬುದನ್ನು ಗುರುತಿಸಿತು. ಅಂತಹ ಮಗನ ಸ್ಪರ್ಶ ನನಗೆ ದೊರಕುತ್ತಿಲ್ಲ. ವನವಾಯು ಪಡೆದು ಧನ್ಯವಾಯಿತು ಎಂಬ ಭಾವ ದಶರಥನ ಮಾತಿನಲ್ಲಿ ಕಾಣುವುದು._
📜 ಸಂಗ್ರಹ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ