ವಿಶಿಷ್ಟ ಶ್ಲೋಕಗಳು1

*ಸಂಸ್ಕೃತ ಸಾಹಿತ್ಯದ ಕೆಲವು ವಿಶಿಷ್ಟ ಶ್ಲೋಕಗಳು* ಭಾಗ 1

*असिजीवी मसिजीवी देवलो ग्रामयाचक: । धावको  पाचकश्चैतान् षड्विप्रान्नाभिवादयेत् ।।*

_ಯಾವ ವೃತ್ತಿಯನ್ನು ಆಶ್ರಯಿಸಿದ ಬ್ರಾಹ್ಮಣ ನಮಸ್ಕಾರಕ್ಕೆ ಯೋಗ್ಯನಲ್ಲ ಎಂದು ಇಲ್ಲಿ ಹೇಳಲಾಗಿದೆ. ಇದು ಒಂದು ಸ್ಮೃತಿಯ ಶ್ಲೋಕ.  ಖಡ್ಗದ ಬಳಕೆಯಿಂದ ಅಂದರೆ ಕಡಿಯುವ ಕಾಯಕ ಮರಗಿಡ ಅಥವಾ ಪಶು ಪಕ್ಷಿ ಮುಂತಾದ ಕಡಿಯುವಿಕೆಯಿಂದ ಜೀವನ ಸಾಗಿಸುವವನು, ಪರರ ಮಾತನ್ನು ಬರಹಕ್ಕೆ ಇಳಿಸಿ ಅದರ ಮೂಲಕ ಆದಾಯ ಪಡೆಯುವವನು,  ದೇವಾಲಯ ಸಂಬಂಧಿ ವಸ್ತುಗಳ ಬಳಕೆಯಿಂದ ಅಥವಾ ಕೇವಲ ಪೂಜೆಯಿಂದ ಜೀವಿಸುವವನು, ಒಂದೇ ಗ್ರಾಮದಲ್ಲಿ ನೆಲೆನಿಂತು ಭಿಕ್ಷೆ ಬೇಡಿ ಬದುಕು ಕಟ್ಟಿಕೊಳ್ಳುವ ವ್ಯಕ್ತಿ, ಪರರ ವಸ್ತೃಗಳನ್ನು ಸ್ವಚ್ಛಗೊಳಿಸುವ ಕಾಯಕದವನು, ಅಡಿಗೆಯೇ ಜೀವನದ ದಾರಿಯಾಗುಳ್ಳ ವ್ಯಕ್ತಿ ಇಷ್ಟು ಜನ ವಿಪ್ರರಾದರೂ ನಮಸ್ಕಾರಕ್ಕೆ ಯೋಗ್ಯರಲ್ಲ. ಹಿಂಸೆ ಮಾಡುವುದು, ತಾನು ಅಧ್ಯಯನ ನಡೆಸದೆ ಪರರ ಜ್ಞಾನದಿಂದ ಬದುಕು ನಡೆಸುವವನು, ದೇವರಿಗಾಗಿ ಬಂದ ವಸ್ತುಗಳಿಂದ ತನ್ನ ಜೀವನದ ದಾರಿ ಕಂಡುಕೊಂಡವನು, ಊರುರು ಸಂಚರಿಸದೇ ಮೋಹವನ್ನು ತಾಳಿ ಒಂದೇ ಕಡೆ ಭಿಕ್ಷೆ ಬೇಡಿ ಮೈಗಳ್ಳತನದ ಸ್ವಭಾವದವನು, ತನ್ನ ಬುದ್ಧಿಯನ್ನು ‌ಬಳಸದೇ ಹೀನವೃತ್ತಿ ಆಶ್ರಯಿಸಿದ ವ್ಯಕ್ತಿ, ನಿಯಮ ಮೀರಿ ನಡೆಯುವ ಪಾಚಕ ವೃತ್ತಿಯನ್ನು ಆಶ್ರಯಿಸಿದ ಜನ. ಇವರೆಲ್ಲರ ವಿಪ್ರತ್ವ ಕುಂದುವ ಕಾರಣ ನಮಸ್ಕಾರಕ್ಕೆ ಯೋಗ್ಯರಲ್ಲ ಎಂದು ಭಾವ._

ಸಂಗ್ರಹ ಶ್ರೀನಿಧಿ ಅಭ್ಯಂಕರ್

ಕಾಮೆಂಟ್‌ಗಳು