🌷🌷🌷🌷🌷🌷🌷🌷

*ಶಾಕುಂತಲದ ಒಂದು ಸುರಭಿ*

*ಕ್ಷಾಮಕ್ಷಾಮಕಪೋಲಮಾನನಮುರ: ಕಾಠಿಣ್ಯಮುಕ್ತಸ್ತನಂ ಮಧ್ಯ: ಕ್ಲಾಂತತರ: ಪ್ರಕಾಮವಿನತಾವಂಸೌ ಛವಿ: ಪಾಂಡುರಾ | ಶೋಚ್ಯಾ ಚ ಪ್ರಿಯದರ್ಶನಾ ಚ ಮದನಾಕ್ಲಿಷ್ಟೇಯಮಾಲಕ್ಷ್ಯತೇ ಪತ್ರಾಣಾಮಿವ ಶೋಷಣೇನ ಮರುತಾ ಸ್ಪೃಷ್ಟಾ ಲತಾ ಮಾಧವೀ||*

_ಶಕುಂತಲೆ ದುಷ್ಯಂತನನ್ನು ನೆನೆದು ನಿಟ್ಟುಸಿರುಬಿಡುತ್ತಿರುವಳು.ಯಾವ ವಿಷಯದಲ್ಲಿಯೂ ಆಸಕ್ತಿ ಇಲ್ಲ ಅವಳಿಗೆ. ಅದನ್ನು ನೋಡಿದ ದುಷ್ಯಂತನಾಡುವ ಮಾತು. ಶಕುಂತಲೆಯ ಗಲ್ಲಗಳು ಒಣಗಿ ಮುಖ ಕಾಂತಿಹೀನವಾಗಿದೆ. ಸ್ತನಗಳ ಬಿರುಸು ಇಲ್ಲದಂತಾಗಿದೆ. ಸೊಂಟ ಬಡವಾಗಿದೆ. ಹೆಗಲುಗಳು ತುಂಬಾ ಬಾಗಿವೆ.ದೇಹದ ಕಾಂತಿಯು ಬಿಳಿಬಣ್ಣಕ್ಕೆ ತಿರುಗಿದೆ. ಹೀಗೆ ಮದನನ ಬಾಧೆಗೆ ಒಳಗಾದ ಇವಳು ಗಾಳಿಯಿಂದ ಎಲೆಗಳುದುರಿದ ವಸಂತ ಋತುವಿನ ಬಳ್ಳಿಯಂತೆ ಶೋಚನೀಯಳೂ ಸುಂದರಿಯೂ ಆಗಿದ್ದಾಳೆ. ಪ್ರಿಯಕರನನ್ನೇ ನೆನೆಯುತ್ತಾ ಆಹಾರ ನಿದ್ರಾದಿಗಳನ್ನು ಬಿಟ್ಟ ಪರಿಣಾಮ ಗಲ್ಲಗಳು ತುಂಬಿಲ್ಲ.ಕಳಾಹೀನವಾಗಿವೆ.ಮನವು ಏನನ್ನೋ ಯೋಚಿಸುತ್ತಿರುವುದರಿಂದ ದೇಹವು ಸಹಜವಾಗಿಲ್ಲ.ಸ್ತನಗಳ ಬಿರುಸು ಕಡಿಮೆಯಾಗಿ ಉತ್ಸಾಹ ಕುಂದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಸದಾ ಅತ್ತಿತ್ತ ಓಲಾಡುವ ಕಟಿ ( ಸೊಂಟ) ಆಹಾರವಿಲ್ಲದೇ ಬಡವಾಗಿದೆ.( ಝೀರೋ ಸೈಝ್) ಕೈಗಳು ಯಾವ ಕಾರ್ಯವನ್ನೂ ಬಯಸದೇ ಇರುವ ಕಾರಣ ಹೆಗಲು ವಯಸ್ಸಾದವರಂತೆ ಜೋತುಬೀಳುತ್ತಿದೆ.ದೇಹದ ಯಾವಾಗಿನ ಬಂಗಾರದ ಕಾಂತಿಯು ಇಲ್ಲದೆ ಬಿಳಿಚಿಕೊಂಡಂತಿದೆ ಮೈ.( ಈಗಿನ ಜಾಹೀರಾತುಗಳು ಇದನ್ನೇ ಉತ್ತೇಜಿಸುತ್ತವೆ.) ಹೀಗೆ ಪ್ರಿಯನ ನೆನೆನೆನೆದು ಕಾಮನ ಪೀಡೆಗೆ ಒಳಗಾದ ಇವಳು ವಸಂತ ಋತುವಿನಲ್ಲಿ ಎಲೆಗಳೆಲ್ಲಾ ಉದುರಿ ಹೊಸದಾಗಿ ಚಿಗುರು ಮೂಡುತ್ತಿರುವ ಬಳ್ಳಿಯಂತೆ ಆಕರ್ಷಕಳೂ ದು:ಖದ ಕಾರಣ ಕಳೆಗುಂದಿದವಳೂ ಆಗಿದ್ದಾಳೆ. ಎಲೆ ಉದುರಿರುವ ಕಾರಣ ಬಳ್ಳಿ ಶೋಚನೀಯ. ಆದರೆ ಮುಂದೆ ಚಿಗುರುವುದು ಎನ್ನುವ ಭಾವ ಸೌಂದರ್ಯ ಕಾರಣ. ಶಕುಂತಲೆ ಸಹಜಸುಂದರಿ.ಈಗ ವಿರಹದ ಕಾರಣ ಸ್ವಲ್ಪ ಸೌಂದರ್ಯ ಕುಂದಿದೆ ಎಂಬ ಭಾವ ಕವಿಯದ್ದು. ಇಲ್ಲಿ ಹೆಣ್ಣು ದು:ಖಪಟ್ಟಾಗ ಉದುರಿದ ಎಲೆಗಳಿರುವ ಬಳ್ಳಿ, ಸಂತೋಷಗೊಂಟಾಗ ಮರವನ್ನಾಲಿಂಗಿಸಲು ಹೊರಟ ಹೊಸ ಚಿಗುರಿನ ಬಳ್ಳಿ.  ಸೊಂಟ ಆಯಾಸಗೊಂಡಿದೆ ಎಂಬ ಅರ್ಥವೂ ಸಾಧ್ಯ. ಇಲ್ಲಿ ಉಪಮಾಲಂಕಾರ. ಗಲ್ಲಗಳು ಬಾಡಿ ಹೆಗಲು ಕುಸಿದು ಸ್ತನಗಳು ಸಡಿಲವಾಗಿ ಸೊರಗಿದ ಶಕುಂತಲೆಯು ಮರುಕಪಡುವಂತಿದ್ದರೂ ಒಳಗಿನ ಪ್ರೇಮಭಾವದ ಕಾಂತಿಯಿಂದ ಇನ್ನೂ ಸುಂದರಳಾಗಿಯೇ ಇರುವಳು.ವಸಂತದ ಕಾಲದಲ್ಲಿ ಎಲೆಯುದುರಿ ಸ್ವಲ್ಪ ಸೊರಗಿ ಮತ್ತೆ ಚಿಗುರಲು ಸಿದ್ಧವಾದ ಮಾಧವೀಲತೆಯಂತೆ ಕಾಣುತ್ತಿರುವಳು. ಕಾಳಿದಾಸನ ಇಂತಹ ಉಪಮೆಗಳು ಅತ್ಯದ್ಭುತ. ಅವನಿಗೆ ಅವನೇ ಸಾಟಿ._


*ಸಂಗ್ರಹ📜✍ಶ್ರೀನಿಧಿ ಅಭ್ಯಂಕರ್*

🌷🌷🌷🌷🌷🌷🌷🌷

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩