ಪದಶಕ್ತಿ ೨೨
📝📕ಪದ ಶಕ್ತಿ ೨೨📕📝
*ಉಮಾ*
_ಹಿಮವಂತ ಅಥವಾ ಪರ್ವತರಾಜನ ಮಗಳಾದ ಪಾರ್ವತಿಯ ಹೆಸರು. ಒಂದರ್ಥದಲ್ಲಿ ಲಕ್ಷ್ಮಿಯೂ ಉಮೆಯೇ. ओ: मा ಅಂದರೆ ಶಿವನ ತಾಯಿ ಲಕ್ಷ್ಮಿ ಕೆಲವು ಪುರಾಣಗಳ ಪ್ರಕಾರ. ತಾಯಿ ಲಕ್ಷ್ಮಿಯಂತೆಯೇ ಪತಿಯನ್ನು ಮಾನಿಸುವಳಾದ ಕಾರಣ ಪಾರ್ವತಿಯು ಉ-ಮೆಯಾದಳು. ಗುಣಲಕ್ಷಣಗಳಿಂದ ನಾವು ಕೆಲವೊಮ್ಮೆ ಲೋಕದಲ್ಲಿ ಥೇಟ್ ಅವರೇ ಎಂದು ವ್ಯವಹರಿಸುವ ರೀತಿಯಲ್ಲಿ. ಇನ್ನೊಂದು ಅರ್ಥ ಉ ಅಂದರೆ ತಪಸ್ಸು. ಮಗಳೇ ಇಷ್ಟು ಸಣ್ಣ ವಯಸ್ಸಿನಲ್ಲಿ ಇಷ್ಟು ಕಠೋರ ತಪ ಬೇಡ ಎಂದು ಅಮ್ಮ ಮಾ ಎಂದಳು. ಸಂಸ್ಕ್ರತದಲ್ಲಿ ಮಾ ಎಂದರೆ ಬೇಡವೆಂಬ ಅರ್ಥ ಇದೆ. ಹಾಗಾಗಿ ಅಮ್ಮನಿಂದ ತನ್ನ ತಪ ನಿರಾಕರಣೆ ಮಾಡಲ್ಪಟ್ಟ ಪಾರ್ವತಿಯು ಅಂದಿನಿಂದ ಉಮೆಯಾದಳು. ಅಮ್ಮನ ಮಾತು ಕೇಳದೆ ಶಿವನನ್ನು ಮೆಚ್ಚಿಸಿ ಕೈಹಿಡಿದಳು ಈಗಿನ ತರುಣಿಯರಂತೆ. ಇನ್ನೊಂದು ಅರ್ಥ ಅರಿಶಿಣ. ದೇವಪೂಜೆಗೆ ಉಪಯೋಗಿಸುವ ಹರಿದ್ರಾದ ಮತ್ತೊಂದು ಹೆಸರು ಉಮಾ. ಯಾರಾದರೂ ಉಮಾಂ ಸಮರ್ಪಯಾಮಿ ಎಂದರೆ ಗಾಬರಿಯಾಗದಿರಿ. ಕಪ್ಪು ಹೂವಿನ ಒಂದು ಕ್ಷುದ್ರ ವೃಕ್ಷವಾದ ಅತಸಿಯ ಪರ್ಯಾಯವೂ ಉಮಾ. ನಾವು ಸದಾ ಗಳಿಸಲು ಹೋರಾಡುವ ಕೀರ್ತಿಯೂ ಉಮಾ. ಮನಸ್ಸಮಾಧಾನದ ಸ್ಥಿತಿಯಲ್ಲಿ ನಮ್ಮ ಮೊಗ ತೋರುವ ಕಾಂತಿ ಹಾಗೂ ಒಳಗಿನ ಶಾಂತಿ ಇವೆರಡೂ ಉಮೆಯೇ ಆಗಿವೆ.ಉಮೆಯಂತೆ ತಪವನಾಚರಿಸಿದರೆ ನರೇಂದ್ರನ ಕಾಂತಿ ಹಾಗೂ ಮನಶ್ಶಾಂತಿ ಸಿಕ್ಕೀತು._
ಸಾಹಿತ್ಯದ ಹಲವೆಡೆ ಈ ಪದದ ಬಳಕೆ ಕಾಣಬಹುದು.
ಇಂದ್ರಮಾಣಿಕ ಬಿಗಿದ ಹೊಸ ಕುಂದಣದಾರತಿನೆತ್ತಿ
ಶಚಿದೇವಿ ಆರತಿನೆತ್ತಿ ಇಂದ್ರಾಧಿಪತಿಯ ಚರಣಕೆ
ಹೊನ್ನ ಹರಿವಾಣದಲಿ ಹೊಸ ಕುಂದಣದಾರತಿನೆತ್ತಿ
ಸೌಪರ್ಣಿ ಉಮಾದೇವಿ
ಉಮಾದೇವಿ ಆರತಿನೆತ್ತಿ ಬ್ರಹ್ಮಾಂಡ ಒಡೆದ ಚರಣಕೆ
ಇಂತು ಹಯವದನನ ಎಂತು ನಾ ಪೊಗಳುವೆ
ಸಂತೋಷದಿಂದ ಸುರರೆಲ್ಲ
ಸುರರೆಲ್ಲ ಪಾಡಿದರು ಕಾಂತೇರಿಗೆಲ್ಲಾತನುವೆಂದು(?)
ವಾದಿರಾಜರ ಈ ಪದ್ಯದಲ್ಲಿ ಹಯವದನನಿಗೆ ಉಮೆಯು ಆರತಿ ಎತ್ತಿದಳೆಂಬ ವರ್ಣನೆ ಇದೆ.
ಆ ಉಮೆ ನಮ್ಮನ್ನು ಮಾತೆಯಂತೆ ಪೊರೆಯಲೆಂದು ಸ್ತುತಿಸೋಣ.
ಸಂಗ್ರಹ. ಶ್ರೀನಿಧಿ ಅಭ್ಯಂಕರ್
ಎಲ್ಲಾ ಲೇಖನಗಳಿಗಾಗಿ ವೀಕ್ಷಿಸಿ http://shreenidhiabhyankar.blogspot.in/
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ