💐 ಪ್ರತಿಮಾನಾಟಕದ ಒಂದು ಸುಮ 💐
*द्रुमा धावन्तीव द्रुतरथगतिक्षीणविषया नदीवोद्वृत्ताम्बुर्निपतति मही नेमिविवरे । अरव्यक्तिर्नष्टा स्थितमिव जवाच्चक्रवलयं रजश्चाश्वोद्भूतं पतति पुरतो नानुपतति ।।*
ಡಾ.ಕೃಷ್ಣಮೂರ್ತಿಯವರ ಕನ್ನಡಾನುವಾದ- *ತರುಗಳ್ ಮೇಣೋಡುವಂತಿರ್ಪುವು ರಥಜವದಿಂ ಕ್ಷೀಣರೂಪಗಂಳಿಂದಂ ತೊರೆವೋಲ್ ಮೇಲೇಳ್ವ ನೀರಿಂ ಪೊಡವಿಯುರುಳ್ವುದೀ ಗಾಲಿಬಾಯೋಳ್ ಸವೇಗಂ ಅರೆಗಳ್ ಬೇರ್ವೇರೆ ನೋಡಲ್ ನೆರೆಯವು ಜವದಿಂ ನಿಂದವೋಲ್ ಗಾಲಿ ತೋರ್ಕುಂ ತುರಗೋದ್ಧೂತಂ ರಜಂ ಮುಂದೆಸೆಯೊಳೆ ನಿಲೆ ಪಿಂತೆಂತು ಮಿಲ್ಲಾಯ್ತು ಮತ್ತಂ*
_ಭಾಸನ ಸಹಜತೆಗೆ ಕೈಗನ್ನಡಿ ಈ ಪದ್ಯ. ಪದ್ಯವನ್ನು ಓದಿದಂತೆ ಚಿತ್ರವು ಕಣ್ಣಮುಂದೆ ಬರುವ ಕಾರಣ ಚಿತ್ರಕಾವ್ಯವೆಂದೂ ಕರೆಯಬಹುದು.( ಅವಧಾನದಲ್ಲಿ ಛಂದಸ್ಸಿನ ಅನುಸಾರ ಚಿತ್ರಕಾವ್ಯ ರಚನೆ) ಊರಿನಿಂದ ಕರೆ ಬಂದಿದೆ ಭರತನಿಗೆ. ರಥದಲ್ಲಿ ವೇಗವಾಗಿ ಹಿಂತಿರುಗುತ್ತಿದ್ದಾನೆ. ನೃಪಸೂನುವಿನ ಆಣತಿಯಂತೆ ಸಾರಥಿ ವೇಗ ಹೆಚ್ಚಿಸಿದ್ದಾನೆ. ರಥವನ್ನು ಅದರ ವೇಗವನ್ನು ನೋಡಿದ ಭರತನಾಡುವ ಮಾತು. ಎಷ್ಟೊಂದು ವೇಗದಿಂದ ಹೋಗುತ್ತಿದೆಯಂದರೆ ರಥದೊಡನೆ ಮರಗಳೂ ಓಡುವಂತಿವೆ. ಶೀಘ್ರವಾಗಿ ಚಲಿಸುತ್ತಿರುವ ರಥದ ಚಲನೆಯಿಂದ ಬಲು ಚಿಕ್ಕದಾಗಿ ದೂರದಲ್ಲೆಲ್ಲೋ ಕಾಣಿಸುತ್ತಿರುವ ಮರಗಳು ರಥದೊಡನೆ ಬರುತ್ತಿವೆಯೇನೋ ಎಂಬ ಸಂಶಯ ಹುಟ್ಟುತ್ತಿದೆ. (ಚಿಕ್ಕವರಾಗಿದ್ದಾಗ ನಾವು ಬಸ್ಸು ಅಥವಾ ರೈಲಿನೊಡನೆ ಮರಗಳೂ ಬರುತ್ತಿವೆ ಎಂದೇ ಭಾವಿಸುತ್ತಿದ್ದೆವು ಅದರ ವೇಗವನ್ನು ಅಳೆಯಲಾರದೆ.) ರಥದ ವೇಗಕ್ಕೆಕ್ಷಣದಲ್ಲಿ ಇಲ್ಲೆಲ್ಲೊ ಕಾಣಿಸುವ ಮರಗಳು ಇನ್ನೆಲ್ಲೋ ಕಾಣುತ್ತಿವೆ. ದಾರಿಯ ಇಕ್ಕೆಲಗಳಲ್ಲಿ ಕೆಲವೆಡೆ ಇರುವ ಜಲಾಶಯಗಳ ಅಥವಾ ದಾರಿಯಲ್ಲಿ ಚಕ್ರಕ್ಕೆ ಸಿಕ್ಕಿದ ತಗ್ಗುಗಳಲ್ಲಿ ನೆಲೆನಿಂತ ನೀರು, ವೇಗದಿಂದ ಎದ್ದೆದ್ದು ಕುಣಿಯುತ್ತಾ ಭೂಮಿಯ ಒಳಭಾಗವನ್ನು ನದಿಯಂತೆ ಹೊಕ್ಕುತ್ತಿದೆ. ರಥದ ಗಾಲಿಗೆ ಸಿಕ್ಕ ನೀರು ಮೇಲಕ್ಕೆ ಚಿಮ್ಮಿ ಮತ್ತೆ ಕೆಳಗೆ ಬಂದು ಬಹಳ ಕೆಳಗೆ ಹೋಗಿ ಸೇರುವಂತೆ ಕಾಣುವುದು ಅಥವಾ ಸುತ್ತಮುತ್ತಲ ಪ್ರದೇಶದ ನೀರು ರಥದ ವೇಗದಿಂದಾಗಿ ಹಾರಿ ಬೀಳುತ್ತಾ ಭೂಮಿಯ ಆಳವನ್ನು ಹೊಕ್ಕಂತೆ ಕಾಣುತ್ತಿದೆ.( ಇದರ ಕಲ್ಪನೆ ನನಗೆ ಅಷ್ಟು ಸರಿಯಾಗಿ ಸಿಗುತ್ತಿಲ್ಲ ಹೀಗಿರಬಹುದೆಂದುಕೊಂಡಿದ್ದೇನೆ) ಇನ್ನು ರಥದ ಚಕ್ರದ ಅರಗಳು ನಷ್ಟವಾದಂತಿವೆ. ಚಕ್ರದ ವೇಗವು ಅದರ ಕಡ್ಡಿಗಳೆಲ್ಲ ನಾಶವಾಗಿ ಹೋದಂತೆ ಕಾಣಿಸುತ್ತಿದೆ. ನಾವೂ ವೇಗವಾಗಿ ತಿರುಗುವ ವಾಹನಗಳ ಚಕ್ರದಲ್ಲಿ ಚಕ್ರ ಬಿಟ್ಟು ಬೇರೇ ಏನೂ ಕಾಣದಿರುವುದನ್ನು ಗಮನಿಸಬಹುದು. ಇನ್ನು ಚಕ್ರದ ವಲಯ ಅಥವಾ ಸುತ್ತಲಿನ ಭಾಗ ನಿಂತಂತಿದೆ. ಅದು ಓಡದೆ ಹಾಗೆಯೇ ನಿಂತುಕೊಂಡಿದೆಯೇನೋ ಎನ್ನುವ ರೀತಿ ತೋರುತ್ತಿದೆ. ಕುದುರೆಗಳ ಗೊರಸಿನಿಂದ ಎದ್ದ ಧೂಳಿನ ರಾಶಿ ಮುಂದೆ ಮುಂದೆ ಬೀಳುತ್ತಿದೆ ಹೊರತು ಹಿಂದೆ ಬರುತ್ತಿಲ್ಲ. ಸಹಜವಾಗಿ ಅದರೆ ವಾಹನ ಮುಂದೆ ಹೋದಾಗ ಧೂಳು ಹಿಂದೆ ವ್ಯಾಪಿಸುತ್ತಿದೆ. ಆದರೆ ಇಲ್ಲಿ ರಥದ ವೇಗದಿಂದಾಗಿ ಧೂಳು ಮುಂದೆಯೇ ಬೀಳುವಂತೆ ತೋರುತ್ತಿದೆ. ಉತ್ಪ್ರೇಕ್ಷೆ ಹಾಗೂ ಸ್ವಭಾವೋಕ್ತಿ ಅಲಂಕಾರಗಳು. ಭರತನ ಮನ ಯಾವಾಗ ಜನ್ಮಭೂಮಿಯನ್ನು ಸ್ಪರ್ಶಿಸುವೆನೋ ಎಂಬ ಕಾತರದಿಂದ ಕೂಡಿದೆ. ರಥವನ್ನು ಕಂಡಾಗಲೂ ಅವನಿಗೇ ತನ್ನ ಮನದ ವೇಗವೇ ಭಾಸವಾಗುತ್ತಿದೆ. ಮರ ಓಡುವಂತೆ, ನೀರು ಭೂಮಿಯ ಆಳ ಹೊಕ್ಕಂತೆ, ಅರ ನಾಶವಾದಂತೆ, ಚಕ್ರ ನಿಂತಂತೆ, ಧೂಳು ಮುಂದೆ ಬೀಳುವಂತೆಲ್ಲಾ ಕವಿ ಉತ್ಪ್ರೆಕ್ಷೆಗಳ ಮೂಲಕ ಸುಂದರ ಚಿತ್ರಣ ಒದಗಿಸಿದ್ದಾನೆ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ