ಚಾರುದತ್ತ 4
🔴ಚಾರುದತ್ತದ ಬೆಳಕು 4🔵
*दारिद्र्यात् पुरुषस्य बान्धवजनो वाक्ये न सन्तिष्ठते सत्वं हास्यमुपैति शीलशशिन: कान्ति: परिम्लायते । निर्वैरा विमुखीभवन्ति सुहृदः: स्फीता भवन्त्यापद: पापं कर्म च यत् परैरपि कृतं तत्तस्य सम्भाव्यते ।।*
_ ಕವಿ ಬಡತನದಿಂದ ಆಗುವ ಕಹಿ ಅನುಭವಗಳನ್ನು ನಾಯಕನ ಮೂಲಕ ವರ್ಣಿಸುವ ಮಾತು. ಸಿರಿತನ ಕಳೆದ ಮೇಲೆ ಬಂಧುಗಳು ನಮ್ಮ ಮಾತಿನಲ್ಲಿ ವಿಶ್ವಾಸ ಇಡುವುದಿಲ್ಲ. ನಮ್ಮ ತಾಳ್ಮೆ ಅಥವಾ ಶಕ್ತಿಯನ್ನು ಅಪಹಾಸ್ಯ ಮಾಡುತ್ತಾರೆ. ನಮ್ಮ ನಡತೆ ಎಂಬ ಚಂದಿರನ ಕಾಂತಿ ಕುಂದುತ್ತದೆ. ಬಹಳ ಆಪ್ತವಾಗಿ ಬೆರೆಯುತ್ತಿದ್ದ ಮಿತ್ರರೆಲ್ಲರೂ ದೂರವಾಗುತ್ತಾರೆ. ಆಪತ್ತುಗಳು ಮತ್ತೆ ಮತ್ತೆ ಎದುರಾಗುತ್ತವೆ. ಕಳ್ಳತನವೇ ಮೊದಲಾದ ಪಾಪದ ಕೆಲಸಗಳನ್ನು ನಮ್ಮ ತಲೆಗೇ ಕಟ್ಟಲು ಎಲ್ಲರೂ ಹವಣಿಸುತ್ತಾರೆ. ಹೀಗೆ ಕೆಟ್ಟ ಘಳಿಗೆಗಳು ಏಕಕಾಲದಲ್ಲಿ ನಮ್ಮನ್ನು ಹಿಂಡಿ ಹಿಪ್ಪೆ ಮಾಡುತ್ತವೆ._
ಸಂಗ್ರಹ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ