ಚಾರುದತ್ತ ೧೦

👳ಚಾರುದತ್ತ  ಬೆಳಕು-೧೦🌞

*कामं प्रदोषतिमिरेण न दृश्यसे त्वं सौदामनीव जलदोदरसन्निरुद्धा । त्वां सूचयिष्यति हि वायुवशोपनीतो गन्धश्च शब्दमुखराणि च भूषणानि ।।*

_ಈ ಶ್ಲೋಕ ಅರ್ಥದ ದೃಷ್ಟಿಯಿಂದ ಸಾಮಾನ್ಯವಾಗಿದ್ದರೂ ಕವಿ ಬಳಸಿದ ಉಪಮೆ ಸುಂದರವಾಗಿದೆ. ವಸಂತಸೇನೆ ಕಾಣದಾಗಿದ್ದಾಳೆ. ರಾತ್ರಿಯ ಹೊತ್ತೇರುತ್ತಿದ್ದಂತೆ ಕತ್ತಲೆ ಮಾತ್ರ ಕಾಣುತ್ತಿದೆ. ಸುತ್ತಮುತ್ತಲಿರಲಿ ಪಕ್ಕದಲ್ಲಿರುವ ವ್ಯಕ್ತಿಯನ್ನೇ ಗುರುತಿಸದಷ್ಟು ಕತ್ತಲೆ ವ್ಯಾಪಿಸಿದೆ. ವಿಟನು ಅವಳನ್ನು ಕಾಣದಿದ್ದರೂ ಅವಳ ಇರುವಿಕೆಯನ್ನು ಗುರುತಿಸುತ್ತಿದ್ದಾನೆ. ಮೇಘದ ಉದರದೊಳಗೆ ಅಡಗಿರುವ ಮಿಂಚು ಮಿಂಚಿದಾಗ ಮಾತ್ರ ಕಾಣುವಂತೆ ನೀನು ಇಲ್ಲೆಲ್ಲೋ ಅಡಗಿರುವೆ. ನನ್ನ ದುರದೃಷ್ಟದಿಂದ ಈಗೆಲ್ಲೋ ಮರೆಯಾಗಿರುವೆ. ಆದರೆ ನಿನ್ನ ಇರುವಿಕೆಯನ್ನು ನನ್ನ ಮನ ಸಾರಿ ಸಾರಿ ಹೇಳುತ್ತಿದೆ. ಆ ನೀನು ಧರಿಸಿದ ಮಲ್ಲಿಗೆಯ ಕಂಪು ಗಾಳಿಯಲ್ಲಿ ತೇಲಿ ತೇಲಿ ಮೂಗನ್ನು ಅಡರುತ್ತಿದೆ. ಮೈಗೆ ಪೂಸಿದ ಚಂದನದ ಪರಿಮಳ ಮತ್ತೆ ಮತ್ತೆ ನನ್ನನ್ನು ಸೆಳೆಯುತ್ತಿದೆ. ನೀನು ಒಂದೇ ಒಂದು ಮಾತನ್ನು ಆಡದಿದ್ದರೂ ಅಡಿಯಿಂದ ಮುಡಿಯವರೆಗೂ ಧರಿಸಿದ ನೂಪುರ,ಸೊಂಟಪಟ್ಟಿ, ಬಗೆಬಗೆಯ ಹಾರಗಳು, ಕಿವಿ ಓಲೆ ಇವೆಲ್ಲವೂ ಮತ್ತೆ ಮತ್ತೆ ಇನಿದನಿಯಲ್ಲಿ ನನ್ನನ್ನೇ ಸ್ವಾಗತಿಸುತ್ತಿವೆ. ಹಾಗಾಗಿ ಕಾಣದಿದ್ದರೂ ಇಲ್ಲೇ ಸಮೀಪದಲ್ಲಿ ಇರುವೆಯೆನ್ನುವುದು ಸತ್ಯ. ನಿನ್ನನ್ನು ಕೆಲಕ್ಷಣಗಳಲ್ಲೇ ಸಮೀಪಿಸುವೆ. ಕವಿಯು ಇಲ್ಲಿ ಬಳಸಿರುವ ಜಲದನ ಉದರದೊಳಗೆ ಅಡಗಿರುವ ಮಿಂಚೆಂಬ ಉಪಮೆ ಬಹಳ ಸುಂದರವಾಗಿದೆ._

✍ ಸಂಗ್ರಹ ಶ್ರೀನಿಧಿ ಅಭ್ಯಂಕರ್

ಎಲ್ಲಾ ಲೇಖನಗಳಿಗಾಗಿ ಭೇಟಿ ನೀಡಿ  

http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩