ಚಾರುದತ್ತ ೯

👳ಚಾರುದತ್ತ  ಬೆಳಕು-೯🌞

*तरुणजनसहायश्चिन्त्यतां वेशवासो विगणय गणिका त्वं मार्गजाता लतेव । वहसि हि धनहार्यं प्रभूतं शरीरं सममुपचर भद्रे सुप्रियं चाप्रियं च ।।*

_ವಿಟನ ಮತ್ತು ಶಕಾರನ ಕೋರಿಕೆಗೆ ವಸಂತಸೇನೆ ತಣ್ಣೀರು ಎರಚಿದಾಗ ಸಿಟ್ಟಿನಿಂದ ವಿಟನು ಹೀಗೆ ಬೈಯ್ಯುತ್ತಾನೆ. ಎಲೆ ವೇಶ್ಯೆ, ನೀವಿರುವುದೇ ನಮ್ಮಂತಹ ತರುಣ ಜನರ ಉಪಯೋಗಕ್ಕಾಗಿ. ನೀನು ವಾಸವಿರುವ ಸ್ಥಳ ನಮ್ಮಂತಹ ಕಾಮಿಗಳಿಗೆ ಮೀಸಲು‌. ನೀನೇನು ಮುತ್ತೈದೆ ಎಂದು ಭಾವಿಸಬೇಡ. ಹಾಗೆ ಭಾವಿಸುವುದಾದರೆ ಅಲ್ಲಿ ವಾಸ ತರವಲ್ಲ. ನೀನು ದಾರಿಯಲ್ಲಿ ಹುಟ್ಟಿದ ಬಳ್ಳಿಯಂತೆ ಸಕಲರ ಸಂಸರ್ಗಕ್ಕೆ ಯೋಗ್ಯಳಾದವಳು. ದಾರಿಯಲ್ಲಿ ಯಾವುದೋ ಯೋಗದಿಂದ ಹುಟ್ಟಿದ ಬಳ್ಳಿಯ ಮೇಲೆ ಆಧಿಪತ್ಯ ಸ್ಥಾಪಿಸಲು ಸಾಧ್ಯವೇ! ಅಥವಾ ಅದರ ಸೊಗಸನ್ನು ತೋರಲಾರೆ ಎಂದು ನಿರಾಕರಿಸಲು ಸಾಧ್ಯವೇ! ಅದರಂತೆ ವೇಶ್ಯಾಗೃಹವಾಸಿಯಾದ ನೀನು ನಮ್ಮನ್ನು ನಿರಾಕರಿಸಲಾರೆ. ನಿನ್ನ ಶರೀರ ವ್ಯಾಪಾರಕ್ಕೆ ಇರುವಂತಹದು. ದುಡ್ಡಿನಿಂದ ಕೊಂಡುಕೊಳ್ಳಬಹುದಾದ ಶರೀರವನ್ನು ಧರಿಸಿರುವಿ. ಪ್ರಿಯವನ್ನೂ ಅಪ್ರಿಯವನ್ನೂ ಸಮನಾಗಿ ಉಪಚರಿಸುವುದನ್ನು ರೂಢಿಸಿಕೊ. ಇದು ಇಷ್ಟ ಇದು ಕಷ್ಟ ಎಂದರೆ ನಿನ್ನ ವೃತ್ತಿಯೇ ಕಷ್ಟವಾದೀತು. ಇಷ್ಟಾನಿಷ್ಟಗಳಲ್ಲಿ ಸಮನಾದ ಭಾವವಿದ್ದರೆ ಮಾತ್ರ ಸುಖವಾಗಿ ಬದುಕಲು ಸಾಧ್ಯ ಎಂಬುದನ್ನು ಮರೆಯದೆ ನಮ್ಮೊಡನೆ ಹೆಜ್ಜೆ ಹಾಕು. ವೇಶ್ಯೆಯಿಂದ ನಾವು ಕಲಿಯಬೇಕಾದ ಗುಣವೇ ಅದು. ಸಮಚಿತ್ತತ್ವವು ಅವಳ ವೃತ್ತಿಗೆ ಪೂರಕ‌. ಅದನ್ನೇ ವಿಟನು ನುಡಿಯುತ್ತಿದ್ದಾನೆ._ *ನಿರ್ಗುಣಾನಪಿ ನ  ದ್ವೇಷ್ಟಿ ನ ರಜ್ಯತಿ ಗುಣಿಷ್ವಪಿ ವಿತ್ತಮಾತ್ರಂ ಸಮಾಲೋಕ್ಯ ಸಾ ರಾಗಂ ದರ್ಶಯೇತ್ ಬಹಿಃ* _
_ದುಷ್ಟರನ್ನು ದ್ವೇಷಿಸದೇ, ಸಜ್ಜನರನ್ನು ಆದರಿಸದೇ, ದುಡ್ಡಿನ ಮುಖವನ್ನು ಮಾತ್ರ ನೋಡುತ್ತಾ, ವಿತ್ತವನ್ನು ನೋಡಿ ಚಿತ್ತೈಸುವವಳೇ ಗಣಿಕೆ. ಹಾಗಾಗಿ ನಮ್ಮನ್ನು ಅನಾದರಿಸಿದರೆ ಸರಿಯಾಗದು ಎನ್ನುತ್ತಿದ್ದಾನೆ ವಿಟ. ಒಮ್ಮೆ ಚಾರಿತ್ರ್ಯ ಹಾಳಾದರೆ ಲೋಕ ನಮ್ಮನ್ನು ನೋಡುವ ಅದರಲ್ಲೂ ಸ್ತ್ರೀಯರನ್ನು ನೋಡುವ ಪರಿಯನ್ನು ಕವಿ ಸೊಗಸಾಗಿ ತೆರೆದಿಟ್ಟಿದ್ದಾನೆ._

✍ ಸಂಗ್ರಹ ಶ್ರೀನಿಧಿ ಅಭ್ಯಂಕರ್

ಎಲ್ಲಾ ಲೇಖನಗಳಿಗಾಗಿ ಭೇಟಿ ನೀಡಿ  

http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩