ರಾಮಾಯಣ ೧೨೧
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೧೨೧
*ಯಸ್ಯ ವಿಕ್ರಮಮಾಸಾದ್ಯ ರಾಕ್ಷಸಾ ನಿಧನಂ ಗತಾಃ ತಂ ಮನ್ಯೇ ರಾಘವಂ ವೀರಂ ನಾರಾಯಣಮನಾಮಯಮ್*
_ರಾವಣನ ಮಾತು. ಯಾರ ಭುಜಬಲದ ಎದುರು ಪ್ರಖ್ಯಾತ ರಾಕ್ಷಸರೆಲ್ಲರೂ ನಾಶವಾದರೋ ಅಂತಹ ವೀರನಾದ ರಘುಕುಲದಲ್ಲಿ ಜನಿಸಿದ ರಾಮನು ದೋಷರಹಿತನಾದ ನಾರಾಯಣನೆಂದೇ ನನಗೆ ತೋರುವುದು. ರಾವಣನಿಗೆ ಸಾವಿನ ಮುಂಚೆಯೇ ಭಗವಂತನ ಸ್ವರೂಪಜ್ಞಾನ ಬಂದಿತ್ತೆಂಬುದನ್ನು ಇಲ್ಲಿ ಗುರುತಿಸಬಹುದು. ಇಷ್ಟೆಲ್ಲಾ ಆದಮೇಲೆ ರಾವಣನು ತನ್ನ ಸೈನಿಕರಿಗೆ ರಾಜಧಾನಿಯನ್ನೂ ಸೀತೆ ಇರುವ ಅಶೋಕವನವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿ ಎಂದು ಆಜ್ಞಾಪಿಸುತ್ತಾನೆ._
*ದ್ರಷ್ಟವ್ಯಂ ಚ ಪದಂ ತೇಷಾಂ ವಾನರಾಣಾಂ ನಿಶಾಚರಾಃ ಪ್ರದೋಷೇ ವಾರ್ಧರಾತ್ರೇ ವಾ ಪ್ರತ್ಯೂಷೇ ವಾಪಿ ಸರ್ವತಃ*
_ರಾಜನು ಎಷ್ಟು ಜಾಗರೂಕತೆಯಿಂದ ವರ್ತಿಸಬೇಕೆಂದು ರಾವಣನ ಈ ಮಾತಿನಿಂದ ತಿಳಿಯಬಹುದು. ತನ್ನ ಸೇವಕರಿಗೆ ಯೋಧರಿಗೆ ಹೀಗೆ ಆದೇಶಿಸುತ್ತಾನೆ- ಸಂಜೆಯಾಗಲಿ, ಮಧ್ಯರಾತ್ರಿಯಾಗಲಿ, ಬೆಳಗಿನಜಾವವಾಗಲಿ ಮೈಯೆಲ್ಲಾ ಕಣ್ಣಾಗಿಸಿಕೊಂಡು ವಾನರರ ಪ್ರಯತ್ನವೇನೆಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಶತ್ರು ಸೈನ್ಯವು ಸನ್ನದ್ಧವಾಗಿದೆಯೇ, ನುಗ್ಗಿ ಬರುತ್ತಿದೆಯೇ, ಸುಮ್ಮನಿದೆಯೇ ಎಂಬುದನ್ನು ಕ್ಷಣಕ್ಷಣಕ್ಕೂ ಜಾಗರೂಕತೆಯಿಂದ ಪರಿಶೀಲಿಸಬೇಕು . ತನ್ನ ಬಲ ಮುಕ್ಕಾಲಿನಷ್ಟು ಕುಂದಿದರೂ ರಾಷ್ಟ್ರದ ರಕ್ಷಣೆಯ ಬಗೆಗೆ ಕಾಳಜಿವಹಿಸುವ ರಾವಣನ ರಾಜತನ ಇಲ್ಲಿ ಸೊಗಸಾಗಿದೆ. ಈಗಿನ ರಾಜರು ಶತ್ರು ಬಂದ ಮೇಲೆ ಎಚ್ಚೆತ್ತು ಆಕ್ರಮಣ ಸಂಧಾನ ಮೊದಲಾದವನ್ನು ಆರಂಭಿಸುತ್ತಾರೆ. ಆದರೆ ರಾವಣ ಹಾಗಲ್ಲ ಸದಾ ಜಾಗೃತ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ