ಪದಸಂಪದ 14

📝📕ಪದ ಸಂಪದ ೧೪📕📝

*ನೀಲಾಂಬರ*

_ಹೆಸರು ಕೇಳಿದ ತಕ್ಷಣ  ಯಾವುದೋ  ಹೊಸ ಹೆಸರೆಂದು ಊಹಿಸಿದರೆ ನಿಮ್ಮ ಊಹೆ ತಪ್ಪು. ಬಲರಾಮನ ಹೆಸರು ಇದು. ಕಪ್ಪು ವಸ್ತ್ರ ಧರಿಸಿದ ಕಾರಣ ಈ ಹೆಸರು. ಸಾಮಾನ್ಯವಾಗಿ ಕಪ್ಪು ಬಟ್ಟೆ ಧರಿಸುವುದು ನಮ್ಮಲ್ಲಿ ನಿಷೇಧ. ಶಬರಿಮಲೆ ಯಾತ್ರೆಗೆ ಹೋಗುವವರು ಮಾತ್ರ ಧರಿಸುವುದು. ಇನ್ನು ಯಾರಾದರೂ ಸತ್ತರೆ ದು:ಖ ಸಂಕೇತವಾಗಿ ಕಪ್ಪು ವಸ್ತ್ರ ಉಡುವುದು. ಆದರೆ ಬಲರಾಮನು ಯಾಕೋ ಏನೋ ಕಪ್ಪು ವಸ್ತ್ರ ಧರಿಸುತ್ತಿದ್ದ. ಆದಿಶೇಷನ ಅವತಾರ ಕಾರಣವೋ ಏನೋ.  ಶನಿ ಹಾಗೂ ರಾಕ್ಷಸರ ಪರ್ಯಾಯವೂ ಹೌದಿದು. ಕಪ್ಪು ಹಾಗೂ ಕಡುನೀಲಿಗೂ ನೀಲವೆಂದೇ ಹೆಸರು._

ಸಂಸ್ಕೃತ ಹಾಗೂ ಕನ್ನಡ ಸಾಹಿತ್ಯದಲ್ಲಿ ನೋಡೋಣ.

ನೀಲಾಂಬರದ ಬೆಳ್ದಿಂಗಳಲಿ ತೇಲಾಡುತಿರೊ ಸೌಂದರ್ಯವು ನೀನೆ
ರಂಗೆರಿರುವ ಹೂದೋಟದಲಿ ತೂಗಾಡುತಿರೊ ಮಂದಾರವು ನೀನೆ || ೨
ಮೋಹಾಂಗನೆ ನೀನು ಆ... ರಾಗಾಂಗ್ಕಿತ ನಾನು
ಓ ಶೋಭನೆ ನೀಲಾಂಜನೆ ಅಭಿವಂದನೆ  ವಂದನೆ ....

ದೊಡ್ಡರಂಗೇಗೌಡ ರ ಈ ಪದ್ಯ ದಲಲಿ ನೀಲಾಗಸದ ವರ್ಣಿಸುವ ಮಾತು.

ಸಂಗ್ರಹ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು