💐ಪ್ರತಿಮಾ ನಾಟಕದ ಒಂದು ಪುಷ್ಪ💐

*अयममरपते: सखा दिलीपो, रघुरयमत्रभवानज: पिता मे । किमभिगमनकारणं भवद्भि: सह वसने समयो ममापि तत्र ।।*

_ದಶರಥ ಆಚಮನ ಮಾಡಿ ಪಿತೃಗಳನ್ನು ಸ್ಮರಿಸುತ್ತಿದ್ದಾನೆ. ರಾಮನ ವಿರಹದಿಂದ ಬೆಂದ ದಶರಥನನ್ನು ಸಾಂತ್ವನ ಮಾಡಲು ಅವನ ಪೂರ್ವಜರು ಪ್ರತ್ಯಕ್ಷರಾಗಿದ್ದಾರೆ. ಪಿತೃಗಳ ದರ್ಶನ ಕಾಲದಲ್ಲಿ ಶುದ್ಧಿಗಾಗಿ ಆಚಮನ ಮಾಡಿ ಅವರನ್ನೇ ಈಕ್ಷಿಸುತ್ತಿದ್ದಾನೆ. ಓ , ಇವರು, ಇಂದ್ರನ ಗೆಳೆಯ ದಿಲೀಪಮಹಾರಾಜರು, ( ಇಂದ್ರನಿಗೆ ಅಸುರರ ಜೊತೆಗಿನ ಯುದ್ಧದಲ್ಲಿ ಸಹಾಯ ಮಾಡಿ ಗೆಳೆತನವನ್ನು ಸಂಪಾದಿಸಿದವನು) ಇವರು ರಘು ಮಹಾರಾಜರು ನಮ್ಮ ಪಿತಾಮಹರು, ಇವರು ನಮ್ಮ ತಂದೆ ಪೂಜ್ಯರಾದ ಅಜ ಮಹಾರಾಜರು, ಅಲ್ಲ, ನಿಮ್ಮ ಆಗಮನಕ್ಕೆ ಕಾರಣವಾದರೂ ಏನಿರಬಹುದು, ಕೇವಲ ನನ್ನ ನೊಂದ ಮನಕ್ಕೆ ಸಾಂತ್ವನ ಹೇಳುವುದಷ್ಟೇ ಉದ್ದೇಶವೇ! ಹಾಗೇನೂ ಇರಲಾರದು. ನಿಮ್ಮ ಜೊತೆಗೆ ವಾಸ ಮಾಡಲು ಬೇಗ ಬರಬೇಕೆಂಬ ಕಾರಣದಿಂದಲೇ ನೀವು ಬಂದದ್ದೇನೋ! ನನ್ನ ಅಂತ್ಯ ಸಮೀಪಿಸಿದೆ. ಇನ್ನೇನಿದ್ದರೂ ಪಿತೃಲೊಕದಲ್ಲಿ ವಾಸವೇ ಹೊರತು ಇಲ್ಲಲ್ಲ ಎನ್ನುವುದನ್ನು ನೆನಪು ಮಾಡಲೆಂದೇ ಬಂದಿರುವರೋ ಏನೋ ಈ ನನ್ನ ಅಜ್ಜಯ್ಯಂದಿರು. ಶೀಘ್ರದಲ್ಲೇ ಈ ಶರೀರವನ್ನು ತ್ಯಾಗಮಾಡುವವನಿದ್ದೇನೆ. ನಿಮ್ಮ ಜೊತೆಯ ವಾಸವನ್ನು ನೆನಪಿಸಿಕೊಡಲೆಂದೇ ನೀವು ಬಂದಂತಿದೆ. ರಾಮನಿಲ್ಲದೇ ದಶರಥನ ಆತ್ಮ ಈ ದೇಹದಲ್ಲೇ ಇರಲು ಒಪ್ಪುತ್ತಿಲ್ಲ. ತನ್ನ ಸಾವು ಸಮೀಪಿಸಿತೆಂಬುದನ್ನು ಅವನು ಪಿತೃಗಳ ಆಗಮನವೆಂಬ ಹೇತುವಿನಿಂದ ತೋರಿಸಿ ಕೊಡುತ್ತಿದ್ದಾನೆ. ಪಿತೃಗಳು ದೇವತೆಗಳಿಗಿಂತಲೂ ಹೆಚ್ಚು ಶುದ್ಧಿಯನ್ನು ಅಪೇಕ್ಷಿಸುತ್ತಾರೆ. ಹಾಗಾಗಿ ದರ್ಶನ ಮಾಡಬೇಕಾದರೂ ಆಚಮನ ಮಾಡಿಯೇ ದರ್ಶಿಸುವುದು. ಕವಿ ಈ ದೃಶ್ಯದ ಮೂಲಕ ರಾಜನ ಅಂತ್ಯವನ್ನು ವಿಭಿನ್ನವಾಗಿ ಚಿತ್ರಿಸಿದ್ದಾನೆ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩