🌹ಮೇಘದೂತದ ಒಂದು ಮಧು ಬಿಂದು 🌹
*तां चावश्यं दिवसगणनातत्परामेकपत्नीं अव्यापन्नामविहतगतिर्द्रक्ष्यसि भ्रातृजायाम् । आशाबन्ध: कुसुमसदृशं प्रायशो ह्यङ्गनानां सद्य: पाति प्रणयिहृदयं विप्रयोगे रुणद्धि ।।*
_ಯಕ್ಷನು ಮೇಘಕ್ಕೆ ನುಡಿಯುವ ಮಾತು. ನೀನು ನನ್ನ ಸಹೋದರನಿದ್ದಂತೆ. ಅತಿಶೀಘ್ರವಾಗಿ ನನ್ನ ಊರನ್ನು ತಲುಪಿದ ನಿನ್ನನ್ನು ಪತಿಯ ಅಗಲುವೆಕೆಯಿಂದ ದು:ಖಿತಳಾದ, ಶಾಪ ಮುಗಿದೊಡನೆ ಪತಿ ಬಂದೇ ಬರುವನೆಂಬ ಆಸೆಯಿಂದ ದಿವಸಗಳನ್ನು ಎಣಿಸುತ್ತಿರುವ ಆ ನನ್ನ ಮನದರಸಿ ಪ್ರಾಣವನ್ನು ಹಿಡಿದಿಟ್ಟುಕೊಂಡು ಸ್ವಾಗತಿಸುವಳು. ಪತಿಯ ಆಗಮನ ಇಷ್ಟು ದಿನಗಳಾದ ಮೇಲೆ ಖಂಡಿತ ಆಗುವುದೆಂಬ ಭರವಸೆಯಿಂದ ಪ್ರಾಣವನ್ನು ಕಳೆದುಕೊಳ್ಳದೆ ನನ್ನ ಸಂದೇಶವನ್ನು ನಿನ್ನ ಮೂಲಕ ನಿರೀಕ್ಷಿಸುತ್ತಿರುವಳು. ಅವಳು ನನ್ನ ಏಕೈಕ ಪತ್ನಿ. ಹಾಗಾಗಿ ಪ್ರೀತಿಯ ಬೆಸುಗೆ ಹೆಚ್ಚು. ಎಲ್ಲೂ ನಿಲ್ಲದೆ ಆಗಸದ ದಾರಿಯಲ್ಲಿ ವೇಗವಾಗಿ ಸಾಗಿಬಂದ ನಿನ್ನನ್ನು ನೋಡಿ ಸಂತೋಷಪಡುವಳು. ನೀನು ನನ್ನ ಸಹೋದರನಾದ್ದರಿಂದ ಅತ್ತಿಗೆಯನ್ನು ನೋಡುವುದರಲ್ಲಿ ಯಾವ ಸಂಕೋಚವೂ ಬೇಡ ನಿನಗೆ. ಅವಳು ಅಷ್ಟು ಕಾಲ ಪ್ರಾಣ ಹಿಡಿದಿಟ್ಟುಕೊಳ್ಳಲು ಕಾರಣ ಪತಿಯು ಬಂದೇ ಬರುವನೆಂಬ ಆಸೆಯ ಬಂಧ. ಕವಿ ಸುಂದರವಾಗಿ ಇದನ್ನು ನಿರೂಪಿಸಿದ್ದಾನೆ. ಹೂವು ತೊಟ್ಟಿನಿಂದ ಕಳಚಿಬೀಳಲು ಸಾಕಷ್ಟು ಸಮಯವೇನೂ ಬೇಡ. ಸ್ವಲ್ಪ ಒಣಗುತ್ತಿದ್ದಂತೆ ಆಧಾರ ಕಳಚಿ ಬೀಳುವುದು. ಇಲ್ಲೂ ಆ ಮಾನಿನಯ ಪ್ರಾಣವೆಂಬ ಹೂವು ಪತಿಯೆಂಬ ಆಧಾರವಿಲ್ಲದೆ ಕಳಚಿ ಬಿದ್ದುಹೋಗಿರಬಹುದೆಂದು ನೀನು ಶಂಕಿಸಬೇಡ. ಆಸೆಯೆಂಬ ತೊಟ್ಟು ಪ್ರಿಯನ ವಿರಹದಿಂದ ಕೂಡಲೇ ಕಳಚಿಬೀಳುವ ಸ್ತ್ರೀಯರ ಹೃದಯವನ್ನು ಪ್ರಾಯಶ: ತಡೆಯುತ್ತದೆ. ಅದು ಹೂವಿನಂತೆ ಮೃದು. ಮಾನಿನಿಯರ ಅಂಗಾಂಗಗಳು ಮಾತ್ರವಲ್ಲ, ಅವರ ಮನವೂ ಮೃದು. ಸ್ವಲ್ಪ ವಿರಹವನ್ನೂ ಅದು ಸಹಿಸಲಾರದು. ಆದರೆ ಆಸೆಯೇ ಆ ಹೂವಿನಂತಿರುವ ಅವರ ಮನಸ್ಸು ಧೈರ್ಯ ಕಳೆದುಕೊಳ್ಳದಂತೆ ತಡೆಯುತ್ತದೆ ಎಂದು ಭಾವ. ಸದ್ಯ: ಪಾತಿ ಕೂಡಲೇ ತೊಟ್ಟಿನಿಂದ ಕಳಚಿಬೀಳುವ ಕುಸುಮಸದೃಶವಾದ ಅಂಗನೆಯರ ಮನವು ಅಸೆಯೆಂಬ ದೃಢವಾದ ತೊಟ್ಟಿನ ಕಾರಣ ಬೀಳದೇ ಕಾಯುವುದು. ಅಥವಾ ಅಸೆಯೇ ವಿಶ್ವಾಸ ಕಳೆದುಕೊಳ್ಳದಂತೆ ತಡೆಯುತ್ತದೆ. ನನ್ನ ಪತ್ನಿ ಸಚ್ಚಾರಿತ್ರ್ಯಳು. ನೀನು ಸಹೊದರ. ಹಾಗಾಗಿ ಅತ್ತಿಗೆಯನ್ನು ನೋಡಬಹುದೇ ಎಂಬ ಶಂಕೆ ನಿನಗೆ ಬೇಡ, ಅದೂ ಪತಿಯ ವಿರಹದ ಕಾಲದಲ್ಲಿ. ಪ್ರಣಯಪಕ್ಷಿಗಳು ವಿಯೋಗವಿದ್ದರೂ ಆಸೆಯೆಂಬ ಬಂಧದಿಂದ ಬಂಧಿಸಲ್ಪಟ್ಟಿವೆ. ಈ ಆಸೆಯು ವಿನಾಶವನ್ನು ತಡೆಯಬಲ್ಲ ಅದ್ಭುತವಾದ ಪವಾಡಶಕ್ತಿಯನ್ನು ಹೊಂದಿದೆಯೋ ಏನೋ! ಅರ್ಥಾಂತರ ನ್ಯಾಸ ಅಲಂಕಾರ. ನಮ್ಮ ಜೀವನವೂ ಯಕ್ಷನ ಪತ್ನಿಯ ಜೀವನದಂತೆ. ಎಷ್ಟೇ ಎಡರು-ತೊಡರುಗಳಿದ್ದರೂ ಮುಂದೊಂದು ಆಶಾಕಿರಣವಿದೆ ಎನ್ನುವ ಭರವಸೆಯಲ್ಲೇ ಜೀವನದ ಬಂಡಿಯನ್ನು ನಡೆಸುತ್ತೇವೆ. ಭರವಸೆ ಕಳೆದುಕೊಳ್ಳದಿರುವುದೇ ನಿಜವಾದ ಜ್ಞಾನದ ಲಕ್ಷಣ. ಎಷ್ಟೇ ತೊಂದರೆ ಬಂದಾಗಲೂ ನಮಗಿಂತಲೂ ಕಷ್ಟದಲ್ಲಿ ಅನೇಕರಿದ್ದಾರೆ. ಅವರಿಗಿಂತ ನಾವೆಷ್ಟೋ ವಾಸಿ ಎಂಬ ಚಿಂತನೆ ಹಾಗೂ ಇಂದು ಕೆಟ್ಟದಿನವಾದರೆ ಏನು ನಾಳೆ ಒಳ್ಳೆಯ ದಿನ ಬಂದೇ ಬರುವದೆಂಬ ಆಸೆ ಇದ್ದಲ್ಲಿ ಜೀವನಚಕ್ರ ಸರಿಯಾಗಿ ಉರುಳುವುದು. ಇದನ್ನೇ ಕವಿ ಹೇಳಿದ್ದಾನೆ *ಚಕ್ರಾರಪಂಕ್ತಿರಿವ ಭಾಗ್ಯಪಂಕ್ತಿ:* ಎಂದು. ನಮ್ಮ ಸುಖದು:ಖಗಳು ಕಷ್ಟ ನಷ್ಟ ಗಳು ಮಾನಾಪಮಾನಗಳು ಸಂಪತ್ತು- ವಿಪತ್ತುಗಳು ಚಕ್ರದ ಅಂಚಿನಂತೆ ತಿರುಗುತ್ತಲೇ ಇರುತ್ತವೆ. ಆ ತಿರುಗಾಟದಲ್ಲಿ ಭರವಸೆ ಕಳೆದುಕೊಳ್ಳದೆ ಯಾರನ್ನೂ ನಿಂದಿಸದೇ ಯಕ್ಷನ ಪತ್ನಿಯಂತೆ ಕಾಯುತ್ತಿದ್ದರೆ ಎಂದಾದರೊಂದು ದಿನ ಸಂತೋಷದ ಮಳೆ ಮೋಡದಿಂದ ಸುರಿಯಬಹುದೆಂಬ ಸಂದೇಶ ಕವಿಯ ಆಶಯ.ಉತ್ತಮ ಆಸೆಗಳೇ ನಮ್ಮ ಜೀವನದ ತೊಟ್ಟು ಪ್ರಾಣವೆಂಬ ಹೂವಿನಿಂದ ಕಳಚಿಹೋಗದಂತೆ ತಡೆಯುತ್ತಿರಲಿ ಎಂದು ಆಶಿಸೋಣ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ