💐 ಪ್ರತಿಮಾನಾಟಕದ ಒಂದು ಕುಸುಮ 💐
*राज्ये त्वामभिषिच्य सन्नरपतेर्लाभात् कृतार्था: प्रजा: कृत्वा तत्सहजान् समानविभवान् कुर्वात्मन: सन्ततम् । इत्यादिश्य च ते तपोवनमितो गन्तव्यमित्येतया कैकेय्या हि तदन्यथा कृतमहो नि:शेषमेकक्षणे ।।*
_*ಡಾ.ಕೃಷ್ಣಮೂರ್ತಿಯವರ ಅನುವಾದ- ನಿನ್ನಂ ರಾಜ್ಯದಿ ಪಟ್ಟಗಟ್ಟಿ ಜನರಂ ಸದ್ಭೂಪಸಂತುಷ್ಟರಂ ಗೈಯುತ್ತುಂ ನಿಜಸೋದರರ್ಗವಿರತಂ ನಿನ್ನಂತೆವೋಲ್ ವೈಭವಂ ಬರ್ಪನ್ನಂ ನಡೆ ನೋಳ್ಪುದೆಂದು ನಿನಗಂ ಪೇಳ್ದೈದುವೆಂ ಕಾಡಿಗೆಂ ದಿರ್ದೆಂ ಕೈಕೆಯಿನೆಲ್ಲಮೊಂದೆ ಚಣದೊಳ್ ನಿಶ್ಶೇಷಮಾಯ್ತಕ್ಕಟಾ*
_ದಶರಥನ ದು:ಖದ ಮಾತು. ನನ್ನ ಎಣಿಕೆಯೇ ಬೇರೆಯಾಗಿತ್ತು. ನಿನ್ನನ್ನು ರಾಜ್ಯದ ಅಧಿಕಾರದಲ್ಲಿ ಕುಳ್ಳಿರಿಸಿ, ಸದ್ಗುಣಪೂರ್ಣನಾದ ನಿನ್ನಂತಹವನು ರಾಜನಾದುದರ ಕಾರಣ ಪ್ರಜೆಗಳನ್ನು ಕೃತಕೃತ್ಯರನ್ನಾಗಿ ಮಾಡಿ,ಅಥವಾ ಅವರ ಮನದಿಷ್ಟವನ್ನು ನೆರವೇರಿಸಿ, ನಿನ್ನ ಜೊತೆಗೆ ಜನಿಸಿದ ಸಹಜರನ್ನು ಭರತಾದಿಗಳನ್ನು ನಿನ್ನ ಭೋಗಭಾಗ್ಯಗಳಲ್ಲೂ ಪಾಲುದಾರರನ್ನಾಗಿಸು ಎಂದು ನಿನಗೆ ಆದೇಶಿಸಿ ಈ ಅಯೋಧ್ಯೆಯಿಂದ ವನಕ್ಕೆ ತೆರಳಬೇಕೆಂಬ ನನ್ನ ಸಂಕಲ್ಪವೇನಿತ್ತೋ ಅದನ್ನೆಲ್ಲವನ್ನೂ ಸಂಪೂರ್ಣವಾಗಿ ಒಂದೇ ಒಂದು ಕ್ಷಣದಲ್ಲಿ ಆ ಕೈಕೇಯಿಯು ಹಾಳುಮಾಡಿದಳು. ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವ ಮಾತಿನಂತೆ ದಶರಥನ ಎಣಿಕೆಯೆಲ್ಲವೂ ಅವನಿಗೇ ಎಟುಕದಾಯಿತು. ಸನ್ನಡತೆಯ ಮಗನನ್ನು ರಾಜನಾಗಿ ನೇಮಿಸಿದರೆ ಪ್ರಜೆಗಳಲ್ಲಿ ಅಸಮಾಧಾನಕ್ಕೆ ಅವಕಾಶವಿಲ್ಲ. ಇಲ್ಲಿ ನಾಲ್ವರೂ ಸಜ್ಜನರಿದ್ದರೂ ರಾಮನು ಪ್ರಜೆಗಳಿಗೂ ಪ್ರೀತಿಪಾತ್ರನು. ಅವರು ದಂಗೆಯೇಳಲು ಅಥವಾ ರಾಜಾಜ್ಞೆ ಉಲ್ಲಂಘಿಸಲು ಅವಕಾಶವಿರುವುದಿಲ್ಲ. ಹೀಗೆ ಮಾಡಿದಾಗ ಅಣ್ಣ ತಮ್ಮಂದಿರಲ್ಲಿ ಅಸಮಾಧಾನ ಈರ್ಷ್ಯೆ ತಲೆದೋರುವುದಲ್ಲಾ ಎಂದರೆ ಅದಕ್ಕಾಗಿ ತಮ್ಮಂದಿರನ್ನೂ ನಿನ್ನ ಸಮಾನಾಗಿ ನೋಡಿಕೊಳ್ಳುವಂತೆ ಆದೇಶ ಮಾಡುತ್ತಿದ್ದೆ. ನೀನು ಅವರಲ್ಲಿ ಭೇದವೆಣಿಸಿದರೆ ಅವರ ಮನಸ್ಸು ನೊಂದೀತು, ಬೆಂದೀತು, ಮುಂದೆ ಬೆಂಕಿ ಹುಟ್ಟೀತು. ಆದರೆ ಅವರಲ್ಲೂ ಅತ್ಯಂತ ಆದರ ತೋರಿದಾಗ ಅವರು ನಿನ್ನನ್ನೇ ಸೇವಿಸುವರು. ಹೀಗೆಲ್ಲ ರಾಜ್ಯದ ವ್ಯವಸ್ಥೆಯನ್ನು ಮಾಡಿ ಜೀವನದ ಸಂಧ್ಯಾಕಾಲದಲ್ಲಿ ಆರಣ್ಯಕನಾಗಿ ತಪಸ್ಸು ಮಾಡುತ್ತಾ ದೇಹ ತೊರೆಯುವ ಆಲೋಚನೆ ನನಗಿತ್ತು. ಆದರೆ ಕೈಕೇಯಿ ಅದನ್ನೆಲ್ಲ ಕ್ಷಣದಲ್ಲಿ ಧ್ವಂಸ ಮಾಡಿದಳು. ಅವಳು ಕೇಳಿದ ಎರಡೇ ಎರಡು ವರಗಳಿಂದ ನನ್ನ ಬದಲು ನೀನೇ ಪತ್ನಿಯೊಡನೆ ಕಾಡಿಗೆ ಹೋಗಬೇಕಾಯಿತು. ಅಯ್ಯೋ, ವಿಧಿಯ ಬರಹ ಎಷ್ಟು ಘೋರ! ನಾವು ಹಾಗಾಗಿಯೇ ಮುಂದಿನ ಆಗು ಹೋಗುಗಳ ಬಗ್ಗೆ ಹೆಚ್ಚು ಚಿಂತಿಸದೆ ವರ್ತಮಾನದ ಪರಿಸ್ಥಿತಿಯನ್ನು ಮನದಟ್ಟು ಮಾಡಿಕೊಳ್ಳಬೇಕು. ಮುಂದೆ ಹೀಗಾಗುವುದು ಎಂದೆಲ್ಲಾ ಚಿಂತಿಸಿ ಇಂದಿನ ದಿನದ ಸೊಗಸನ್ನು ಅನುಭವಿಸದೇ ಇರುವುದು ತರವಲ್ಲ. ಫಲದ ಪರಿಣಾಮಗಳನ್ನು ಭಗವಂತನಿಗೇ ಬಿಟ್ಟು ನಮ್ಮ ಕರ್ಮಗಳನ್ನು ಅವಿರತ ಮಾಡುತ್ತಾ ಮುನ್ನಡೆಯೋಣ. ಅತಿಯಾದ ನಿರೀಕ್ಷೆಯು ದಶರಥನಂತೆ ದು:ಖಕ್ಕೆ ಕಾರಣವಾದೀತು._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ