🌹ಮೇಘದೂತದ ಒಂದು ಬಿಂದು 🌹
*मन्दं मन्दं नुदति पवनश्चानुकूलो यथा त्वां वामश्चायं नदति मधुरं चातकस्ते सगन्ध: । गर्भाधानक्षणपरिचयान्नूनमाबद्धमाला: सेविष्यन्ते नयनसुभगं खे भवन्तं बलाका: ।।*
_ಓ ಮನಮೋಹಕ ಮೇಘನೇ, ಮೆಲ್ಲ ಮೆಲ್ಲನೆ ಬೀಸುವ ಗಾಳಿಯು ನಿನ್ನನ್ನು ನಿಧಾನಕ್ಕೆ ಕರೆದೊಯ್ಯುತ್ತದೆ. ನೀನು ಹೊರಡುವ ಘಳಿಗೆಯೂ ಶುಭವಾಗಿದೆ ಎಂಬುದನ್ನು ಕವಿ ಪ್ರತಿಪಾದಿಸುತ್ತಿದ್ದಾನೆ. ಬಿರುಗಾಳಿಗೆ ಮೋಡ ಎಲ್ಲೆಲ್ಲೊ ದಾರಿ ತಪ್ಪಿ ಹೋಗಬಹುದು. ಆದರೆ ಈಗ ಬೀಸುತ್ತಿರುವ ಗಾಳಿಯು ಮೋಡಕ್ಕೆ ಅದರದ್ದೇ ಆದ ಈ ಯಕ್ಚನ ನಿರ್ದೇಶನದ ದಾರಿಯಲ್ಲಿ ಸಾಗಲು ಅನುಕೂಲವಾಗಿದೆ. ಅಷ್ಟಲ್ಲದೇ ಎಡಭಾಗದಲ್ಲಿ ನಿನ್ನ ಸಂಬಂಧಿಯಾದ ಚಾತಕ ಪಕ್ಷಿಯು ಮಧುರವಾಗಿ ಉಲಿಯುತ್ತಿದೆ. ಚಾತಕ ಪಕ್ಷಿಗಳು ಮಳೆ ಬರುವುದನ್ನೇ ಕಾಯುತ್ತಾ ಕುಳಿತಿರುತ್ತವೆ ಎಂಬುದೊಂದು ನಂಬಿಕೆ. ಹಾಗಾಗಿ ಅವುಗಳು ಮೋಡಕ್ಕೆ ಮಳೆಸುರಿಸುವ ಕಾರಣದಿಂದ ಆತ್ಮೀಯರು, ಸಂಬಂಧಿಗಳು. ಇಲ್ಲಿ ಅವುಗಳ ಪ್ರೀತಿಯೆ ಸಂಬಂಧ. ಅವುಗಳ ಮಧುರ ನಾದವು ನಿನ್ನ ಗಮನಕ್ಕೆ ಉತ್ಸಾಹವನ್ನು ತಂದುಕೊಡುತ್ತದೆ. ಇನ್ನು ಹೆಣ್ಣು ಕೊಕ್ಕರೆಗಳಿಗಂತೂ ನಿನ್ನ ಮೇಲೆ ಬಲು ಅಕ್ಕರೆ. ಮಳೆಗಾಲ ಬಂತೆಂದರೆ ತಮ್ಮನ್ನು ಪ್ರಿಯಕರರು ಸೇರಿ ಗರ್ಭವನ್ನು ಧರಿಸುವೆಂಬ ಭಾವಿ ಆನಂದವನ್ನು ಕಲ್ಪಿಸಿಕೊಂಡು ನಿನ್ನ ಸುತ್ತಲೂ ಮಾಲೆಯಾಕಾರದಲ್ಲಿ ನೆರೆದು ನಿನ್ನನ್ನು ಸಂತೋಷಪಡಿಸುತ್ತವೆ. ಅಂಗನೆಯರ ಹಿಂಡು ಸುತ್ತಲೂ ನೆರೆದಾಗ ಯಾವ ಗಂಡು ಖುಷಿಪಡಲಾರ! ಅದೂ ನೀನು ಸುಂದರ ಕಾಯ. ಬೆಳ್ಳಗೆ ಹೊಳೆಯುತ್ತಾ ತಂಪಾದ ಗಾಳಿಯಲ್ಲಿ ತೇಲುವ ನಿನ್ನನ್ನು ಆ ಬಲಾಕ ಅಂಗನೆಯರು ಖುಷಿಯಿಂದ ನೋಡುತ್ತಾ ಮುಂದೆ ತಾವು ಗರ್ಭಿಣಿಯಾಗುವರೆಂಬ ಸಂತೋಷದಿಂದ ಸುತ್ತಲೂ ನೆರೆಯುತ್ತಾರೆ. ಪಕ್ಷಿಗಳು ಸ್ವಲ್ಪ ತ್ರಿಕೋಣಾಕಾರದಲ್ಲಿ ಯಾವಾಗಲೂ ಚಲಿಸುವವು. ಅದನ್ನೇ ಕವಿ ಮಾಲೆಯಾಕಾರವೆಂದು ವರ್ಣಿಸಿದ್ದಾನೆ. ಇಂತಹ ಸುಸಮಯದಲ್ಲಿ ನೀನು ನನಗಾಗಿ ನನ್ನ ಪ್ರೇಯಸಿಯ ದು:ಖ ನೀಗಲು ಪ್ರಯಾಣ ಬೆಳೆಸಲೇಬೇಕು. ಶುಭ ಶಕುನಗಳಿದ್ದಾಗ ಮಾಡಿದ ಪಯಣವು ಯಶಸ್ಸನ್ನು ಸಂಪಾದಿಸುತ್ತದೆ. ಹಾಗಾಗಿ ಮೇಘರಾಜ ನಡೆ ಮುಂದೆ ಎನ್ನುತ್ತಿರುವನು ವಿರಹಿ ಯಕ್ಷ. ಎಡಭಾಗದಲ್ಲಿ ಬರುವಿಕೆ ರಮ್ಯತೆಯ ಸಂಕೆತವೂ ಹೌದೆನ್ನುವರು ಪ್ರಾಚೀನರು. ಚಾತಕದ ವಾಮಭಾಗದ ಗಮನ ಅದು ರಮ್ಯ. ಮಂದಮಾರುತ, ಚಾತಕಗಳ ದ್ವನಿ, ಹೆಣ್ಣು ಕೊಕ್ಕರೆಗಳ ದರ್ಶನ ಈ ಮೂರು ಪ್ರಯಾಣಕ್ಕೆ ಶುಭ ಸೂಚಕವೆಂದು ಶಕುನ ಶಾಸ್ತ್ರವೂ ಹೇಳುತ್ತದೆ. ನಯನಸುಭಗ ನೀನು. ನೋಡಿದ ರಸಿಕರೆಲ್ಲಾ ಆನಂದಿಸುತ್ತಾರೆ. ಅಂತಹುದರಲ್ಲಿ ಹೆಣ್ಣು ಕೊಕ್ಕರೆಗಳು ನಿನ್ನನ್ನು ಮುತ್ತುತ್ತವೆ. ಮದುವೆಗೆ ಹೊರಟಾಗ ಹಿಂದೆ ಬರುವ ದಿಬ್ಬಣದಂತೆ ಅವುಗಳು ಹಿಂಬಾಲಿಸುತ್ತವೆ. ಕವಿಗೆ ಮಳೆ ಬರುತ್ತಿದ್ದರೂ ಸುಂದರ ಮೋಡ ಕವಿದರೂ ಸುಂದರ ಬಿಸಿಲು ಬಿದ್ದರೂ ಸುಂದರ. ಹಾಗಾಗಿಯೇ ಏನೋ ಮಾತಿರುವುದು- ಸೌಂದರ್ಯ ದೃಶ್ಯದಲ್ಲಿರುವುದಲ್ಲ, ನೋಡುಗನ ಕಣ್ಣಿನಲ್ಲಿ ಎಂದು._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ