ವೇದ-ಧರ್ಮ ಭಾಗ-೯ 📙
*ಅಥರ್ವ ವೇದದ ಸಂಹಿತೆ*
_ಮೂರು ವೇದಗಳು ಸ್ವರ್ಗ ಮೋಕ್ಷ ವಿಷ್ಣು- ಬ್ರಹ್ಮಾದಿ ಲೋಕಗಳು ಮುಂತಾದ ಆಮುಷ್ಮಿಕ ಅಂದರೆ ಕಣ್ಣಿಗೆ ಕಾಣದ ಬದುಕಿನ ನಂತರ ದೊರೆಯಬಹುದಾದ ಫಲಗಳ ಬಗೆಗೆ ವಿಮರ್ಶಿಸಿದರೆ ಅಥರ್ವ ವೇದವು ಐಹಿಕ ಫಲಗಳ ಬಗ್ಗೆ ಹೆಚ್ಚು ವಿವರ ನೀಡಿದೆ. ಹಾಗಂತ ಬ್ರಹ್ಮ ಜ್ಞಾನದ ಮಹಿಮೆಯನ್ನು ಪಡೆಯುವ ಬಗೆಯನ್ನೂ ಹೇಳಿಲ್ಲವೆಂದಲ್ಲ. ಅದರೆಡೆಗೆ ಹೆಚ್ಚು ಗಮನವಿಲ್ಲ. ನಮ್ಮ ಜೀವನದ ಸುಖದು:ಖ ಅನುಭವಗಳು, ಅವುಗಳ ಸಾಧನಗಳು , ಅದರ ಅನುಷ್ಠಾನ ಇವನ್ನೆಲ್ಲಾ ಇಲ್ಲಿ ಹೇಳಲಾಗಿದೆ. *ಥರ್ವ* ಎಂದರೆ ಕುಟಿಲತೆ, ಹಿಂಸೆ, ಅನ್ಯಾಯ ಇತ್ಯಾದಿಗಳು. ಅದಿಲ್ಲದೆಯೇ ಹೇಗೆ ಸುಖ ಪಡೆಯುವುದು ಎಂಬ ಸಾಮಾನ್ಯರ ಪ್ರಶ್ನೆಗೆ ಈ ಸಂಹಿತೆ ಉತ್ತರ ನೀಡುವುದು. ಎಲ್ಲರ ಪ್ರಶ್ನೆ ಅದೇ ಆಗಿದೆ- ಸ್ವಲ್ಪವೂ ಅಪ್ರಾಮಾಣಿಕರಾಗದೇ, ಅನ್ಯಾಯ ಮಾಡದೇ, ಸಾಕ್ಷಿಯನ್ನು ತ್ಯಜಿಸದೇ, ಧರ್ಮ ಬಿಡದೇ ಸುಖ ಸಿಗುವುದೇ ಎಂದರೆ ಅದಕ್ಕೆ ಅಥರ್ವ ವೇದದ ಉತ್ತರ ಸಿಗುವುದು. ಥರ್ವದ ನಿಷೇಧವೇ ಅಥರ್ವ. ಅದಕ್ಕಾಗಿ ಈ ವೇದ ಬೇರೆ ಬೇರೆ ಉಪಾಯಗಳನ್ನು ಹೇಳುತ್ತದೆ.
ವಂಚನೆಯ ಕಡೆಗೆ ಕೊಂಚವೂ ಯೋಚಿಸದಂತೆ, ಹಿಂಸೆಯನ್ನು ಸಹಿಸದಂತೆ ಮನಕ್ಕೆ ಪ್ರೇರಣೆ ಕೊಡುವ ಉದಾತ್ತ ಉದ್ದೇಶ ಅಲ್ಲಲ್ಲಿ ಪ್ರತಿಪಾದಿಸಲ್ಪಟ್ಟಿದೆ. ಮಹಾಭಾಷ್ಯದ ವಾಕ್ಯದಂತೆ ಈ ವೇದದ ಶಾಖೆಗಳು ಒಂಭತ್ತಿದ್ದರೂ ಈಗ ಕೇವಲ ಶೌನಕ ಹಾಗೂ ಪಿಪ್ಪಲಾದ ಎಂಬ ಎರಡು ಸಿಗುತ್ತವೆ. ಈ ಸಂಹಿತೆಯಲ್ಲಿ ೨೦ ಕಾಂಡಗಳೂ, ೭೩೧ ಸೂಕ್ತಗಳೂ, ೫೯೮೭ ಮಂತ್ರಗಳು ಇವೆ. ಇದನ್ನು *ಋಷಿ ಸಂಹಿತೆ* ಎಂದೂ ಕರೆಯುತ್ತಾರೆ. ಬ್ರಹ್ಮನ ಮಾನಸ ಪುತ್ರ *ಅಥರ್ವ*ನಿಂದ ದರ್ಶಿಸಲ್ಪಟ್ಟದ್ದು ಎಂದೂ ಕೆಲವರ ಮತ.
*ಇಷ್ಟಪ್ರಾಪ್ತಿ ಅನಿಷ್ಟ ಪರಿಹಾರಾಯ ಅಲೌಕಿಕಮುಪಾಯಂ ಯೋ ವೇದಯತಿ ಸ ವೇದ:* ಎಂಬಂತೆ ಬಯಸಿದ್ದು ಸಿಗುವುದು, ಬೇಡದಿದ್ದುದನ್ನು ನಿರಾಕರಿಸುವುದು, ಇವೆರಡರ ಸಾಧನೆಗೆ ಅಲೌಕಿಕವಾದ ಉಪಾಯವನ್ನು ಹೇಳಿಕೊಡುವುದೇ ವೇದ.
ಅಥರ್ವವೇದದ ವಿಷಯಗಳನ್ನು ಹೀಗೆ ವಿಂಗಡಿಸಬಹುದು.
೧. ಭೈಷಜ್ಯ ಸೂಕ್ತ: ೧೪೪ ಸೂಕ್ತಗಳಲ್ಲಿ ನೂರಕ್ಕೂ ಮೀರಿದ ರೋಗಗಳು , ಅವುಗಳ ಲಕ್ಷಣ, ಬಗೆಬಗೆಯ ಪರಿಹಾರಗಳು ( ಔಷಧಿ, ಮೂಲಿಕೆ, ಕಷಾಯ, ಮಂತ್ರ, ರಕ್ಷೆ) ಗಿಡಮೂಲಿಕೆಗಳ ಲಕ್ಷಣ ಹಾಗೂ ಉಪಯೋಗಗಳು ಹೀಗೆ ಸುಮಾರಾಗಿ ಆಯುರ್ವೇದವನ್ನೇ ಇಲ್ಲಿ ಹೇಳಲಾಗಿದೆ.
೨. ಆಯುಷ್ಯ ಸೂಕ್ತ: ಎಲ್ಲರೂ ಬಯಸುವ ದೀರ್ಘಾಯುಷ್ಯವನ್ನು ದೇವತೆಗಳಲ್ಲಿ ನಾನಾ ಸ್ತುತಿಗಳ ಮೂಲಕ ಪಡೆಯುವ ವಿಧಾನ ಇಲ್ಲಿದೆ. ಸ್ವಾಸ್ಥ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ನಾವು ಅನುಸರಿಸಬೇಕಾದ ರಕ್ಷೆಗಳನ್ನು ಇಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ.
೩. ಪೌಷ್ಟಿಕ ಸೂಕ್ತ: ಕೃಷಿ- ಪಶುಪಾಲನೆಯ ಬಗೆಗೆ ಮಾಹಿತಿ, ಮನೆ ಕಟ್ಟುವುದರ ಬಗ್ಗೆ ( ಇಂಜಿನಿಯರಿಂಗ್) , ವ್ಯಾಪಾರದಲ್ಲಿ ಅನುಸರಿಸಬೇಕಾದ ನಿಯಮಗಳು, ತಂತ್ರಗಳು, ಬರ ಬಂದಾಗ ಮಳೆ ತರಿಸುವ ಸೂಕ್ತಗಳು ಹೀಗೆ ದಿನನಿತ್ಯದ ಉಪಯೋಗಕ್ಕೆ ಅವಶ್ಯವಿರುವ ಸೂಕ್ತಗಳ ಸಂಕಲನ ಇಲ್ಲಿದೆ.
೪. ಸ್ತ್ರೀ ಕರ್ಮ ಸೂಕ್ತಗಳು: ಪತಿ ಪತ್ನಿಯರ ವರ್ತನೆ ಹೇಗಿದ್ದರೆ ಅನ್ಯೋನ್ಯತೆ ಬರುವುದು, ವಿವಿಧ ವಿವಾಹಗಳ ಮಾಹಿತಿ, ಸಂತಾನಕ್ಕಾಗಿ ಮಾಡಬೇಕಾದ ಸ್ತುತಿ ಹಾಗೂ ಉಪಾಯಗಳು, ತನ್ನ ಸವತಿಯನ್ನು ವಶ ಮಾಡಿಕೊಳ್ಳುವ ಹಾಗೂ ಪತಿಯ ಪ್ರೇಮವನ್ನು ಸಂಪಾದಿಸಿಕೊಡುವ ಮಂತ್ರಗಳು ಹೀಗೆ ಬಹಳಷ್ಟು ವಿಷಯ ಈ ಭಾಗದಲ್ಲಿ ನಿರೂಪಿತವಾಗಿದೆ.( ಸವತಿ ಇದ್ದರೆ ಮಾತ್ರ😀ಮಾಡಿಕೊಳ್ಳಬೇಕಿಲ್ಲ)
೫.ಪ್ರಾಯಶ್ಚಿತ್ತ ಸೂಕ್ತ: ಧರ್ಮವಿರುದ್ಧವಾದ ಕರ್ಮಗಳು, ಗೊತ್ತಿದ್ದೊ ಗೊತ್ತಿಲ್ಲದೆಯೋ ಮಾಡಿದ ಸಾವಿರಾರು ತಪ್ಪು ಗಳಿಗೆ ನಾನಾ ಪ್ರಾಯಶ್ಚಿತ್ತ ಗಳು ಇಲ್ಲಿ ವಿಧಿಸಲ್ಪಟ್ಟಿವೆ. ಹಾಗೆಯೇ ಮತ್ತೆ ಅಧರ್ಮ ಮಾಡುವುದನ್ನೂ ನಿಷೇಧಿಸಿದೆ. ಕೆಲವು ಮತಗಳಂತೆ ಪ್ರತಿ ಬಾರಿ ತಪ್ಪು ಮಾಡಿ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಅವಕಾಶ ಇಲ್ಲಿಲ್ಲ.
೬. ಬ್ರಹ್ಮಣ್ಯ ಸೂಕ್ತ: ಸೃಷ್ಟಿ ಪ್ರಕ್ರಿಯೆ, ಬ್ರಹ್ಮನ ಸ್ವರೂಪ ಚಿಂತನೆ, ಜೀವ ಸ್ವರೂಪದ ವಿವರಣೆ ಹೀಗೆ ಆಧ್ಯಾತ್ಮಿಕ ವಿಷಯ ಇಲ್ಲಿ ಪ್ರಮುಖವಾಗಿ ಪ್ರತಿಪಾದಿತವಾಗಿದೆ. ಈ ಸೂಕ್ತಗಳ ಕಾರಣ ಇದನ್ನು ಬ್ರಹ್ಮವೇದವೆಂದೂ ಕರೆಯುತ್ತಾರೆ.
೭. ರಾಜಕರ್ಮ ಸೂಕ್ತ: ಹೆಸರೇ ಹೇಳುವಂತೆ ರಾಜನ ಕರ್ಮಗಳು, ತಂತ್ರಗಳು, ರಾಜನೀತಿ, ಪ್ರಜಾಪಾಲನೆ, ಶತ್ರುಗಳ ನಿಗ್ರಹಕ್ಕೆ ಉಪಯುಕ್ತ ಮಂತ್ರಗಳು ಹಾಗೂ ಯಜ್ಞಗಳು, ಯುದ್ಧಕ್ಕೆ ಸಂಬಂಧಿಸಿದ ಭಿನ್ನ ಭಿನ್ನ ರಥಗಳು, ವಾದ್ಯಗಳು ಹೀಗೆ ರಾಜರಿಗೆ ಸಂಬಂಧಿಸಿದ ಅನೇಕ ಮಾಹಿತಿ ಇಲ್ಲಿದೆ.
೮. ಅಭಿಚಾರ ಸೂಕ್ತ: ದೈತ್ಯರು, ರಾಕ್ಷಸರು, ಶತ್ರುಗಳ ನಾಶಕ್ಕಾಗಿ ಅನುಸರಿಸಬೇಕಾದ ಕ್ರಿಯೆಗಳು, ಅಭಿಚಾರಗಳು, ವಿವಿಧ ಉಪಚಾರಗಳು ಇಲ್ಲಿ ಹೇಳಲ್ಪಟ್ಟಿವೆ. ಬೇರೆಲ್ಲಾ ಮಂತ್ರಗಳಿಗೆ ಹೋಲಿಸಿದರೆ ಈ ಮಂತ್ರಗಳ ಸಂಖ್ಯೆ ತುಂಬಾ ಕಡಿಮೆ. ಹಾಗಿದ್ದರೂ ಪೂರ್ವಾಗ್ರಹ ಪೀಡಿತ ತಥಾಕಥಿತ ಸ್ವಯಂಘೋಷಿತ ವಿದ್ವಾಂಸರು ಹಾಗೂ ಬುದ್ಧಿಮಾಂದ್ಯ ಜನರು ಇದನ್ನು ಅಭಿಚಾರ ವೇದ ಎನ್ನುತ್ತಾರೆ. ಕೆಟ್ಟ ದೃಷ್ಟಿ ಇದ್ದಲ್ಲಿ ಕಾಣುವುದೆಲ್ಲ ಕೆಟ್ಟದ್ದೇ ಎನ್ನುವುದಕ್ಕೆ ಇದೇ ಉದಾಹರಣೆ.
ಈ ಸಂಹಿತೆಯಲ್ಲಿ ಧರ್ಮ, ದರ್ಶನ, ಅಧ್ಯಾತ್ಮ, ತತ್ವಮೀಮಾಂಸೆ, ರಾಜನೀತಿ, ಸಮಾಜಶಾಸ್ತ್ರ, ಧರ್ಮಶಾಸ್ತ್ರ, ಅರ್ಥಶಾಸ್ತ್ರ, ಜ್ಞಾನ ಹಾಗೂ ವಿಜ್ಞಾನ ಗಳ ಸಂಬಂಧಗಳ ಬಗ್ಗೆ ಸಾಕಷ್ಟು ವಿಷಯಗಳ ಮೇಲೆ ಬೆಳಕು ಚೆಲ್ಲಿರುವುದು ಕಂಡುಬರುತ್ತದೆ. ರಸಗಳು- ಛಂದಸ್ಸುಗಳು- ಅಲಂಕಾರಗಳ ಬಳಕೆಯ ದೃಷ್ಟಿಯಲ್ಲಿ ಈ ವೇದ ಬಲು ಸುಂದರ. ಜೀವನವನ್ನು ವನ ಮಾಡಿಕೊಳ್ಳದೇ ಹೇಗೆ ಉಪವನವನ್ನಾಗಿ ಮಾಡಿಕೊಂಡು ನಡೆಸಬಹುದೆಂಬುದು ಇಲ್ಲಿ ಸ್ಪಷ್ಟವಾಗಿ ಹೇಳಲ್ಪಟ್ಟಿದೆ. ವ್ಯಾವಹಾರಿಕ ದೃಷ್ಟಿಯಲ್ಲಿ ಪ್ರೇರಣೆ, ಚಿಂತನೆ, ಮನನ,ಸದಾಚಾರ, ನೀತಿ ಮಾತುಗಳ ಉಪದೇಶ, ಕರ್ತವ್ಯ- ಅಕರ್ತವ್ಯಗಳ ಉಪದೇಶದಿಂದ ಈ ವೇದ ಅತ್ಯಂತ ಮಹತ್ವದ್ದಾಗಿದೆ. ಜೀವನದ ಔನ್ನತ್ಯದ ದೃಷ್ಟಿಯಲ್ಲಿ ಈ ವೇದದ ಅಧ್ಯಯನ ತುಂಬಾ ಅವಶ್ಯಕ._
📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ